ಕೆಪಿಎಸ್ಸಿ ಕೆಎಎಸ್‌ ನೇಮಕಾತಿ; ಅರ್ಜಿ ಅವಧಿ ವಿಸ್ತರಣೆ

Published on:

Updated On:

ಬೆಂಗಳೂರು: ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರ್(ಜಿಪಿ) ಗ್ರೂಪ್‌ ಎ, ಬಿ ವೃಂದದ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಅವಧಿಯನ್ನು ಸೆ.07ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೊಗದ ಕಾರ್ಯದರ್ಶಿ ಜ್ಯೋತಿ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರೂಪ್‌-ಎ 117 ಹಾಗೂ ಗ್ರೂಪ್‌-ಬಿ 202 ಸೇರಿದಂತೆ ಒಟ್ಟು 319(ಇದರಲ್ಲಿ ಆರ್‌ಪಿಸಿ 297, ಕೆಕೆ 22) ಸ್ಥಾನಗಳಿಗೆ ನಾನಾ ಹಂತದ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಆಯೋಗದ ಅಧಿಕೃತ ಜಾಲತಾಣ http://kpsc.kar.nic.in/Notificationಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸೂಚಿಸಿದ್ದಾರೆ.

ಈ ಹಿಂದೆ ಆ.01 ರಿಂದ 31ರವೆರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಮುಖ್ಯ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಆಗಸ್ಟ್‌ 01
  • ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ – ಸೆಪ್ಟೆಂಬರ್‌ 07(ವಿಸ್ತರಣೆ)
  • ಪೂರ್ವಭಾವಿ ಪರೀಕ್ಷಾ ದಿನಾಂಕ – ನವೆಂಬರ್‌ 15, 2026
  • ಮುಖ್ಯ ಪರೀಕ್ಷೆ ದಿನಾಂಕಗಳು – 12, 14, 16, 18 ಫೆಬ್ರವರಿ 2027
  • ವ್ಯಕ್ತಿತ್ವ ಪರೀಕ್ಷೆ ದಿನಾಂಕಗಳು – 2027ರ ಮೇ 05 ರಿಂದ 31ರವರೆಗೆ

ಹುದ್ದೆಗಳ ವಿವರ:

ಒಟ್ಟು ಗ್ರೂಪ್ ‘ಎ’ ಹುದ್ದೆಗಳ ವಿವರಗಳು:

ಸೇವಾ ವೃಂದದ ಹೆಸರು ಮತ್ತು ಇಲಾಖೆಯ ಹೆಸರುಆರ್‌ಪಿಸಿಕೆಕೆಒಟ್ಟು
ಸಹಾಯಕ ಆಯುಕ್ತರು (ಕಿರಿಯ ಶ್ರೇಣಿ), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ36339
ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ50050
ಸಹಾಯಕ ನಿರ್ದೇಶಕರು, ಖಜಾನೆ ಇಲಾಖೆ202
ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ13215
ಸಹಾಯಕ ನಿರ್ದೇಶಕರು ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ11011
ಒಟ್ಟು1125117

ಒಟ್ಟು ಗ್ರೂಪ್ ‘ಬಿ’ ಹುದ್ದೆಗಳ ವಿವರ:

ಸೇವಾ ವೃಂದದ ಹೆಸರು ಮತ್ತು ಇಲಾಖೆಯ ಹೆಸರುಆರ್‌ಪಿಸಿಕೆಕೆಒಟ್ಟು
ತಹಶೀಲ್ದಾರ್ (ಗ್ರೇಡ್-2), ಕಂದಾಯ ಇಲಾಖೆ18725
ವಾಣಿಜ್ಯ ತೆರಿಗೆ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ74074
ಸಹಾಯಕ ಅಧೀಕ್ಷಕರು, ಒಳಾಡಳಿತ ಇಲಾಖೆ (ಕಾರಾಗೃಹ)516
ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹಕಾರ ಇಲಾಖೆ19221
ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ (ಸಹಕಾರ ಇಲಾಖೆ)10212
ಅಬಕಾರಿ ಉಪ ಅಧೀಕ್ಷಕರು, ಆರ್ಥಿಕ ಇಲಾಖೆ (ಅಬಕಾರಿ ಇಲಾಖೆ)505
ಉದ್ಯೋಗಾಧಿಕಾರಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ303
ಮುಖ್ಯಾಧಿಕಾರಿ (ಗ್ರೇಡ್-1), ನಗರಾಭಿವೃದ್ಧಿ ಇಲಾಖೆ18220
ಸಹಾಯಕ ಖಜಾನಾಧಿಕಾರಿ, ಆರ್ಥಿಕ ಇಲಾಖೆ (ಖಜಾನೆ)12012
ಸಹಾಯಕ ನಿರ್ದೇಶಕರು, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ224
ಶಾಖಾಧಿಕಾರಿ, ಕರ್ನಾಟಕ ಸರ್ಕಾರದ ಸಚಿವಾಲಯ505
ಶಾಖಾಧಿಕಾರಿ, ಕರ್ನಾಟಕ ಲೋಕಸೇವಾ ಆಯೋಗ314
ಸಹಾಯಕ ನಿರ್ದೇಶಕರು (ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ11011
ಒಟ್ಟು18517202

ವಿದ್ಯಾರ್ಹತೆ:

ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ(Bachelor’s Degree) ಅಥವಾ ಸ್ನಾತಕೋತ್ತರ ಪದವಿ(Master’s Degree) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಅರ್ಹರು.

ವಯಸ್ಸಿನ ಮಿತಿ:

ಅರ್ಜಿ ಸಲ್ಲಿಕೆ ಕೊನೆದಿನಾಂಕಕ್ಕೆ; ಕನಿಷ್ಠ 21 ವರ್ಷ

  • ಸಾಮಾನ್ಯ ಅರ್ಹತೆಯಅಭ್ಯರ್ಥಿಗಳಿಗೆ 40 ವರ್ಷಗಳು
  • ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 43 ವರ್ಷಗಳು
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳು

ಗಮನಿಸಿ: ಸರ್ಕಾರದ ಆದೇಶದನ್ವಯ, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one-time measure) 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.

ಕೆಲವು ವಿಶೇಷ ಸಂದರ್ಭದಲ್ಲಿ ಅಂದರೆ ವಿಧವೆ, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಾಗಿದ್ದಲ್ಲಿ ಸರ್ಕಾರಿ ನೇಮಕಾತಿ ನಿಯಮಗಳಿಗನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ವ್ಯಕ್ತಿತ್ವ ಪರೀಕ್ಷೆ

ಸಂಬಳ:

ಸರ್ಕಾರಿ ನಿಯಮಗಳಂತೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ.600/-
ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.300/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ

Kpsc Kas 2026
ಕೆಪಿಎಸ್ಸಿ ಕೆಎಎಸ್‌ ನೇಮಕಾತಿ; ಅರ್ಜಿ ಅವಧಿ ವಿಸ್ತರಣೆ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ.?

ಅಭ್ಯರ್ಥಿಗಳು ಕೆಪಿಎಸ್‌ಸಿ ಅಧಿಕೃತ ಆನ್‌ಲೈನ್‌ ಪೋರ್ಟಲ್ನಲ್ಲಿ https://kpsconline.karnataka.gov.in/ ಒಟಿಆರ್‌ ನೋಂದಣಿ ಮಾಡಿಕೊಂಡು. ಅರ್ಜಿ ನಮೂನೆ ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

Important Direct Links:

Online Application Form Last Date Extension Notice PDF Dated on 31/08/2026Download
Official Notification PDFDownload
Online Application Form LinkApply Now
Official Websitekpsc.kar.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment