ಅರಣ್ಯ ಇಲಾಖೆ: 774 ಅರಣ್ಯ ವೀಕ್ಷಕ ಹುದ್ದೆಗಳ ಭರ್ತಿ; ಅರ್ಜಿ ಅವಧಿ ಮತ್ತೊಮ್ಮೆ ವಿಸ್ತರಣೆ

ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಅರ್ಹತೆ

Published on:

Updated On:

ಕರ್ನಾಟಕ ಅರಣ್ಯ ಇಲಾಖೆಯ ನಾನಾ ವೃತ್ತದಲ್ಲಿ ಖಾಲಿ ಇರುವ ಗ್ರೂಪ್‌-ಡಿ ವೃಂದದ ಅರಣ್ಯ ವೀಕ್ಷಕ(ಫಾರೆಸ್ಟ್‌ ವಾಚರ್‌) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಅವಧಿಯನ್ನು ಮಗದೊಮ್ಮೆ ಅ.30ರವರೆಗೆ ವಿಸ್ತರಣೆಯಾಗಿದೆ.

ಪ್ರಸ್ತುತ 750 + 24 ಹಿಂಬಾಕಿ ಸ್ಥಾನಗಳು ಸೇರಿದಂತೆ ಒಟ್ಟು 774 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆ ಇರುವುದಿಲ್ಲ ಮೆರಿಟ್‌ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಅರ್ಹತಾ ಮಾನದಂಡ ಪೂರೈಸುವ ಅಭ್ಯರ್ಥಿಗಳು ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ https://aranya.gov.in/ದ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಿಯ ಓದುಗ ಮಿತ್ರರೇ, ವೃತ್ತವಾರು ಅಧಿಕೃತ ಅಧಿಸೂಚನೆಗಳು ಹಾಗೂ ಅರ್ಜಿ ಸಲ್ಲಿಕೆಯ ಲಿಂಕನ್ನು ಸುದ್ದಿನ ಕೊನೆಯಲ್ಲಿ “Important Direct Links” ಶೀರ್ಷಿಕೆಯಡಿ ಲಗತ್ತಿಸಲಾಗಿದೆ ತಪ್ಪದೇ ಕೊನೆವರೆಗೂ ಓದಿ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಆಗಸ್ಟ್‌ 01
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ – ಅಕ್ಟೋಬರ್‌ 30(ವಿಸ್ತರಣೆ)
Kfd Forest Watchers Online Application Form 2026 Last Date Extension Notice
ಕೊನೆದಿನಾಂಕ ವಿಸ್ತರಣೆಯ ನೋಟಿಸ್

ವೃತ್ತವಾರು ಹುದ್ದೆಗಳ ವಿವರ:

ಆರ್‌ಪಿಸಿ 700 ಸ್ಥಾನಗಳು ಹಾಗೂ ಕೆಕೆ 50 ಸ್ಥಾನಗಳು (ಹಿಂಬಾಕಿ ಹುದ್ದೆಗಳನ್ನು ಹೊರತುಪಡಿಸಿ.)

ವೃತ್ತಗಳ ಹೆಸರುಹುದ್ದೆಗಳ ಸಂಖ್ಯೆ
ಬೆಂಗಳೂರು ವೃತ್ತ80 +02* =82
ಕಲಬುರಗಿ ವೃತ್ತಕೆಕೆ 04 + 02* =06
ಚಾಮರಾಜನಗರ ವೃತ್ತ159
ಬಳ್ಳಾರಿ ವೃತ್ತಕೆಕೆ 46 + ಆರ್‌ಪಿಸಿ 17 = 63 + ಕೆಕೆ 01* =64
ಬೆಳಗಾವಿ ವೃತ್ತ42
ಚಿಕ್ಕಮಗಳೂರು ವೃತ್ತ56+04*= 60
ಧಾರವಾಡ ವೃತ್ತ12
ಹಾಸನ ವೃತ್ತ30+1* =31
ಮಂಗಳೂರು ವೃತ್ತ54
ಮೈಸೂರು ವೃತ್ತ120 +1* = 121
ಶಿವಮೊಗ್ಗ ವೃತ್ತ38+06* =44
ಕೊಡಗು ವೃತ್ತ32
ಕೆನರಾ ವೃತ್ತ(ಶಿರಸಿ)60+07*=67

* ಹಿಂಬಾಕಿ ಅಥವಾ ಬ್ಯಾಕ್‌ಲಾಗ್‌ ಹುದ್ದೆಗಳು

ಗಮನಿಸಿ: ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆ ಎಚ್ಚರಿಕೆಯಿಂದ ಓದಿ ಅರ್ಜಿ ಸಲ್ಲಿಕೆಗೆ ಮುಂದಾಗಿ.

ವಿದ್ಯಾರ್ಹತೆ:

31-08-2026ರಂತೆ; ಮಾನ್ಯತೆ ಪಡೆದ ಮಂಡಳಿಯಿಂದ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.

ವಯೋಮಿತಿ:

20-07-2026ರಂತೆ; ಕನಿಷ್ಠ 18 ವರ್ಷ

• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಹಿಂದುಳಿದ ಪ್ರವರ್ಗಗಳ ಅಭ್ಯರ್ಥಿಗಳಿಗೆ 32 ವರ್ಷ
• ಪ.ಜಾತಿ/ಪ.ಪಂಗಡ/ಪ್ರವರ್ಗ-1 ವರ್ಗದ ಅಭ್ಯರ್ಥಿಗಳಿಗೆ 33 ವರ್ಷ

ಈ ಮೇಲಿನ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one-time measure) 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಅರಣ್ಯ ಪ್ರೇರಕರಿಗೆ ವಯೋಮಿತಿ:

ಇಲಾಖೆಯಲ್ಲಿ ನಿರಂತರ ಕನಿಷ್ಠ 5 ವರ್ಷಗಳ ಸೇವೆಯನ್ನು ಅರಣ್ಯ ಪ್ರೇರಕರಾಗಿ ಪೂರೈಸಿದ್ದು, ಪ್ರಸ್ತುತ ಅರಣ್ಯ ಪ್ರೇರಕರಾಗಿ ಸೇವೆಯಲ್ಲಿ ಇದ್ದು ನಿಶ್ಚಿತ ಗೌರವಧನವನ್ನು ಪಡೆಯುತ್ತಿರುವ ಅರಣ್ಯ ಪ್ರೇರಕರಿಗೆ ಮಾತ್ರ ಈ ಕೆಳಗಿನ ಗರಿಷ್ಠ ವಯೋಮಿತಿ ಅನ್ವಯಿಸುತ್ತದೆ.

• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಹಿಂದುಳಿದ ಪ್ರವರ್ಗಗಳ ಅಭ್ಯರ್ಥಿಗಳಿಗೆ 42 ವರ್ಷ
• ಪ.ಜಾತಿ/ಪ.ಪಂಗಡ/ಪ್ರವರ್ಗ-1 ವರ್ಗದ ಅಭ್ಯರ್ಥಿಗಳಿಗೆ 43 ವರ್ಷ

ಆಯ್ಕೆ ಪ್ರಕ್ರಿಯೆ:

  • ಅರ್ಹತಾ ಪಟ್ಟಿ/ಮೆರಿಟ್‌ ಪಟ್ಟಿ(ಎಸ್ಸೆಸ್ಸೆಲ್ಸಿ ಅಂಕಗಳ ಆಧಾರದ ಮೇಲೆ)
  • ಶಾರೀರಿಕ ಮಾನದಂಡಗಳ ಪರೀಕ್ಷೆ(ಪಿಎಸ್‌ಟಿ)
  • ದೈಹಿಕ ತಾಳ್ವಿಕೆ ಪರೀಕ್ಷೆ(ಪಿಇಟಿ)
  • ದೈಹಿಕ ಕಾರ್ಯ ಸಮರ್ಥನೆ ಪರೀಕ್ಷೆ(ಪಿಇಟಿ)
Kfd Forest Watcher
ಶಾರೀರಿಕ ಮಾನದಂಡಗಳ ಪರೀಕ್ಷೆ
Kfd Forest Watcher
ದೈಹಿಕ ತಾಳ್ವಿಕೆ ಪರೀಕ್ಷೆ(ಪಿಇಟಿ)
Kfd Forest Watcher
ದೈಹಿಕ ಕಾರ್ಯ ಸಮರ್ಥನೆ ಪರೀಕ್ಷೆ

ವೇತನ ಶ್ರೇಣಿ:

ರೂ.29600-725-32500-800-35700-900-39300-1000-43300-1125-47800-1250-52800/-

ಅರ್ಜಿ ಶುಲ್ಕ:

• ಸಾಮಾನ್ಯ ಅರ್ಹತೆ, ಪ್ರವರ್ಗ ಎ, ಬಿ, ಎ ಮತ್ತು ಬಿ ಪ್ರವರ್ಗಗಳಿಗೆ ಸೇರಿದ ಪುರುಷ ಅಭ್ಯರ್ಥಿಗಳಿಗೆ ರೂ. 200/- ಹಾಗೂ ಮಹಿಳಾ/ತೃತೀಯ ಲಿಂಗ ಅಭ್ಯರ್ಥಿಗಳಿಗೆ ರೂ. 100/-

• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಪುರುಷ ಅಭ್ಯರ್ಥಿಗಳಿಗೆ ರೂ. 100/- ಹಾಗೂ ಮಹಿಳಾ/ತೃತೀಯ ಲಿಂಗ ಅಭ್ಯರ್ಥಿಗಳಿಗೆ ರೂ. 50/-

ಅರ್ಜಿ ಸಲ್ಲಿಕೆ ಹೇಗೆ.?

ಅಧಿಕೃತ ಜಾಲತಾಣ https://recruitment.aranya.gov.in/ಗೆ ಭೇಟಿ ನೀಡಿ. ನೋಂದಣಿಯಾಗಿ ಅರ್ಜಿ ನಮೂನೆ ಭರ್ತಿ ಮಾಡುವ ಮೂಲಕ ಆನ್‌ಲೈನ್‌ ಮೂಲಕ ಆರ್ಜಿ ಸಲ್ಲಿಸಬಹುದು.

Kfd Forest Watchers Online Application Form 2026 Window
KFD Forest Watchers Online Application Form 2026 Window

Important Direct Links:

ವೃತ್ತಗಳ ಹೆಸರುಅಧಿಸೂಚನೆ ಪಿಡಿಎಫ್‌ ಲಿಂಕ್‌ಗಳು
ಬೆಂಗಳೂರು ವೃತ್ತಡೌನ್ಲೋಡ್‌ ಮಾಡಿ
ಕಲಬುರಗಿ ವೃತ್ತಡೌನ್ಲೋಡ್‌ ಮಾಡಿ
ಚಾಮರಾಜನಗರ ವೃತ್ತಡೌನ್ಲೋಡ್‌ ಮಾಡಿ
ಬಳ್ಳಾರಿ ವೃತ್ತಡೌನ್ಲೋಡ್‌ ಮಾಡಿ
ಬೆಳಗಾವಿ ವೃತ್ತಡೌನ್ಲೋಡ್‌ ಮಾಡಿ
ಚಿಕ್ಕಮಗಳೂರು ವೃತ್ತಡೌನ್ಲೋಡ್‌ ಮಾಡಿ
ಧಾರವಾಡ ವೃತ್ತಡೌನ್ಲೋಡ್‌ ಮಾಡಿ
ಹಾಸನ ವೃತ್ತಡೌನ್ಲೋಡ್‌ ಮಾಡಿ
ಮಂಗಳೂರು ವೃತ್ತಡೌನ್ಲೋಡ್‌ ಮಾಡಿ
ಮೈಸೂರು ವೃತ್ತಡೌನ್ಲೋಡ್‌ ಮಾಡಿ
ಶಿವಮೊಗ್ಗ ವೃತ್ತಡೌನ್ಲೋಡ್‌ ಮಾಡಿ
ಕೊಡಗು ವೃತ್ತಡೌನ್ಲೋಡ್‌ ಮಾಡಿ
ಕೆನರಾ ವೃತ್ತ(ಶಿರಸಿ)ಡೌನ್ಲೋಡ್‌ ಮಾಡಿ
ಅರ್ಜಿ ಸಲ್ಲಿಕೆ ಕೊನೆದಿನಾಂಕ ವಿಸ್ತರಣೆ ಪ್ರಕಟಣೆ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
Online Application Form Link(ಅರ್ಜಿ ಸಲ್ಲಿಕೆ ಲಿಂಕ್‌)ಈಗಲೇ ರ್ಜಿ ಸಲ್ಲಿಸಿ
Official Websitearanya.gov.in
More UpdatesKarnatakahelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

16 thoughts on “ಅರಣ್ಯ ಇಲಾಖೆ: 774 ಅರಣ್ಯ ವೀಕ್ಷಕ ಹುದ್ದೆಗಳ ಭರ್ತಿ; ಅರ್ಜಿ ಅವಧಿ ಮತ್ತೊಮ್ಮೆ ವಿಸ್ತರಣೆ”

Leave a Comment