ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಮತ್ತು ನಮ್ಮ ಕ್ಲಿನಿಕ್ಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಉಡುಪಿ ಜಿಲ್ಲಾಸ್ಪತ್ರೆ ಹಾಗೂ ನಮ್ಮ ಕ್ಲಿನಿಕ್ಗಳ ವಿವಿಧ ವಿಭಾಗಗಳಲ್ಲಿ ಎನ್.ಸಿ.ಡಿ ಹೃದಯ ರೋಗ ತಜ್ಞರು, ನೇತ್ರತಜ್ಞರು,ವೈದ್ಯಾಧಿಕಾರಿ ಹಾಗೂ ಶುಶ್ರೂಷಕರು ಸೇರಿದಂತೆ ಇತರೆ ಒಟ್ಟು 23 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅ.16ರೊಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ ದಿನಾಂಕ – ಅಕ್ಟೋಬರ್ 08, 2025
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅಕ್ಟೋಬರ್ 09, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 16, 2025
ಹುದ್ದೆಯ ವಿವರ ಹಾಗೂ ಶೈಕ್ಷಣಿಕ ಅರ್ಹತೆ:
✓ ಎನ್.ಸಿ.ಡಿ ಹೃದಯ ರೋಗ ತಜ್ಞರು (01 ಹುದ್ದೆ): ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಬಿ.ಬಿ.ಎಸ್, ಎಂ.ಡಿ ಪೂರ್ಣಗೊಳಿಸಿರಬೇಕು. ಎಂಡೋನಾಲಜಿ ಅಥವಾ ಕಾರ್ಡಿಯಾಲಜಿಯಲ್ಲಿ ವಿಶೇಷ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
✓ ಎನ್.ಸಿ.ಡಿ ಫಿಜಿಷಿಯನ್, ಎನ್.ಪಿ.ಹೆಚ್.ಸಿ.ಇ ಕನ್ಸಲೆಂಟ್ ಮೆಡಿಸಿನ್, ಎನ್.ಪಿ.ಪಿ.ಸಿ ಫಿಜಿಷಿಯನ್ ಹಾಗೂ ನೇತ್ರತಜ್ಞರು (ತಲಾ 01 ಹುದ್ದೆ); ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಬಿ.ಬಿ.ಎಸ್/ಎಂ.ಡಿ ಪೂರ್ಣಗೊಳಿಸಿರಬೇಕು.
✓ ವೈದ್ಯಾಧಿಕಾರಿ (01 ಹುದ್ದೆ); ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಬಿ.ಬಿ.ಎಸ್ ಪೂರ್ಣಗೊಳಿಸಿರಬೇಕು.
✓ ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರು (01 ಹುದ್ದೆ); ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ BDS/BAMS/BHMS/BUMS/BYNS/M.Sc ನರ್ಸಿಂಗ್/M.Sc ಜೀವ ವಿಜ್ಞಾನ/ಬಿ.ಎಸ್.ಸಿ ನರ್ಸಿಂಗ್ ಜೊತೆಗೆ MPH/MBA ಪೂರ್ಣಗೊಳಿಸಿರಬೇಕು.
✓ ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ (02 ಹುದ್ದೆಗಳು); ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆ/MRW ಕೋರ್ಸ ಸರ್ಟಿಫಿಕೇಟ್/DCBR/PGDCBR ಪೂರ್ಣಗೊಳಿಸಿರಬೇಕು.
✓ ಆಡಿಯೊಮೆಟ್ರಿಕ್ ಸಹಾಯಕ ಹಾಗೂ ಯುವ ಶ್ರವಣದೋಷವುಳ್ಳ ಮಕ್ಕಳ ಬೋಧಕ(ತಲಾ 01 ಹುದ್ದೆ); ಆರ್ಸಿಐ ಮಾನ್ಯತೆ ಪಡೆದ ಸಂಸ್ಥೆಯಿಂದ ಹಿಯರಿಂಗ್ ಲ್ಯಾಂಗ್ವೇಜ್ ಮತ್ತು ಸ್ಪೀಚ್ (ಡಿಎಚ್ಎಲ್ಎಸ್) ನಲ್ಲಿ ಒಂದು ವರ್ಷದ ಡಿಪ್ಲೊಮಾ ಪಡೆದ ತಾಂತ್ರಿಕ ವ್ಯಕ್ತಿ ಅರ್ಜಿ ಸಲ್ಲಿಸಬಹುದು.
✓ ANM/PHCO(01 ಹುದ್ದೆ); ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ANM ವಿದ್ಯಾರ್ಹತೆಯನ್ನು ಪಡೆದಿರಬೇಕು.
✓ ನೇತ್ರ ಸಹಾಯಕರು (01 ಹುದ್ದೆ); ಎರಡು ವರ್ಷದ Diploma in Optometry ಅಥವಾ ನೇತ್ರ ಸಹಾಯಕರು (Ophthalmic Assistant) ಆಗಿ ಮಾನ್ಯತೆ ಪಡೆದ ಸರ್ಕಾರಿ ಆಸ್ಪತ್ರೆಗಳಲ್ಲಿ NPCB ನಿಯಾಮಾನುಸಾರ ತರಬೇತಿ ಪಡೆದಿರಬೇಕು.
✓ ಕಿರಿಯ ಆರೋಗ್ಯ ಸಹಾಯಕರು (02 ಹುದ್ದೆಗಳಿಗೆ); ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ/ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ/ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿದೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿ/ಕರ್ನಾಟಕ ಆರೆ ವೈದ್ಯಕೀಯ ಮಂಡಳಿ ನಡೆಸುವ 3/2 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ ಪದವಿ ಪೂರ್ಣಗೊಳಿಸಿರಬೇಕು.
✓ ಉಡುಪಿಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 08 – ಶುಶ್ರೂಷಕರ ಹುದ್ದೆಗಳಿಗೆ; ಅಭ್ಯರ್ಥಿಗಳು ಕರ್ನಾಟಕ ಸರಕಾರದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಬಿ.ಎಸ್ಸಿ ನರ್ಸಿಂಗ್/ಜಿ.ಎನ್.ಎಂ/ಡಿಪ್ಲೋಮ ನರ್ಸಿಂಗ್ ಮಾಡಿರಬೇಕು. ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ KNC) ನೋಂದಾವಣಿಯಾಗಿರಬೇಕು.
ವಯಸ್ಸಿನ ಮಿತಿ:
ನಿಯಮಗಳ ಪ್ರಕಾರ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ 14,044ರೂ. ಗಳಿಂದ 1,40,000ರೂ. ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
• 15,000ರೂ. ಹಾಗೂ ಅದಕ್ಕಿಂತ ಕಡಿಮೆ ವೇತನವಿರುವ ಹುದ್ದೆಗೆ ಪಿ.ಎಫ್ ಸೌಲಭ್ಯ ನೀಡಲಾಗುವುದು.
ಆಯ್ಕೆ ವಿಧಾನ:
ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳನ್ವಯ ಮತ್ತು ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?
• ಉಡುಪಿ ಜಿಲ್ಲೆ ಅಧಿಕೃತ ಜಾಲತಾಣ https://udupi.nic.in/ ಕ್ಕೆ ಭೇಟಿ ನೀಡಿ.
ಇತ್ತೀಚಿನ ಸುದ್ದಿ ಶೀರ್ಷಿಕೆಯ ಕೆಳಗೆ ನೀಡಲಾಗಿರುವ “ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಾಗೂ ನಮ್ಮ ಕ್ಲಿನಿಕ್ಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಬಗ್ಗೆ ಪ್ರಕಟಣೆ – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಛೇರಿ, ಉಡುಪಿ ಜಿಲ್ಲೆ. New” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಅಥವಾ ಇಲ್ಲಿ ಕ್ಲಿಕ್ ಮಾಡುವ ಮೂಲಕ ಡೌನ್ಲೋಡ್ ಮಾಡಿ. ಮುದ್ರಣ ತೆಗೆದುಕೊಳ್ಳಿ.
• ನಂತರ ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ, ಶೈಕ್ಷಣಿಕ ದಾಖಲೆ, ಭಾವಚಿತ್ರ, ಜಾತಿ ಪ್ರಮಾಣ ಪತ್ರ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಅಕ್ಟೋಬರ್ 16ರ ಸಂಜೆ 4 ಗಂಟೆಯ ಒಳಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
✓ ವಿಳಾಸ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಛೇರಿ, ಜಿಲ್ಲಾ ಯೋಜನಾ ನಿರ್ವಹಣಾ ಘಟಕ ಎನ್.ಹೆಚ್.ಎಮ್ ಉಡುಪಿ ಜಿಲ್ಲೆ – 576101
Important Direct Links:
| Official Notification PDF | Download |
| Official Website | https://udupi.nic.in/ |
| More Updates | Karnataka Help.in |



