ಮೈಸೂರಿನ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿಯಲ್ಲಿ ಖಾಲಿ ಇರುವ ಕೀಟ ಸಂಗ್ರಹಕಾರ (Insect collector) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಮಲೇರಿಯಾ, ಫೈಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯ ರೋಗಗಳಿಗೆ ಸಂಬಂಧಿಸಿದ ರೋಗವಾಹಕಗಳ (ಕೀಟಗಳನ್ನು) ಸಂಗ್ರಹಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 2025-26ನೇ ಸಾಲಿಗೆ ಖಾಲಿ ಇರುವ ಓರ್ವ ಕೀಟ ಸಂಗ್ರಹಕಾರರು (Insect collector) ಹುದ್ದೆಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ನೇರಸಂದರ್ಶನದ ಪ್ರಮುಖ ದಿನಾಂಕಗಳು ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ. ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ನೇಮಕಾತಿಯ ಪ್ರಮುಖ ದಿನಾಂಕಗಳು:
- ನೇಮಕಾತಿ ಪ್ರಕಟಣೆಯ ದಿನಾಂಕ – 24-06-2025
- ನೇರ ಸಂದರ್ಶನ ನಡೆಯುವ ದಿನಾಂಕ – 07-07-2025
ಶೈಕ್ಷಣಿಕ ಅರ್ಹತೆ:
ವಿದ್ಯಾರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ದ್ವಿತೀಯ ಪಿಯುಸಿ/12ನೇ ತರಗತಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು.
ಇತರೆ ಅರ್ಹತೆ:
1.ಅಭ್ಯರ್ಥಿಯು ಗಣಕಯಂತ್ರ ನಿರ್ವಹಣೆ ಜ್ಞಾನ ಹೊಂದಿರಬೇಕು.
2.ನಗರ/ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆ/ಕೀಟಗಳ ಸಂಗ್ರಹಣೆಗಾಗಿ ಮುಂಜಾನೆ 5 ಗಂಟೆಗೆ ಹಾಗೂ ರಾತ್ರಿ 8 ರ ಸಮಯದಲ್ಲಿ ಕಾರ್ಯ ನಿರ್ವಹಿಸುವುದು. ಸಂದರ್ಭಕ್ಕೆ ಅನುಸಾರವಾಗಿ ವ್ಯಾಸ್ತವ್ಯವಿರಬೇಕು.
ವಯೋಮಿತಿ:
- ಕನಿಷ್ಠ- 18 ವರ್ಷಗಳು
- ಗರಿಷ್ಠ – 40 ವರ್ಷಗಳು
ವೇತನ:
ಮಾಸಿಕ ಗೌರವ ಧನ 16,575ರೂ. ಪ್ರಯಾಣ ಭತ್ಯೆ, ದಿನ ಭತ್ಯೆಯನ್ನು ನೀಡಲಾಗುತ್ತದೆ.
ನೇರ ಸಂದರ್ಶನ ನಡೆಯುವ ದಿನಾಂಕ ಹಾಗೂ ಸ್ಥಳ:
ಜುಲೈ 07 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಛೇರಿ ನಜರಬಾದ್, ಮೈಸೂರು ಇಲ್ಲಿ ನೇರ ಸಂದರ್ಶನವನ್ನು (Walk-in-Interview)ನಡೆಸಲಾಗುತ್ತದೆ.
Important Direct Links:
Official Notification PDF | Download |
Official Website | mysore.nic.in |
More Updates | KarnatakaHelp.in |