2026ರ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ(CTET)ಯ 21ನೇ ಆವೃತ್ತಿಯ ನೋಂದಣಿಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ನ.27ರಿಂದ ಪ್ರಾರಂಭಿಸಿದೆ.
2026ರ ಫೆ.08 ರಂದು ಪರೀಕ್ಷೆ ನಡೆಯಲಿದೆ. ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳಂತಹ ಕೇಂದ್ರ ಸರ್ಕಾರಿ ಶಾಲೆಗಳಲ್ಲಿ ಬೋಧನಾ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹತೆ ಹೊಂದಲು ನಡೆಸುವ ಪರೀಕ್ಷೆಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಪೂರಕವಾರದ ಮಾರ್ಗವನ್ನು ನೀಡುತ್ತದೆ. ಪರೀಕ್ಷೆಗೆ ಹಾಜರಾಗ ಬಯಸುವ ಆಸಕ್ತ ಮತ್ತು ಅರ್ಹ ಆಕಾಂಕ್ಷಿಗಳು CTET ಅಧಿಕೃತ ಜಾಲತಾಣದ ಲಿಂಕ್ https://ctet.nic.in/apply-for-ctet-feb2026/ಗೆ ಭೇಟಿ ನೀಡಿ. ಡಿಸೆಂಬರ್ 18ರೊಳಗೆ ನೋಂದಣಿಯಾಗಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಡಿಸೆಂಬರ್ 18, 2025
(ಪೇಪರ್-I ಮತ್ತು ಪೇಪರ್-II) ಪರೀಕ್ಷಾ ದಿನಾಂಕ – ಫೆಬ್ರವರಿ 08, 2026
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
✓ CTET (1 ರಿಂದ 05ನೇ ತರಗತಿ ಶಿಕ್ಷಕರಿಗೆ) ಪತ್ರಿಕೆ-1 ಅರ್ಹತೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ/12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಜೊತೆಗೆ ಡಿ.ಇಎಲ್.ಇಡಿ/ಡಿಪ್ಲೋಮಾ/ಬಿ.ಎಡ್ ಬೋಧನಾ ಅರ್ಹತೆಯನ್ನು ಹೊಂದಿರಬೇಕು.
✓ CTET (6 ರಿಂದ 8ನೇ ತರಗತಿ ಶಿಕ್ಷಕರಿಗೆ) ಪತ್ರಿಕೆ-2 ಅರ್ಹತೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ.ಎಡ್/ಬಿ.ಎಲ್.ಎಡ್/ಬಿಎ/ಬಿ.ಎಸ್ಸಿ.ಎಡ್/ಬಿ.ಎ.ಇಡ್ ಅರ್ಹತೆಯೊಂದಿಗೆ ಪದವಿ ಪೂರ್ಣಗೊಳಿಸಿರಬೇಕು.
ಹೆಚ್ಚಿನ ಅರ್ಹತೆಯ ವಿವರಗಳಿಗಾಗಿ ಅಧಿಕೃತ ಬುಲೆಟಿನ್ ಓದಿರಿ, ಈ ಸುದ್ದಿಯ ಕೊನೆಯಲ್ಲಿ “Important Direct Links” ಶೀರ್ಷಿಕೆಯಡಿ ಲಿಂಕ್ ನೀಡಲಾಗಿದೆ.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
CTET-2026 ಪರೀಕ್ಷಾ ವೇಳಾಪಟ್ಟಿ
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 21ನೇ ಆವೃತ್ತಿಯ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು 2026ರ ಫೆಬ್ರವರಿ 08 ರಂದು (ಭಾನುವಾರ) ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಪೇಪರ್-II ಪರೀಕ್ಷೆಯನ್ನು ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5 ರವರೆಗೆ ಪೇಪರ್-I ಪರೀಕ್ಷೆಯನ್ನು ದೇಶಾದ್ಯಂತ 132 ನಗರಗಳ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ಇಪ್ಪತ್ತು ಭಾಷೆಗಳಲ್ಲಿ ನಡೆಸಲಾಗುತ್ತದೆ.
ಅರ್ಜಿ ಶುಲ್ಕ:
✓ ಒಂದು ಪತ್ರಿಕೆಗೆ;
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ – 1000ರೂ. ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 500ರೂ.
✓ ಎರಡು ಪತ್ರಿಕೆಗಳಿಗೆ;
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ – 1200ರೂ. ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 600ರೂ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
• CTET ಅಧಿಕೃತ ವೆಬ್ಸೈಟ್ https://ctet.nic.in ಗೆ ಭೇಟಿ ನೀಡಿ.
• ನಂತರ ಸಾರ್ವಜನಿಕ ಸೂಚನೆಗಳು ವಿಭಾಗದ ಕೆಳಗೆ ನೀಡಲಾಗಿರುವ “CTET ಫೆಬ್ರವರಿ 2026 ಕ್ಕೆ ಅರ್ಜಿ ಸಲ್ಲಿಸಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿಗಳು ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.