IBPS ಕ್ಲರ್ಕ್ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಕೆಗೆ ಬಿಡುವು

ಒಟ್ಟು 7306 ಸ್ಥಾನಗಳು

Published on:

Updated On:

ಮುಂಬೈ: ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(IBPS)ಯು 2026-27ನೇ ಸಾಲಿನ ಸಾಮಾನ್ಯ ನೇಮಕಾತಿ ಪ್ರಕ್ರಿಯೆ-16ರ ಮೂಲಕ ಗ್ರಾಹಕ ಸೇವಾ ಸಹವರ್ತಿ(ಕ್ಲರ್ಕ್) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ಆ.28ರವರೆಗೆ ವಿಸ್ತರಣೆ ಮಾಡಿದೆ.

ಸದರಿ ಪರೀಕ್ಷೆಯಲ್ಲಿ ಭಾಗವಹಿಸುವ ವಿವಿಧ ಬ್ಯಾಂಕುಗಳ ಒಟ್ಟು 7,306 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ.ಯಾವುದೇ ಪದವೀಧರ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ಜಾಲತಾಣ http://www.ibps.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಅರ್ಜಿ ಪ್ರಕ್ರಿಯೆ ಆರಂಭ ದಿನಾಂಕ -ಆಗಸ್ಟ್‌ 01
  • ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆ ದಿನಾಂಕ – ಆಗಸ್ಟ್‌ 28(ವಿಸ್ತರಣೆ)
  • ಪೂರ್ವಭಾವಿ ಪರೀಕ್ಷೆ ದಿನಾಂಕ – ಅಕ್ಟೋಬರ್‌ 2026
  • ಪೂರ್ವಾಭಾವಿ ಪರೀಕ್ಷೆಯ ಫಲಿತಾಂಶ – ನವೆಂಬರ್‌ 2026
  • ಮುಖ್ಯ ಪರೀಕ್ಷೆ ದಿನಾಂಕ – ಡಿಸೆಂಬರ್‌ 2026
  • ತಾತ್ಕಾಲಿಕ ಹಂಚಿಕೆ ಪಟ್ಟಿ – ಮಾರ್ಚ್‌ 2027

ಹುದ್ದೆಗಳ ವಿವರಗಳು:

  1. ಕೆನರಾ ಬ್ಯಾಂಕ್ (Canara Bank): 1,611 ಹುದ್ದೆಗಳು
  2. ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank): 1,283 ಹುದ್ದೆಗಳು
  3. ಬ್ಯಾಂಕ್ ಆಫ್ ಬರೋಡಾ (Bank of Baroda): 911 ಹುದ್ದೆಗಳು
  4. ಇಂಡಿಯನ್ ಬ್ಯಾಂಕ್ (Indian Bank): 881 ಹುದ್ದೆಗಳು
  5. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India): 819 ಹುದ್ದೆಗಳು
  6. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (Indian Overseas Bank): 431 ಹುದ್ದೆಗಳು
  7. ಬ್ಯಾಂಕ್ ಆಫ್ ಇಂಡಿಯಾ (Bank of India): 395 ಹುದ್ದೆಗಳು
  8. ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra): 389 ಹುದ್ದೆಗಳು
  9. ಪಂಜಾಬ್ ಆಂಡ್ ಸಿಂದ್ ಬ್ಯಾಂಕ್ (Punjab & Sind Bank): 344 ಹುದ್ದೆಗಳು
  10. ಯುಕೋ ಬ್ಯಾಂಕ್ (UCO Bank): 242 ಹುದ್ದೆಗಳು
  11. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India): ಈ ಬ್ಯಾಂಕ್‌ನ ಹುದ್ದೆಗಳ ವಿವರಗಳು ವರದಿಯಾಗಿಲ್ಲ(NR – Not Reported).

ಶೈಕ್ಷಣಿಕ ಅರ್ಹತೆ:

21-08-2026ರಂತೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು.

ವಯೋಮಿತಿ:

01-08-2026ರಂತೆ; ಕನಿಷ್ಠ 20 ರಿಂದ ಗರಿಷ್ಠ 28 ವರ್ಷಗಳ ವಯಸ್ಸಿನ ಮಿತಿ ಹೊಂದಿರಬೇಕು.

ನೇಮಕಾತಿ ನಿಯಮಗಳ ಪ್ರಕಾರ ವಿಶೇಷ ವರ್ಗಗಳಿಗೆ ವರ್ಗವಾರು ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LLPT)
  • ದಾಖಲಾತಿ ಪರಶೀಲನೆ

ಸಂಬಳ:

ಪ್ರಾರಂಭಿಕ ವೇತನ ಶ್ರೇಣಿ:- ₹24050-1340/3-28070-1650/3-33020-2000/4-41020-2340/7-57400-4400/1-61800-2680/1-64480/-

ಜೊತೆಗೆ ನಿಗದಿತ ಭತ್ಯೆಗಳ ಸೌಲಭ್ಯವಿರುತ್ತದೆ.

ಅರ್ಜಿ ಶುಲ್ಕ:

ಎಸ್ಸಿ,ಎಸ್ಟಿ,ಪಿಡಬ್ಲ್ಯೂಡಿ,ಇಎಸ್‌ಎಂ,ಡಿಇಎಸ್‌ಎಂ ಅಭ್ಯರ್ಥಿಗಳಿಗೆ ರೂ.175/-
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.850 /-

ಅರ್ಜಿ ಸಲ್ಲಿಸುವುದು ಹೇಗೆ..?

ಹಂತ-1 ಅಧಿಕೃತ ಲಿಂಕ್‌ಗೆ https://ibpsreg.ibps.in/csaxvijul26/ ಭೇಟಿ ನೀಡಿ.
ಹಂತ-2 ನಂತರ ಹೊಸ ಅಭ್ಯರ್ಥಿಗಳಾಗಿದ್ದಲ್ಲಿ, ನೋಂದಣಿ ಮಾಡಿಕೊಳ್ಳಿ.

Ibps Csa Xvi 2026
IBPS CSA (Clerk) XVI 2026 Online Form


ಹಂತ-3 ತದನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿ ತುಂಬಿ ಹಾಗೂ ದಾಖಲೆಗಳನ್ನು ಅಪ್ಲೋಡ್‌ ಮಾಡಿ.
ಹಂತ-4 ಮುಂದೆ ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

Important Direct Links:

Online Form Last Date Extension Notice PDF(Dated on 21/08/2026)Download
Official Detailed Notification PDF(Dated on 01/08/2026)Download
Official Short Notice PDFDownload
Online Application Form LinkApply Now
Official Websitewww.ibps.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

3 thoughts on “IBPS ಕ್ಲರ್ಕ್ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಕೆಗೆ ಬಿಡುವು”

Leave a Comment