ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಡಿಸಿಇಟಿ – 2025 ಪ್ರವೇಶಾತಿ ಸಂಬಂಧ ಮೊದಲ ಸುತ್ತಿನ ತಾತ್ಕಾಲಿಕ ಹೈದರಾಬಾದ್ ಕರ್ನಾಟಕ ಹಾಗೂ ಜನರಲ್ ಕಟ್ ಆಫ್ ಸೀಟು ಹಂಚಿಕೆ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಡಿಪ್ಲೊಮಾ ಪದವೀಧರ ಅಭ್ಯರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶಕ್ಕೆ ಹಾಗೂ ಮೊದಲನೇ ವರ್ಷದ ಆರ್ಕಿಟೆಕ್ಟರ್ ಕೋರ್ಸು ಪ್ರವೇಶಾತಿ ಸಲುವಾಗಿ ಮೇ 31 ರಂದು DCET-ಪ್ರವೇಶ ಪರೀಕ್ಷೆಯನ್ನು ನಡೆಸಿ ಜೂ.24ರಂದು ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಇದೀಗ ಪ್ರಾಧಿಕಾರವು ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ನಲ್ಲಿ ಬಿಡುಗಡೆ ಮಾಡಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಡಿಸಿಇಟಿ – 2025 ಪ್ರವೇಶಾತಿ
ಮೊದಲನೇ ಸುತ್ತಿನ ಸೀಟು ಮ್ಯಾಟ್ರಿಕ್ಸ್ ಪ್ರಕಟಿಸಿ, ಅಭ್ಯರ್ಥಿಗಳು ಎಲ್ಲಾ ಕೋರ್ಸುಗಳಿಗೂ ತಮ್ಮ ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಲು ಅವಕಾಶ ಕಲ್ಪಿಸಿ. ಜುಲೈ 7 ರಂದು ಅಣುಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗಿತ್ತು. ಇದೀಗ ಪ್ರಾಧಿಕಾರವು ಸದರಿ ಪ್ರವೇಶಾತಿ ಸಂಬಂಧ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ.
How to Check DCET 1st Round Seat allotment Result 2025
DCET-2025 ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ನೋಡುವ ವಿಧಾನ
- ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
- ಇತ್ತೀಚಿನ ಪ್ರಕಟಣೆಗಳು ವಿಭಾಗದಲ್ಲಿ DCET-2025 ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಲಿಂಕ್12/07/2025
ಲಿಂಕ್ ಮೇಲೆ ಕ್ಲಿಕ್ ಮಾಡಿ. - ನಂತರ ನಿಮ್ಮ ಸಿಇಟಿ ಸಂಖ್ಯೆ ನಮೂದಿಸಿ ಫಲಿತಾಂಶವನ್ನು ಪರಿಶೀಲಿಸಿ.
How to Download DCET 1st Round Seat allotment Result Cut-Off 2025
DCET-2025 ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಕಟ್ ಆಫ್ ನೋಡುವ ವಿಧಾನ
- ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
- ಇತ್ತೀಚಿನ ಪ್ರಕಟಣೆಗಳು ವಿಭಾಗದಲ್ಲಿ DCET-2025 ಮೊದಲ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಕಟ್ ಆಫ್ 12/07/2025
ಲಿಂಕ್ ಮೇಲೆ ಕ್ಲಿಕ್ ಮಾಡಿ. - ಬಳಿಕ ಹೈದರಾಬಾದ್ ಕರ್ನಾಟಕ ಕಟ್ ಆಫ್ ಅಥವಾ ಜನರಲ್ ಕಟ್ ಆಫ್ ಸೀಟು ಹಂಚಿಕೆ ಫಲಿತಾಂಶದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ತಾತ್ಕಾಲಿಕ ಸೀಟು ಹಂಚಿಕೆ ಕಟ್-ಆಫ್ ಪರಿಶೀಲಿಸಿಕೊಳ್ಳಿ.
ವಿಶೇಷ ಸೂಚನೆ
- ಇದು ಕೇವಲ ಮೊದಲನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವಾಗಿದ್ದು, ಅಭ್ಯರ್ಥಿಯು ಕಾಲೇಜಿಗೆ ವರದಿ ಮಾಡಿಕೊಳ್ಳಬಾರದು.
- ಯಾವುದಾದರೂ ಆಕ್ಷೇಪಣೆಗಳಿದ್ದರೆ ಅವುಗಳನ್ನು ದಿನಾಂಕ ಜುಲೈ 14ರಂದು ಮಧ್ಯಾಹ್ನ 12 ಗಂಟೆಯ ಮೊದಲು ಕೆಇಎ ಇಮೇಲ್ :- keauthority-ka@nic.in ಗೆ ಕಳುಹಿಸಬಹುದು.
Important Direct Links:
DCET 1st Round Provisional Seat allotment Result 2025 Check Link | Check Now |
DCET 1st Round Provisional Seat allotment Result Cut-Off 2025(HK) PDF | Download |
DCET 1st Round Provisional Seat allotment Result Cut-Off 2025(General) PDF | Download |
Official Website | kea.kar.nic.in |
More Updates | KarnatakaHelp.in |