NCLನಲ್ಲಿ ಆಪರೇಟರ್, ಅರೆವೈದ್ಯಕೀಯ ಸಿಬ್ಬಂದಿ, ಟೆಕ್ನಿಷಿಯನ್ ಹುದ್ದೆಗಳ ಭರ್ತಿ

Published on:

ಮಧ್ಯಪ್ರದೇಶ: ಕೋಲ್‌ ಇಂಡಿಯಾದ ಅಂಗಸಂಸ್ಥೆಯಾಗಿರುವ ನಾರ್ದರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

472 HEMM ಆಪರೇಟರ್, 75 ಅರೆವೈದ್ಯಕೀಯ ಸಿಬ್ಬಂದಿ ಹಾಗೂ 30 ಮೇಲ್ವಿಚಾರಕ ಸೇರಿದಂತೆ ಒಟ್ಟು 577 ಹುದ್ದೆಗಳ ಭರ್ತಿ ನಡೆಯಲಿದ್ದು, ಎಸ್.ಎಸ್.ಎಲ್.ಸಿ, ಪದವಿ ಮತ್ತು ಡಿಪ್ಲೋಮಾ ಪೂರ್ಣಗೊಳಿಸಿರುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಮೇ 01 ರೊಳಗೆ ಎನ್‌ಸಿಎಲ್‌ ಅಧಿಕೃತ ವೆಬ್ಸೈಟ್ https://www.nclcil.in/data-listing/pages/recruitmentಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಆನ್ಲೈನ್ ಮೂಲಕ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಏಪ್ರಿಲ್ 09, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮೇ 01, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮೇ 01, 2026

ಖಾಲಿ ಇರುವ ಹುದ್ದೆಗಳ ವಿವರ:

ಡಂಪರ್ ಆಪರೇಟರ್ 308 ಹುದ್ದೆಗಳು
ಗ್ರೇಡರ್ ಆಪರೇಟರ್ 34 ಹುದ್ದೆಗಳು
ಡೋಜರ್ ಆಪರೇಟರ್ 52 ಹುದ್ದೆಗಳು
ಕ್ರೇನ್ 4 ಆಪರೇಟರ್ 17 ಹುದ್ದೆಗಳು
ಪೇ ಲೋಡರ್ ಆಪರೇಟರ್ 18 ಹುದ್ದೆಗಳು
ಸರ್ಫೇಸ್ ಮೈನರ್ ಆಪರೇಟರ್ 43 ಹುದ್ದೆಗಳು
ಸ್ಟಾಫ್ ನರ್ಸ್ 47 ಹುದ್ದೆಗಳು
ಫಾರ್ಮಸಿಸ್ಟ್ 04 ಹುದ್ದೆಗಳು
ಟೆಕ್ನಿಷಿಯನ್(ಪ್ಯಾಥೊಲಾಜಿಕಲ್) 12 ಹುದ್ದೆಗಳು
ಟೆಕ್ನಿಷಿಯನ್(ಡೆಂಟಲ್) 02 ಹುದ್ದೆಗಳು
ಫಿಜಿಯೋಥೆರಪಿಸ್ಟ್ 04 ಹುದ್ದೆಗಳು
ಟೆಕ್ನಿಷಿಯನ್(ರಿಫ್ರೆಕ್ಷನ್/ಆಪ್ಟೋಮೀಟರ್) 01 ಹುದ್ದೆ
ಟೆಕ್ನಿಷಿಯನ್(ರೇಡಿಯೋಗ್ರಾಫರ್) 03 ಹುದ್ದೆಗಳು
ಜೂನಿಯರ್ ಟೆಕ್ನಿಷಿಯನ್(ಇಸಿಜಿ) 01 ಹುದ್ದೆಗಳು
ಮೇಲ್ವಿಚಾರಕ 30 ಹುದ್ದೆಗಳು

ಒಟ್ಟು – 577 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಆಯಾ ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ, ದ್ವಿತೀಯ ಪಿಯುಸಿ, ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ, ನರ್ಸಿಂಗ್ ಬಿ.ಎಸ್ಸಿ. ಪದವಿ ಹಾಗೂ RTA/RTO ನಿಂದ ನೀಡಲಾದ ಮಾನ್ಯ HMV/ಸಾರಿಗೆ ಪರವಾನಗಿಯನ್ನು ಹೊಂದಿರಬೇಕು

ವಯೋಮಿತಿ:

01-05-2026 ರಂತೆ;

ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳು.

ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10-15 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಮೆರಿಟ್ ಪಟ್ಟಿ
ದಾಖಲೆ ಪರಿಶೀಲನೆ

ಸಂಬಳ:

• ಆಪರೇಟರ್ ಹುದ್ದೆಗಳಿಗೆ – ₹1,502 ದಿನಕ್ಕೆ

• ಸ್ಟಾಫ್ ನರ್ಸ್, ಫಾರ್ಮಸಿಸ್ಟ್, ಟೆಕ್ನಿಷಿಯನ್ (ಪ್ಯಾಥೊಲಾಜಿಕಲ್), ಟೆಕ್ನಿಷಿಯನ್ (ರೇಡಿಯೋಗ್ರಾಫರ್) ಹಾಗೂ ಫಿಜಿಯೋಥೆರಪಿಸ್ಟ್ ಹುದ್ದೆಗಳಿಗೆ – ತಿಂಗಳಿಗೆ ₹47,330.

• ಜೂ.ಟೆಕ್ನಿಷಿಯನ್ (ಇಸಿಜಿ), ಟೆಕ್ನಿಷಿಯನ್ (ರಿಫ್ರೆಕ್ಷನ್/ಆಪ್ಟೋಮೀಟರ್) ಹಾಗೂ ಟೆಕ್ನಿಷಿಯನ್ (ಡೆಂಟಲ್) ಹುದ್ದೆಗಳಿಗೆ – ತಿಂಗಳಿಗೆ ₹43,775

• ಮೇಲ್ವಿಚಾರಕ ಹುದ್ದೆಗಳಿಗೆ – ತಿಂಗಳಿಗೆ ₹47,330

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಮತ್ತು ಇ.ಡಬ್ಲ್ಯೂ.ಎಸ್ ಅಭ್ಯರ್ಥಿಗಳಿಗೆ – ₹1180
ಎಸ್.ಸಿ/ಎಸ್.ಟಿ/ಇ.ಎಸ್.ಎಮ್/ ಪಿಡಬ್ಲ್ಯೂಬಿಡಿ/ಇಲಾಖಾ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಅರ್ಜಿ ಸಲ್ಲಿಸುವ ವಿಧಾನ

•NCL ಅಧಿಕೃತ ವೆಬ್ಸೈಟ್ https://www.nclcil.in/data-listing/pages/recruitment ಗೆ ಭೇಟಿ ನೀಡಿ.

• ನಂತರ ನೇಮಕಾತಿ ವಿಭಾಗದ “Employment Notice /Advertisement for Direct Recruitment for different designations of HEMM Operators (Trainee), Paramedical Staff and Overseer (Civil) in NCL” ಶೀರ್ಷಿಕೆಯ ಕೆಳಗೆ ನೀಡಲಾಗಿರುವ *ಅಪ್ಲೈ ಆನ್ಲೈನ್* ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಮುಂದುವರೆದಂತೆ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.

Ncl Hemm Operator
Nclನಲ್ಲಿ ಆಪರೇಟರ್, ಅರೆವೈದ್ಯಕೀಯ ಸಿಬ್ಬಂದಿ, ಟೆಕ್ನಿಷಿಯನ್ ಹುದ್ದೆಗಳ ಭರ್ತಿ

• ಅರ್ಜಿಯಲ್ಲಿ ಕೇಳಲಾಗುವ ವೈಯಕ್ತಿಕ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿ.

• ಕೊನೆದಾಗಿ ಅರ್ಜಿಯನ್ನು ಪರೀಶೀಲನೆ ಮಾಡಿ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitewww.nclcil.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment