ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಅಡಿಯಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದರೆ, ಸಲ್ಲಿಸಿರುವ ಅರ್ಜಿಯ ಸ್ಥಿತಿಯನ್ನು ಅಧಿಕೃತ ಜಾಲತಾಣ www.samrakshane.karnataka.gov.inದ ಮೂಲಕ ಹೇಗೆ ಪರಿಶೀಲನೆ ಮಾಡಬಹುದು ಎಂದು ಹಂತ-ಹಂತವಾಗಿ ಇಲ್ಲಿ ವಿವರಿಸಲಾಗಿದೆ.
ಚುಟುಕು ಮಾಹಿತಿ: ನೈಸರ್ಗಿಕವಾಗಿ ಪ್ರಕೃತಿ ವಿಕೋಪ ಹಾಗೂ ರೋಗ ಬಾದೆಗಳಿಂದ ಉಂಟಾಗುವ ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ರಕ್ಷಣೆ ಒದಗಿಸುವ ಬೆಳೆ ವಿಮಾ ಯೋಜನೆಯಾಗಿದೆ.
Step by Step to Check Crop Insurance Status
ಬೆಳೆ ವಿಮೆ ಅರ್ಜಿ ಸ್ಥಿತಿ ಪರಿಶೀಲಿಸುವ ವಿಧಾನ;
- ಕರ್ನಾಟಕ ಸರ್ಕಾರದ ಸಂರಕ್ಷಣೆ ಅಧಿಕೃತ ವೆಬ್ ಸೈಟ್ https://www.samrakshane.karnataka.gov.in/ಗೆ ಭೇಟಿ ನೀಡಿ.

- ಮುಂದೆ/GO ಲಿಂಕ್ ಮೇಲೆ ಕ್ಲಿಕ್ ಮಾಡಿ.

- ಮುಖಪುಟದಲ್ಲಿ ಕಾಣುವ ರೈತರು ವಿಭಾಗ(Farmers)ದ ಕೆಳಗೆ ಸ್ಥಿತಿ ಪರಿಶೀಲಿಸಿ/Check Status ಲಿಂಕ್ ಮೇಲೆ ಟ್ಯಾಪ್ ಮಾಡಿ.

- ಅರ್ಜಿ ಸಂಖ್ಯೆ/Application No ಹಾಗೂ ಕ್ಯಾಪ್ಚ/Captcha ನಮೂದಿಸಿ ಹುಡುಕಿ/Search ಮೇಲೆ ಒತ್ತಿ.
- ನಂತರ ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿಯ ಸಂಪೂರ್ಣ ಮಾಹಿತಿ ನಿಮ್ಮ ಪರದೆಯ ಮೇಲೆ ಕಾಣಸಿಗುತ್ತದೆ.
How to Check Crop Insurance Detail On Survey No.?
ಸರ್ವೇ ಸಂಖ್ಯೆಯಲ್ಲಿರುವ ಬೆಳೆ ವಿಮೆ ವಿವರ ನೋಡುವ ವಿಧಾನ;
- ಕರ್ನಾಟಕ ಸರ್ಕಾರದ ಸಂರಕ್ಷಣೆ ಅಧಿಕೃತ ವೆಬ್ ಸೈಟ್ https://www.samrakshane.karnataka.gov.in/ಗೆ ಭೇಟಿ ನೀಡಿ.
- ಮುಂದೆ/GO ಲಿಂಕ್ ಮೇಲೆ ಕ್ಲಿಕ್ ಮಾಡಿ.

- ಮುಖಪುಟದಲ್ಲಿ ಕಾಣುವ ರೈತರು ವಿಭಾಗದ ಕೆಳಗೆ ಸರ್ವೇ ಸಂಖ್ಯೆಯಲ್ಲಿರುವ ಬೆಳೆ ವಿಮೆ ವಿವರ/Crop Insurance Detail On Survey No. ಲಿಂಕ್ ಮೇಲೆ ಕ್ಲಿಕ್ ಮಾಡಿ.

- ನಂತರ ಪರದೆಯ ಮೇಲೆ ಕಾಣುವ ವಿಭಾಗಗಳಲ್ಲಿ ನಿಮ್ಮ ಜಿಲ್ಲೆ(District) ತಾಲೂಕು(Taluk), ಹೋಬಳಿ(Hobli), ಗ್ರಾಮ(Village) ಹಾಗೂ ಸರ್ವೆ ನಂಬರ್(Survey No.) ಅನ್ನು ನಮೂದಿಸಿ ಹುಡುಕು/Search ಮೇಲೆ ಒತ್ತಿ.
- ಸರ್ವೇ ಸಂಖ್ಯೆಯಲ್ಲಿರುವ ನಿಮ್ಮ ಬೆಳೆ ವಿಮೆ ವಿವರ ಪರದೆಯ ಮೇಲೆ ಕಾಣುತ್ತದೆ.
- ಅಗತ್ಯವಿದ್ದರೆ ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸ್ಥಿತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಬಂಧುಗಳೇ: ಈ ಮಾಹಿತಿ ನಿಮಗೆ ಸ್ವಲ್ಪವಾದರೂ ಸಹಾಯವಾಗಿದ್ದರೆ, ಇತರರಿಗೂ ಶೇರ್ ಮಾಡಿ ಅವರಿಗೂ ಈ ಮಾಹಿತಿ ತಿಳಿಸಿ.
Important Direct Links:
Crop Insurance Status Check Link | Check Now |
Crop Insurance Detail On Survey No. Check Link | Check Now |
More Updates | KarnatakaHelp.in |