ಕೇಂದ್ರ ಪೊಲೀಸ್ ರಿಸರ್ವ್ ಫೋರ್ಸ್ (CRPF), ಸಿಬ್ಬಂದಿ ಆಯ್ಕೆ ಆಯೋಗವು (SSC) GD ಕಾನ್ಸ್‌ಟೇಬಲ್ ನೇಮಕಾತಿಗೆ ಸಂಬಂಧಿಸಿದ PET ಮತ್ತು PST ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಕೇಂದ್ರ ಪೊಲೀಸ್ ರಿಸರ್ವ್ ಫೋರ್ಸ್, ಸಿಬ್ಬಂದಿ ಆಯ್ಕೆ ಆಯೋಗವು ಜನರಲ್ ಡ್ಯೂಟಿ ಕಾನ್ಸ್‌ಟೇಬಲ್ (GD) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿತ್ತು. ಈ ನೇಮಕಾತಿಯಲ್ಲಿ ಒಟ್ಟು 46,617 ಹುದ್ದೆಗಳ ಬೃಹತ್ ನೇಮಕಾತಿ ಮಾಡಿಕೊಳ್ಳಗುತ್ತೇದೆ. ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 23 ರಿಂದ ನವೆಂಬರ್ 8ರ ವರೆಗೆ ದೈಹಿಕ ಪರೀಕ್ಷೆಯು ನಡೆಯಲಿದೆ. ಹಾಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ. ಪ್ರವೇಶ ಪತ್ರದಲ್ಲಿ ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಜಾರಾಗಬೇಕಾದ ದಿನಾಂಕ ಮತ್ತು ಸ್ಥಳದ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ಪರೀಕ್ಷಗೆ ಪ್ರವೇಶ ಪತ್ರ ಕಡ್ಡಾಯವಾಗಿದೆ.
ಪರೀಕ್ಷೆಗೆ ನೊಂದಯಿಸಿಕೊಂಡಿರುವ ಅಭ್ಯರ್ಥಿಗಳು ಪ್ರವೇಶ ಪತ್ರದ PDF ಡೌನ್‌ಲೋಡ್ ಮಾಡಲು SSC ಅಧಿಕೃತ ವೆಬ್ ಸೈಟ್ ಗೆ ssc.gov.in ಭೇಟಿ ನೀಡಿ, ತಮ್ಮ ಲಾಗ್ ಇನ್ ರುಜುವಾತುಗಳನ್ನು ನಮೂದಿಸುವ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಲೇಖನದಲ್ಲಿ SSC GD PET PST Admit Card ಡೌನ್‌ಲೋಡ್ ಮಾಡುವುದು ಹೇಗೆ ಎಂಬುದರ ಕುರಿತಿ ಹೆಚ್ಚಿನ ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ.
Crpf Ssc Gd Pet Pst Admit Card 2024
ಪ್ರಮುಖ ದಿನಾಂಕಗಳು:
PET ಮತ್ತು PST ಪರೀಕ್ಷೆ ನಡೆಯುವ ದಿನಾಂಕ – ಸೆಪ್ಟೆಂಬರ್ 23 ರಿಂದ ನವೆಂಬರ್ 8ರ ವರೆಗೆ
How to Download SSC GD PET PST Admit Card 2024
ಅನ್ ಲೈನ್ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ …?
ಮೊದಲಿಗೆ ಅಧಿಕೃತ ವೆಬ್ ಸೈಟ್ https://rect.crpf.gov.in/ ಗೆ ಭೇಟಿ ನೀಡಿ.
ಮುಖಪುಟದಲ್ಲಿ ಕಾಣುವ Admit Card ವಿಭಾಗ ಆಯ್ಕೆ ಮಾಡಿ.
ನಂತರ SSC GD PET PST Admit Card 2024 ಆಯ್ಕೆ ಮಾಡಿ.
ನಿಮ್ಮ ಲಾಗ್ ಇನ್ ರುಜುವಾತುಗಳನ್ನು ನಮೂದಿಸಿ.
ಪ್ರವೇಶ ಪತ್ರದ PDF ನಿಮ್ಮ ಪೋನ್ ಪರೆದಯ ಮೇಲೆ ಕಾಣಿಸಿಕೊಳ್ಳತ್ತೇದೆ.