ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಕಾಮನ್ ಯೂನಿವರ್ಸಿಟಿ ಪ್ರವೇಶ ಪರೀಕ್ಷೆ (CUET UG 2024 Final Answer Key) ಅಂತಿಮ ಕೀ ಉತ್ತರವನ್ನು ಇಂದು (ಜುಲೈ 25) ರಂದು ಬಿಡುಗಡೆ ಮಾಡಿದೆ. ಪರೀಕ್ಷೆಯಗೆ ಹಾಜರಾದ ವಿದ್ಯಾರ್ಥಿಗಳು ಕೀ ಉತ್ತರಗಳನ್ನು exams.nta.ac.in/CUET-UG ನಲ್ಲಿ ಅಧಿಕೃತ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಈ ವರ್ಷ NTA ಮೇ 15 ರಿಂದ ಮೇ 29 ರವರೆಗೆ CUET-UG ಪರೀಕ್ಷೆಗಳನ್ನು 379 ನಗರಗಳಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿತು ಮತ್ತು ಸುಮಾರು 13.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಬಾರಿ, CUET-UG ಯ ಮೊದಲ ದಿನದಂದು 25 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕೀ ಉತ್ತರ ಡೌನ್‌ಲೋಡ್ ಮಾಡಲು, ಅಭ್ಯರ್ಥಿಗಳು ತಮ್ಮ CUET UG 2024 ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ಬಳಸಬೇಕಾಗುತ್ತದೆ. ಅಭ್ಯರ್ಥಿಗಳು NTA CUET UG ಕೀ ಉತ್ತರ ಮತ್ತು ಪ್ರತಿಕ್ರಿಯಾ ಪತ್ರವನ್ನು ಬಳಸಿಕೊಂಡು ತಮ್ಮ ಸಂಭಾವ್ಯ ಸ್ಕೋರ್ ಅನ್ನು ಲೆಕ್ಕ ಹಾಕಬಹುದು. NTA ಯಾವುದೇ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಕೀ ಉತ್ತರಗಳ ಮೇಲೆ ಸವಾಲು ಮಾಡಲು ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತದೆ.