ಇಸ್ರೋ ಯುಆರ್‌ಎಸ್‌ಸಿನಲ್ಲಿ ಅಪ್ರೆಂಟಿಸ್‌ಶಿಪ್

Published on:

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಅಂಗಸಂಸ್ಥೆಯಾಗಿರುವ ಯು.ಆರ್.ರಾವ್ ಉಪಗ್ರಹ ಕೇಂದ್ರ(ಯುಆರ್‌ಎಸ್‌ಸಿ)ದಲ್ಲಿ ಪದವೀಧರ ಹಾಗೂ ಟೆಕ್ನಿಷಿಯನ್‌ ಅಪ್ರೆಂಟಿಸ್‌ಶಿಪ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 410 ಸ್ಥಾನಗಳಿಗೆ(ಪದವೀಧರ ಅಪ್ರೆಂಟಿಸ್‌ 220 , ಟೆಕ್ನಿಷಿಯನ್‌ ಅಪ್ರೆಂಟಿಸ್‌ 120, ಕಮರ್ಷಿಯಲ್‌ ಪ್ರಾಕ್ಟಿಸ್‌ 70) ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ಒಂದು ವರ್ಷಗಳ ತರಬೇತಿ ನೀಡಲಿದೆ. ತರಬೇತಿ ಸಮಯದಲ್ಲಿ ಅಭ್ಯರ್ಥಿಗಳಿಗೆ ನಿಗದಿತ ಸ್ಟೈಫಂಡ್‌ ದೊರಕಲಿದೆ. ಆಯಾ ಸಂಬಂಧಿತ ವಿಭಾಗದಲ್ಲಿ ಬಿಎ, ಬಿ.ಟೆಕ್‌ ಅಥವಾ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://nats.education.gov.in/student_type.php ಹಾಗೂ https://web.umang.gov.in/landing/ಕ್ಕೆ ಭೇಟಿ ನೀಡಿ ಆ.28ರೊಳಗೆ ಅರ್ಜಿ ಸಲ್ಲಿಸಬಹುದು.

ಮುಖ್ಯ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜುಲೈ 29
  • ಅರ್ಜಿ ಸಲ್ಲಿಸಲು ಕೊನೆದಿನಾಂಕ – ಆಗಸ್ಟ್‌ 28

ಶೈಕ್ಷಣಿಕ ಅರ್ಹತೆ:

ಪದವೀಧರ ಅಪ್ರೆಂಟಿಸ್‌ಗಳಿಗೆ; ಸಂಬಂಧಿತ ವಿಭಾಗದಲ್ಲಿ ಬಿ.ಇ ಅಥವಾ ಬಿ.ಟೆಕ್‌ ಪದವಿ ಹೊಂದಿರಬೇಕು.

ಟೆಕ್ನಿಷಿಯನ್‌ ಅಪ್ರೆಂಟಿಸ್‌ಗಳಿಗೆ; ಸಂಬಂಧಿತ ವಿಷಯ/ವಿಭಾಗದಲ್ಲಿ ಡಿಪ್ಲೊಮಾ ಅರ್ಹತೆ.

ಕಮರ್ಷಿಯಲ್‌ ಪ್ರ್ಯಾಕ್ಟಿಸ್‌ ಅಪ್ರೆಂಟಿಸ್‌ಗಳಿಗೆ; ಡಿಪ್ಲೊಮಾ ಇನ್‌ ಕಮರ್ಷಿಯಲ್‌ ಪ್ರ್ಯಾಕ್ಟಿಸ್.‌

ವಯೋಮಿತಿ:

ಸಂಸ್ಥೆಯ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

  • ಶಾರ್ಟ್‌ಲಿಸ್ಟ್‌
  • ದಾಖಲಾತಿ ಪರಿಶೀಲನೆ

ಸ್ಟೈಫಂಡ್:

ಪದವೀಧರ ಅಪ್ರೆಂಟಿಸ್‌ಗಳಿಗೆ; ₹12,300/-
ಟೆಕ್ನಿಷಿಯನ್‌/ಕಮರ್ಷಿಯಲ್‌ ಪ್ರ್ಯಾಕ್ಟಿಸ್‌ ಅಪ್ರೆಂಟಿಸ್‌ಗಳಿಗೆ; ₹10,900/-

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ.?

ಅರ್ಹ ಆಸಕ್ತ ಅಭ್ಯರ್ಥಿಗಳು ಮೊದಲು ರಾಷ್ಟ್ರೀಯ ಶಿಷ್ಯವೃತ್ತಿ ತರಬೇತಿ ಯೋಜನೆ (NATS)ಯ ಪೋರ್ಟಲ್‌ https://nats.education.gov.in/student_type.phpನಲ್ಲಿ ನೋಂದಣಿಯಾಬೇಕು. ನಂತರ UMANG ಪೋರ್ಟಲ್‌ https://web.umang.gov.in/landing/ನ ಮೂಲಕ ಅರ್ಜಿ ಸಲ್ಲಿಸಬೇಕು.

Important Direct Links:

Official Notification PDFDownload
NATS Online Application Form Link Step-1Register Now
UMANG Online Application Form Link Step-2Apply Now
Official Websitewww.isro.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

2 thoughts on “ಇಸ್ರೋ ಯುಆರ್‌ಎಸ್‌ಸಿನಲ್ಲಿ ಅಪ್ರೆಂಟಿಸ್‌ಶಿಪ್”

Leave a Comment