ಡಿಸಿಇಟಿ-2025ರ 3ನೇ (ಅಂತಿಮ) ಸುತ್ತಿನ ಡಿಸಿಇಟಿ-2025ರ ಪ್ರವೇಶಾತಿಗಾಗಿಆಯ್ಕೆ ಪ್ರವೇಶ ದಿನಾಂಕ ವಿಸ್ತರಿಸಿ, ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ(ಆ.16) ಬಿಡುಗಡೆ ಮಾಡಿದೆ.
ಅರ್ಹ ಡಿಪ್ಲೊಮಾ ಅಭ್ಯರ್ಥಿಗಳಿಗೆ 3ನೇ (ಅಂತಿಮ) ಸುತ್ತಿನ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಆರ್ಕಿಟೆಕ್ಟರ್ ಸೀಟಿಗೆ ಪ್ರವೇಶ, ವೃತ್ತಿನಿರತ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಹಾಗೂ ಮೇಕ್ ಅಪ್ (ಮರು ಪರೀಕ್ಷೆ) ಅರ್ಹತೆ ಪಡೆದ ಡಿಪ್ಲೊಮಾ ಅಭ್ಯರ್ಥಿಗಳು ಸೇರಿದಂತೆ ಸದರಿ ಸುತ್ತಿನಲ್ಲಿ ಭಾಗವಹಿಸಲು ದಿನಾಂಕ ವಿಸ್ತರಿಸಿ, ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ನಲ್ಲಿ ಪ್ರಕಟಿಸಿದೆ.
CAUTION DEPOSIT ಪಾವತಿಸಲು ಮತ್ತು ಇಚ್ಛೆಗಳನ್ನು ದಾಖಲಿಸಲು ದಿನಾಂಕ ವಿಸ್ತರಣೆ
ಪ್ರಾಧಿಕಾರವು ಈಗಾಗಲೇ ಮೂರನೇ ಸುತ್ತಿನಲ್ಲಿ ಅಭ್ಯರ್ಥಿಗಳು ಭಾಗವಹಿಸುವ ಕುರಿತು CAUTION DEPOSIT ಪಾವತಿಸಿ ನಂತರ (OPTIONS) ಇಚ್ಛೆಗಳನ್ನು ದಾಖಲಿಸಲು ಸೂಚಿಸಲಾಗಿತ್ತು. ಇದೀಗ ಅಭ್ಯರ್ಥಿಗಳ ಮನವಿ ಮೇರೆಗೆ ಆ.18ರ ರಾತ್ರಿ 8 ಗಂಟೆಯ ವರೆಗೆ CAUTION DEPOSIT ಪಾವತಿಸಲು ಮತ್ತು ಆ.18ರ ರಾತ್ರಿ 11.59ರ ವರೆಗೆ ಇಚ್ಛೆಗಳನ್ನು ದಾಖಲಿಸಲು ಕಾಲಾವಕಾಶವನ್ನು ನೀಡಲಾಗಿದೆ.
3ನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದ ಪ್ರಮುಖ ದಿನಾಂಕಗಳು:
ಡಿಸಿಇಟಿ – 2025ರ ಪ್ರವೇಶಾತಿ ಸಂಬಂಧ 3ನೇ ಹಾಗು ಅಂತಿಮ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಆ.19ರ ಸಂಜೆ 4 ಗಂಟೆಯ ನಂತರ ಮತ್ತು 3ನೇ ಹಾಗು ಅಂತಿಮ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಆ.20ರ ಸಂಜೆ 4 ಗಂಟೆಯ ನಂತರ ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿದೆ.
ಸೀಟು ಹಂಚಿಕೆಯ ನಂತರದ ವೇಳಾಪಟ್ಟಿ:
• Challan Download (ಚಲನ್ ಡೌನ್ ಲೋಡ್) ಮಾಡಲು ಆ.21 ರಿಂದ 24ರ ವರೆಗೆ ಕಾಲಾವಕಾಶವನ್ನು ನೀಡಲಾಗಿದೆ.
• ಆ.21 ರಿಂದ 25 ರೊಳಗೆ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಬೇಕು. (Caution Deposit ಅನ್ನು ಈ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಹೊಂದಾಣಿಕೆ ಮಾಡಲಾಗುವುದು.) ಶುಲ್ಕ ಪಾವತಿಯ ನಂತರ Confirmation Slip ಡೌನ್ ಲೋಡ್ ಮಾಡಿಕೊಳ್ಳಬೇಕು.
• ಕೊನೆಯ ಹಂತದಲ್ಲಿ ಅಭ್ಯರ್ಥಿಗಳು ಆ.21 ರಿಂದ 26ರೊಳಗೆ ಸಂಬಂಧಿಸಿದ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು.
ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕಾದ ಹಂತಗಳು:
1. ಚಲನ್ ಡೌನ್ ಲೋಡ್
2. ಶುಲ್ಕ ಪಾವತಿ
3. Confirmation Slip ಡೌನ್ ಲೋಡ್ ಮಾಡಿಕೊಳ್ಳುವುದು.
4 ಎಲ್ಲಾ ಮೂಲ ದಾಖಲೆಗಳೊಂದಿಗೆ ಕಾಲೇಜಿಗೆ ವರದಿ ಮಾಡಿಕೊಳ್ಳುವುದು.
ಅಭ್ಯರ್ಥಿಗಳ ಗಮನಕ್ಕೆ
ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆಯ ನಂತರ ಅಭ್ಯರ್ಥಿಗಳು ಕಡ್ಡಾಯವಾಗಿ ಹಂಚಿಕೆಯಾದ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಬೇಕು. ಸೀಟು ರದ್ದುಪಡಿಸಿಕೊಳ್ಳಲು ಅವಕಾಶ ಇರುವುದಿಲ್ಲ. ಆದ್ದರಿಂದ ಕಾಲೇಜಿಗೆ ಸೇರಬಯಸುವ ಇಚ್ಛೆ /ಆಯ್ಕೆಗಳನ್ನು ಆದ್ಯತಾ ಕ್ರಮದಲ್ಲಿ ಎಚ್ಚರದಿಂದ ದಾಖಲಿಸಲು ಸೂಚಿಸಿದೆ. ಹಂಚಿಕೆಯಾದ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವಿಫಲರಾದಲ್ಲಿ Caution Deposit ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ನಿಯಮಾನುಸಾರ ದಂಡ ಪಾವತಿಸಬೇಕು.