ಡಿಪ್ಲೋಮಾ ಅಭ್ಯರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ(ಡಿಸಿಇಟಿ )ಯನ್ನು ಮೇ 31 ರಂದು ನಡೆಸಲಾಗಿತ್ತು, ಇದೀಗ ಪ್ರಾಧಿಕಾರವು ಸದರಿ ಪ್ರವೇಶಾತಿಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆ(DCET 2025 Document Verification)ನಡೆಸಲು ಅಧಿಸೂಚನೆಯನ್ನು ಹೊರಡಿಸಿದೆ.
ಎರಡನೇ ವರ್ಷದ / ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ಹಾಗು ಮೊದಲನೇ ವರ್ಷದ ಆರ್ಕಿಟೆಕ್ಟರ್ ಕೋರ್ಸಿಗೆ ಅರ್ಹತೆಯನ್ನು ಪಡೆಯುವುದಕ್ಕಾಗಿ DCET- 2025 ದಾಖಲಾತಿ ಪರಿಶೀಲನೆಯನ್ನು ಜೂನ್ 10 ರಿಂದ 13 ರವರೆಗೆ ರಾಜ್ಯದಲ್ಲಿನ ಆಯ್ದ ಸರ್ಕಾರಿ ಮತ್ತು ಅನುದಾನಿತ ಡಿಪ್ಲೊಮ ಪಾಲಿಟೆಕ್ನಿಕ್‌ಗಳಲ್ಲಿ ನಡೆಸಲಾಗುವುದು.
ಸದರಿ ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗುವ ವಿಳಾಸದ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟ್ cetonline.karnataka.gov.inನಲ್ಲಿ ಪ್ರಕಟಿಸಲಾಗಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಅಭ್ಯರ್ಥಿಯು ಕೆಇಎ ವೆಬ್‌ಸೈಟಿನಲ್ಲಿ ಪ್ರಕಟಿಸಿರುವ ಯಾವುದಾದರೂ ಹತ್ತಿರದ ಸರ್ಕಾರಿ ಅಥವಾ ಅನುದಾನಿತ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ದಿನಾಂಕ 10-06-2025 ರಿಂದ 13-06-2025 ಖುದ್ದಾಗಿ (ಬೆಳಿಗ್ಗೆ 10.30 ರಿಂದ ಸಂಜೆ 3.30 ರ ವರೆಗಿನ ಸಮಯದಲ್ಲಿ) ನಡೆಸಲಾಗುವ ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದು.
ವಿಶೇಷ ಪ್ರವರ್ಗದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗೆ ಹಾಜರಾಗಲು ನಿಗದಿಪಡಿಸಿರುವ ದಿನಾಂಕ ಹಾಗೂ ಸ್ಥಳ:
ಸ್ಕೌಟ್ಸ್ ಆಂಡ್ ಗೈಡ್ಸ್, ಸೈನಿಕರು, ಮಾಜಿ ಸೈನಿಕರು, ಸಿಎಪಿಎಫ್, ಮಾಜಿ-ಸಿಎಪಿಎಫ್ ಅಭ್ಯರ್ಥಿಗಳು ದಿನಾಂಕ 11-06-2025 ರಂದು ದಾಖಲಾತಿ ಪರಿಶೀಲರಿಗೆ ಹಾಜರಾಗಬಹುದು.
ಎನ್‌ಸಿಸಿ ಅಭ್ಯರ್ಥಿಗಳು ದಿನಾಂಕ 12-06-2025 ರಂದು ದಾಖಲಾತಿ ಪರಿಶೀಲರಿಗೆ ಹಾಜರಾಗಬಹುದು.
ಕ್ರೀಡೆ ಅಭ್ಯರ್ಥಿಗಳು ದಿನಾಂಕ 13-06-2025 ರಂದು ದಾಖಲಾತಿ ಪರಿಶೀಲರಿಗೆ ಹಾಜರಾಗಬಹುದು.
ವಿಶೇಷ ವರ್ಗದ ಪ್ರಮಾಣ ಪತ್ರಗಳು ಮತ್ತು ಇತರೆ ಶೈಕ್ಷಣಿಕ ಪ್ರಮಾಣ ಪತ್ರಗಳೊಂದಿಗೆ ಕೆಇಎ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ಮೇಲಿನ ದಿನಾಂಕಗಳಂದು ಬೆಳಿಗ್ಗೆ 10.30 ರಿಂದ ಸಂಜೆ 4.00 ರ ವರೆಗೆ ನಡೆಸಲಾಗುವ ದಾಖಲಾತಿ ಪರಿಶೀಲನೆಗೆ ಹಾಜರಾಗುವುದು.
ವಿಶೇಷ ಸೂಚನೆ:
ವಿದ್ಯಾರ್ಥಿಗಳು ದಾಖಲೆಗಳ ಪರಿಶೀಲನೆಗೆ ಬರುವ ಸಮಯದಲ್ಲಿ, ತಾವು ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಕೋರಿರುವ ಕ್ಲೇಮುಗಳಿಗೆ ಪೂರಕವಾದ ಎಲ್ಲಾ ಶೈಕ್ಷಣಿಕ ಮೂಲ ದಾಖಲೆಗಳನ್ನು ಮತ್ತು ಒಂದು attested ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು.
ದಾಖಲೆಗಳ ಪರಿಶೀಲನೆಯ ನಂತರ ಅರ್ಹರಾಗುವಂತಹ ವಿದ್ಯಾರ್ಥಿಗಳನ್ನು ಮಾತ್ರ. ಅವರು ತಮ್ಮ ಇಚ್ಛೆಗಳನ್ನು ನಮೂದಿಸುವುದಕ್ಕಾಗಿ ಪರಿಗಣಿಸಲಾಗುವುದು.
ಡಿಸಿಇಟಿ-2025 ರ ಸೀಟು ಹಂಚಿಕೆಗೆ ಅರ್ಹಗೊಳ್ಳಲು ಸಲ್ಲಿಸಬೇಕಾದ ಮೂಲ ದಾಖಲಾತಿಗಳು :
ಡಿಸಿಇಟಿ-2025ಕ್ಕೆ ಭರ್ತಿ ಮಾಡಿ ಅಂತಿಮವಾಗಿ ಸಲ್ಲಿಸಿರುವ ಪ್ರತಿ.
ಡಿಪ್ಲೊಮ ಸಾಮಾನ್ಯ ಪ್ರವೇಶ ಪರೀಕ್ಷೆ-2025 ರ ಮೂಲ ಪ್ರವೇಶ ಪತ್ರ.
ಎಸ್ಎಸ್ಎಲ್‌ಸಿ/ 10ನೇ ತರಗತಿಯ ಅಂಕಪಟ್ಟಿ
ಡಿಪ್ಲೊಮ ಅಂಕಪಟ್ಟಿಗಳು (ಎಲ್ಲಾ ಸೆಮಿಸ್ಟರ್ / ಎಲ್ಲಾ ವರ್ಷದ) ಮೂಲ ಅಂಕಪಟ್ಟಿಗಳು
7 ವರ್ಷದ ವ್ಯಾಸಂಗ ಪ್ರಮಾಣ ಪತ್ರ (1 ರಿಂದ ಡಿಪ್ಲೊಮ ಅಂತಿಮ ವರ್ಷದವರೆಗೆ ಒಟ್ಟು 7 ವರ್ಷದ ವ್ಯಾಸಂಗ ಪ್ರಮಾಣಪತ್ರ)
ಅನ್ವಯವಾಗುವಂತಿದ್ದ ಪಕ್ಷದಲ್ಲಿ ಬೇಕಾದ ದಾಖಲಾತಿಗಳು:
ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ
ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ
ಜಾತಿ ಮತ್ತು ಆದಾಯ ಪ್ರಮಾಣಪತ್ರ (ಚಾಲ್ತಿಯಲ್ಲಿರುವ)
371 (ಜೆ)) – ಹೈದರಾಬಾದ್-ಕರ್ನಾಟಕ ಪ್ರದೇಶ ಮೀಸಲಾತಿ
ಹೊರನಾಡು ಮತ್ತು ಗಡಿನಾಡು ಕನ್ನಡಿಗ ಕೋಟಾದ ಅಡಿಯಲ್ಲಿ ಅರ್ಹತೆಯನ್ನು ಕೋರುವಂತಹ ಅಭ್ಯರ್ಥಿಗಳು (ತಮ್ಮ ಮಾತೃ ಭಾಷೆ ಬಗ್ಗೆ) ಯುಕ್ತವಾಗಿ ಘೋಷಿಸಿರುವ ಅಫಿಡವಿಟ್ (ಖಂಡ ಸಿ & ಡಿ).
ಮಾನ್ಯತೆ ಇರುವ ನಾಟಾ ಪರೀಕ್ಷೆಯ ಅಂಕಪಟ್ಟಿ – ಆರ್ಕಿಟೆಕ್ಟರ್ ಕೋರ್ಸಿಗೆ ಮಾತ್ರ
ದಾಖಲಾತಿ ಪರಿಶೀಲನೆಯ ವಿಳಾಸ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ಇತ್ತೀಚಿನ ಪ್ರಕಟಣೆಗಳು ವಿಭಾಗದಲ್ಲಿ 06 ಡಿಸಿಇಟಿ- 2025 ಡಾಕ್ಯುಮೆಂಟ್ ಪರಿಶೀಲನ ಕೇಂದ್ರಗಳ ಪಟ್ಟಿ. 03/06/2025 ಲಿಂಕ್ ಮೇಲೆ ಟ್ಯಾಪ್ ಮಾಡಿ.
ಪಿಡಿಎಫ್ ನಲ್ಲಿ ನಿಮ್ಮ ಹತ್ತಿರದ ಸರ್ಕಾರಿ ಅಥವಾ ಅನುದಾನಿತ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ದಿನಾಂಕ 10-06-2025 ರಿಂದ 13-06-2025 (ಬೆಳಿಗ್ಗೆ 10.30 ರಿಂದ ಸಂಜೆ 3.30 ರ ವರೆಗಿನ ಸಮಯದಲ್ಲಿ) ನಡೆಸಲಾಗುವ ದಾಖಲಾತಿ ಪರಿಶೀಲನೆಗೆ ಅಭ್ಯರ್ಥಿಗಳು ಹಾಜರಾಗಬಹುದು.
Please note me when the seat distribution starts for other than engineering course like agriculture and other course