WhatsApp Channel Join Now
Telegram Group Join Now

JCI Recruitment 2024: ಅಕೌಂಟೆಂಟ್, ಜೂನಿಯರ್ ಅಸಿಸ್ಟೆಂಟ್, ಜೂನಿಯರ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ

ದಿ ಜೂಟ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (JCI) ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ  ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಜೂಟ್ ಕಾರ್ಪೊರೇಷನ್ ಆಫ್ ಇಂಡಿಯಾ (JCI) ನಲ್ಲಿ‌ ಖಾಲಿ ಇರುವ ಅಕೌಂಟೆಂಟ್, ಜೂನಿಯರ್ ಅಸಿಸ್ಟೆಂಟ್ ಮತ್ತು ಜೂನಿಯರ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ನೇಮಕಾತಿಯಲ್ಲಿ‌ ಒಟ್ಟು 90‌ ಹುದ್ದೆಗಳಿಗೆ ಅರ್ಜಿ‌ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ (CBT) ಮತ್ತು ದಾಖಲೆ ಪರಿಶೀಲನೆಯ‌ ಮೂಲಕ ಆಯ್ಕೆ ಮಾಡಲಾಗುತ್ತದೆ. ಹುದ್ದೆಗಳ ಅನುಸಾರವಾಗಿ ವಿದ್ಯಾರ್ಹತೆಯು ಬದಲಾವಣೆ ಅಗುತ್ತೇದೆ‌, ಮತ್ತು ಕನಿಷ್ಟ ವರ್ಷಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ನಿರ್ವವಸಿದ ಅನುಭವ ಇರಬೇಕು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತದಾದ್ಯಂತ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತದೆ. ಹುದ್ದೆಗಳ ಅನುಸಾರ ವೇತನ ಶ್ರೇಣಿಯನ್ನು ನಿಗದಿ‌ ಪಡಿಸಲಾಗಿದೆ.

ಜೂಟ್ ಕಾರ್ಪೊರೇಷನ್ ಆಫ್ ಇಂಡಿಯಾ (JCI) 2024ರ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು JCI ನ ಅಧಿಕೃತ ವೆಬ್ ಸೈಟ್ www.jutecorp.in ಭೇಟಿ ನೀಡುವ ಮೂಲಕ ಸೆಪ್ಟೆಂಬರ್ 30 ರ ಒಳಗೆ  ಅರ್ಜಿಯನ್ನು ಸಲ್ಲಿಸಬಹುದು. ಈ ಲೇಖನದಲ್ಲಿ JCI Recruitment 2024 ಕುರಿತು ಹೆಚ್ಚಿನ ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ.

Jci Recruitment 2024
Jci Recruitment 2024

Shortview of JCI Notification 2024

Organization Name – The Jute Corporation of India Limited
Post Name – Accountant, Junior Assistant, Junior Inspector
Total Vacancy – 90
Application Process – Online
Job Location – All Over India

ಜೂಟ್ ಕಾರ್ಪೊರೇಷನ್ ಆಫ್ ಇಂಡಿಯಾ (JCI) 2024 ನೇಮಕಾತಿಯ ಪ್ರಮುಖ ‌ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಸೆಪ್ಟೆಂಬರ್ ‌10, 2024
  • ಅರ್ಜಿ ಸಲ್ಲಿಸಲು ಕೊನಯ ದಿನಾಂಕ –  ಸೆಪ್ಟೆಂಬರ್ ‌30, 2024

ಖಾಲಿ‌ ಇರುವ ಹುದ್ದೆಗಳ ವಿವರ:

ಅಕೌಂಟೆಂಟ್ – 23
ಜೂನಿಯರ್ ಅಸಿಸ್ಟೆಂಟ್ -25
ಜೂನಿಯರ್ ಇನ್ಸ್‌ಪೆಕ್ಟರ್ – 42

ವಿದ್ಯಾರ್ಹತೆ:

  • ಅಕೌಂಟೆಂಟ್ ಹುದ್ದೆಗಳಿಗೆ – M.com/B.com  ಪದವಿಯ ಜೊತೆಗೆ (ಅಡ್ವಾನ್ಸ್ಡ್ ಅಕೌಂಟೆನ್ಸಿ ಮತ್ತು ಆಡಿಟಿಂಗ್ ವಿಶೇಷ ವಿಷಯವಾಗಿ) ಸಂಬಂಧಿಸಿದ ಕ್ಷೇತ್ರದಲ್ಲಿ 7 ವರ್ಷಗಳ ಅನುಭವ ಹೊಂದಿರಬೇಕು.
  • ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ – ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ (ಕಂಪ್ಯೂಟರ್ ಜ್ಞಾನ ಮತ್ತು MS Word & Excel) ಮತ್ತು ಕನಿಷ್ಠ ಟೈಪಿಂಗ್ ವೇಗವು ಇಂಗ್ಲಿಷ್‌ನಲ್ಲಿ 40 wpm ನಲ್ಲಿ ಇರಬೇಕು.
  • ಜೂನಿಯರ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ – 10 + 2 ಅಥವಾ ತತ್ಸಮಾನ ಜೊತೆಗೆ 3 ವರ್ಷಗಳ ಕಚ್ಚಾ ಸೆಣಬಿನ ಖರೀದಿ/ಮಾರಾಟದಲ್ಲಿ ಅನುಭವ‌ ಇರಬೇಕು.

ವಯೋಮಿತಿ:

ಜೂಟ್ ಕಾರ್ಪೊರೇಷನ್ ಆಫ್ ಇಂಡಿಯಾ (JCI) ನೇಮಕಾತಿ ಅಧಿಸೂಚನೆಯ ಪ್ರಕಾರ ಗರಿಷ್ಠ 30 ವರ್ಷಗಳ ಒಳಗೆ ಇರಬೇಕು.

ಆಯ್ಕೆ ‌ಪ್ರಕ್ರಿಯೆ:

  • ಲೆಕ್ಕಪರಿಶೋಧಕ ಹುದ್ದೆಗಳಿಗೆ – ಆನ್‌ಲೈನ್ ಪರೀಕ್ಷೆ (CBT), ದಾಖಲೆ ಪರಿಶೀಲನೆ.
  • ಕಿರಿಯ ಸಹಾಯಕ ಹುದ್ದೆಗಳಿಗೆ – ಆನ್‌ಲೈನ್ ಪರೀಕ್ಷೆ (CBT), ಟೈಪಿಂಗ್ ಪರೀಕ್ಷೆ, ದಾಖಲೆ ಪರಿಶೀಲನೆ.
  • ಜೂನಿಯರ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ – ಆನ್‌ಲೈನ್ ಪರೀಕ್ಷೆ (CBT), ದಾಖಲೆ ಪರಿಶೀಲನೆ, ವ್ಯಾಪಾರ ಪರೀಕ್ಷೆ.

ವೇತನ ವಿವರ:

ಲೆಕ್ಕಪರಿಶೋಧಕ – ₹ 28,600 ರಿಂದ 1,15,000/-
ಕಿರಿಯ ಸಹಾಯಕ – ₹ 21,500 ರಿಂದ 86,500/-
ಜೂನಿಯರ್ ಇನ್ಸ್‌ಪೆಕ್ಟರ್ – ₹ 21,500 ರಿಂದ 86,500/-

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ – ₹250/-
  • SC/ ST/ PwBD ಅಭ್ಯರ್ಥಿಗಳಿಗೆ – ಶೂನ್ಯ (ವಿನಾಯಿತಿ ನೀಡಲಾಗಿದೆ)

How to Apply for JCI Recruitment 2024

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ…?

  • ಮೊದಲಿಗೆ JCI ಅಧಿಕೃತ ವೆಬ್ ಸೈಟ್ www.jutecorp.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ “Careers” ವಿಭಾಗದಲ್ಲಿ “JCI Recruitment 2024” ಲಿಂಕ್ ಕ್ಲಿಕ್ ಮಾಡಿ.
  • ನಂತರ ಹೊಸ ವಬ್ ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ ಲಾಗ್ ಇನ್ ಮಾಡಲು ಅಗತ್ಯ ದೂರವಾಣಿ ಸಂಖ್ಯೆ ಮತ್ತು ಇ‌-ಮೇಲ್ ವಿಳಾಸ ನಮೂದಿಸಿ.
  • ಅರ್ಜಿ‌ ನಮೂನೆ ತರೆದು ಕೊಳ್ಳತ್ತೇದೆ‌ ಅಲ್ಲಿ ಕೇಳಾಗುವ ಎಲ್ಲಾ ವಿವರಗಳನ್ನು ಭರ್ತಿ‌ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿ.
  • ಕೊನೆಯದಾಗಿ ಅರ್ಜಿಯನ್ನು‌ ಸಲ್ಲಿಸಿ.

Important Direct Links:

Official Notification PDFDownload
Online Application Form LinkRegistration // Login
Official Websitewww.jutecorp.in
More UpdatesKarnataka Help.in

Leave a Comment