DCET 2025 Working Professional Document Verification
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಡಿಸಿಇಟಿ 2025ರ ವೃತ್ತಿಪರ ಡಿಪ್ಲೊಮಾ ಪದವೀಧರ (DCET 2025 Working Professional)) ಅಭ್ಯರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ದಾಖಲೆ ಪರಿಶೀಲನೆಗೆ ದಿನಾಂಕ ನಿಗದಿಪಡಿಸಿದೆ.
ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮೇ 31 ರಂದು ನಡೆಸಲಾಗಿತ್ತು. ಇದೀಗ ಪ್ರಾಧಿಕಾರವು ಸದರಿ ಪ್ರವೇಶಕ್ಕೆ ಸಂಬಂಧಿಸಿದಂತೆ ವೃತ್ತಿಪರ ಡಿಪ್ಲೊಮ ಪದವೀಧರ (working professional) ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಯನ್ನು ನಡೆಸಲು ದಿನಾಂಕ, ಸ್ಥಳವನ್ನು ನಿಗದಿಪಡಿಸಿ ಪ್ರಕಟಣೆ ಹೊರಡಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಡಿಸಿಇಟಿ-2025 ರ ಪರೀಕ್ಷೆಗೆ ಹಾಜರಾದ working professional ಅಭ್ಯರ್ಥಿಗಳಿಗೆ ಅರ್ಹತೆಯನ್ನು ಪಡೆಯುವುದಕ್ಕಾಗಿ ದಾಖಲಾತಿ ಪರಿಶೀಲನೆಯನ್ನು ಜೂನ್ 13 ಮತ್ತು ಜೂನ್ 16 ರಂದು ಬೆಳಿಗ್ಗೆ 10.30 ರಿಂದ ಸಂಜೆ 4:30 ರವರೆಗೆ ಹತ್ತಿರದ ಸರ್ಕಾರಿ ಅನುದಾನಿತ ಅಥವಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಸಲಾಗುತ್ತದೆ.
ದಾಖಲಾತಿ ಪರಿಶೀಲನೆಯ ವಿಳಾಸ:
ಅಭ್ಯರ್ಥಿಯು ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿರುವ ಯಾವುದಾದರೂ ಹತ್ತಿರದ ಸರ್ಕಾರಿ ಅಥವಾ ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗೆ ನಿಗದಿತ ದಿನಾಂಕದಂದು ಭೇಟಿ ನೀಡಿ ದಾಖಾಲಾತಿ ಪರಿಶೀಲನೆ ಮಾಡಿಕೊಳ್ಳಬೇಕು.
ಎಂಇಐ ಪಾಲಿಟೆಕ್ನಿಕ್, ರಾಜಾಜಿನಗರ, 4ನೇ ಬ್ಲಾಕ್, ಬೆಂಗಳೂರು-560 010.
ಸರ್ಕಾರಿ ಪಾಲಿಟೆಕ್ನಿಕ್, ಗದಗ, ಬಸ್ ನಿಲ್ದಾಣದ ಹತ್ತಿರ, ಬೆಟಗೇರಿ, ಗದಗ- 582102
ಸಿಪಿಸಿ ಸರ್ಕಾರಿ ಪಾಲಿಟೆಕ್ನಿಕ್, ಮೈಸೂರು – 570 007
ಸರ್ಕಾರಿ ಪಾಲಿಟೆಕ್ನಿಕ್, ತುಮಕೂರು-572101
ವಿಶೇಷ ಸೂಚನೆ:
ವಿದ್ಯಾರ್ಥಿಗಳು ದಾಖಲೆಗಳ ಪರಿಶೀಲನೆಗೆ ಬರುವ ಸಮಯದಲ್ಲಿ, ತಾವು ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಕೋರಿರುವ ಕ್ಲೇಮುಗಳಿಗೆ ಪೂರಕವಾದ ಎಲ್ಲಾ ಶೈಕ್ಷಣಿಕ ಮೂಲ ದಾಖಲೆಗಳನ್ನು ಮತ್ತು ಒಂದು attested ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು.
ದಾಖಲೆಗಳ ಪರಿಶೀಲನೆಯ ನಂತರ ಅರ್ಹರಾಗುವಂತಹ ವಿದ್ಯಾರ್ಥಿಗಳನ್ನು ಮಾತ್ರ. ಅವರು ತಮ್ಮ ಇಚ್ಛೆಗಳನ್ನು ನಮೂದಿಸುವುದಕ್ಕಾಗಿ ಪರಿಗಣಿಸಲಾಗುವುದು.
ಡಿಸಿಇಟಿ-2025 ರ ಸೀಟು ಹಂಚಿಕೆಗೆ ಅರ್ಹಗೊಳ್ಳಲು ಸಲ್ಲಿಸಬೇಕಾದ ಮೂಲ ದಾಖಲಾತಿಗಳು:
ಡಿಸಿಇಟಿ-2025ಕ್ಕೆ ಭರ್ತಿ ಮಾಡಿ ಅಂತಿಮವಾಗಿ ಸಲ್ಲಿಸಿರುವ ಪ್ರತಿ.
ಡಿಪ್ಲೊಮ ಸಾಮಾನ್ಯ ಪ್ರವೇಶ ಪರೀಕ್ಷೆ-2025 ರ ಮೂಲ ಪ್ರವೇಶ ಪತ್ರ.
ಎಸ್ಎಸ್ಎಲ್‌ಸಿ/ 10ನೇ ತರಗತಿಯ ಅಂಕಪಟ್ಟಿ
ಡಿಪ್ಲೊಮ ಅಂಕಪಟ್ಟಿಗಳು (ಎಲ್ಲಾ ಸೆಮಿಸ್ಟರ್ / ಎಲ್ಲಾ ವರ್ಷದ) ಮೂಲ ಅಂಕಪಟ್ಟಿಗಳು
7 ವರ್ಷದ ವ್ಯಾಸಂಗ ಪ್ರಮಾಣ ಪತ್ರ (1 ರಿಂದ ಡಿಪ್ಲೊಮ ಅಂತಿಮ ವರ್ಷದವರೆಗೆ ಒಟ್ಟು 7 ವರ್ಷದ ವ್ಯಾಸಂಗ ಪ್ರಮಾಣಪತ್ರ)
ಅನ್ವಯವಾಗುವಂತಿದ್ದ ಪಕ್ಷದಲ್ಲಿ ಬೇಕಾದ ದಾಖಲಾತಿಗಳು:
ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ
ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ
ಜಾತಿ ಮತ್ತು ಆದಾಯ ಪ್ರಮಾಣಪತ್ರ (ಚಾಲ್ತಿಯಲ್ಲಿರುವ)
371 (ಜೆ)) – ಹೈದರಾಬಾದ್-ಕರ್ನಾಟಕ ಪ್ರದೇಶ ಮೀಸಲಾತಿ
ಮಾನ್ಯತೆ ಇರುವ ನಾಟಾ ಪರೀಕ್ಷೆಯ ಅಂಕಪಟ್ಟಿ – ಆರ್ಕಿಟೆಕ್ಟರ್ ಕೋರ್ಸಿಗೆ ಮಾತ್ರ
Important Direct Links:
DCET 2025 Working Professional Document Verification Date Notice PDF