ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ನಿಯಮಿತವು ವಿವಿಧ ಹುದ್ದೆಗಳ ನೇಮಕಾತಿಗಾಗಿ ಆ.14ರಂದು ಅಧಿಸೂಚನೆಯನ್ನು ಹೊರಡಿಸಿ, ಅರ್ಜಿ ಆಹ್ವಾನಿಸಿದೆ.
ಬೆಂಗಳೂರು ಸಂಸ್ಥೆಯಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ (ಫಾರಾಸಿಸ್ಟ್ -07, ಪ್ರಥಮ ದರ್ಜೆ ಸಹಾಯಕರು-10 ಹಾಗೂ ವಿಕ್ರಯ ಸಹಾಯಕರು-16) ಒಟ್ಟು 34 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು KSCCF ಅಧಿಕೃತ ವೆಬ್ಸೈಟ್ https://virtualofficeerp.com/ksccf2025/instructionಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇದನ್ನ ಹೊರತುಪಡಿಸಿ ಬೇರೆ ಯಾವುದೇ ಇತ್ಯಾದಿ ಮೂಲಗಳಿಂದ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕರು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಆಗಸ್ಟ್ 16, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 14, 2025
ಶೈಕ್ಷಣಿಕ ಅರ್ಹತೆ:
ಫಾರಾಸಿಸ್ಟ್ ಹುದ್ದೆಗೆ – ಸರ್ಕಾರದ ಅಂಗೀಕೃತ ಸಂಸ್ಥೆಯಿಂದ ಡಿಪ್ಲೋಮಾ ಇನ್ ಫಾರ್ಮಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ಪ್ರಥಮ ದರ್ಜೆ ಸಹಾಯಕರು ಹುದ್ದೆಗೆ – ಭಾರತದ ಕಾನೂನಿನಡಿಯಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು.
ವಿಕ್ರಯ ಸಹಾಯಕರು ಹುದ್ದೆಗೆ – ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು.
ಎಲ್ಲಾ ಹುದ್ದೆಗಳಿಗೂ ಇರಬೇಕಾದ ಸಾಮಾನ್ಯ ಅರ್ಹತೆಗಳು:
• ಕಂಪ್ಯೂಟರ್ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನ ಹೊಂದಿರಬೇಕು.
• ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಚವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.
ವಯೋಮಿತಿ:
ಕನಿಷ್ಠ ಮಿತಿ – 18 ವರ್ಷಗಳು
- ಸಾಮಾನ್ಯ ವರ್ಗ → ಗರಿಷ್ಠ ಮಿತಿ – 35 ವರ್ಷಗಳು
- ಪ್ರವರ್ಗ 2ಎ/2ಬಿ/3ಎ/3ಬಿ → ಗರಿಷ್ಠ ಮಿತಿ – 38 ವರ್ಷಗಳು
- ಪ.ಜಾ/ಪ.ಪಂ/ಪ್ರವರ್ಗ-1 → 40 ವರ್ಷಗಳು
ಸರ್ಕಾರದ ನಿಯಮಾವಳಿ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ
- ಸಂದರ್ಶನ
- ಮೆರಿಟ್ ಪಟ್ಟಿ ಆಧಾರದ ಮೇಲೆ ಮೀಸಲಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳ ಆಯ್ಕೆ
- ದಾಖಲಾತಿ ಪರಿಶೀಲನೆ
ವೇತನ ಶ್ರೇಣಿ:
ಫಾರಾಸಿಸ್ಟ್ – ರೂ.16000 ರಿಂದ 29600/- (ಪ್ರ.ತಿಂ)
ಪ್ರಥಮ ದರ್ಜೆ ಸಹಾಯಕರು – ರೂ.13600 ರಿಂದ 26000/- (ಪ್ರ.ತಿಂ)
ವಿಕ್ರಯ ಸಹಾಯಕರು – ರೂ.12300 ರಿಂದ 24000/- (ಪ್ರ.ತಿಂ)
ಅರ್ಜಿ ಶುಲ್ಕ:
- ಪ.ಜಾತಿ, ಪ.ಪಂಗಡ, ಪ್ರವರ್ಗ – 1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 500ರೂ. ( +ಗೇಟ್ ವೇ ಶುಲ್ಕಗಳು)
- ಇತರೆ ವರ್ಗದ ಅಭ್ಯರ್ಥಿಗಳಿಗೆ 1000ರೂ. (+ ಗೇಟ್ ವೇ ಶುಲ್ಕಗಳು)
How to Apply for KSCCF Recruitment 2025
ಅರ್ಜಿ ಸಲ್ಲಿಸುವ ವಿಧಾನ;
- KSCCF ಅಧಿಕೃತ ವೆಬ್ಸೈಟ್ https://virtualofficeerp.com/ksccf2025/instructionಗೆ ಭೇಟಿ ನೀಡಿ.
- New registration ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನೀವು ಅರ್ಜಿ ಸಲ್ಲಿಸಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
- ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
- ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
- ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | ksccsf.org |
| More Updates | KarnatakaHelp.in |
Santosh mallappa alagundi
Belagavi
Basti galli alarwad
10th pass
26/11/2009
Ok
Puc complete
Darshan N H
Chikkamagalure (d)
Kadur (tqq)
Nagenahalli at post
B.com
13/03/1999
ನನಗೆ ಕೆಲಸವನ್ನು ಬೇಕಾಗಿದೆ ದಯವಿಟ್ಟು ಕೆಲಸ ವಿದ್ರೆ ಕೋಡಿ
ನನಗೆ ಕೆಲಸದ ಅವಶ್ಯಕತೆ ಇದೆ ದಯವಿಟ್ಟು ಕೆಲಸ kodi
K
I have completed my bcom, diploma in finance, advance computer( tally, excel , english and kannada typing ) currently im studying CA and MBA in finance and HR
Sir ega notification cancel madidar