ಜಿಲ್ಲಾ ಆಸ್ಪತ್ರೆ ಮತ್ತು ನಮ್ಮ ಕ್ಲಿನಿಕ್ಗಳಲ್ಲಿ ಉದ್ಯೋಗಾವಕಾಶ
ಉಡುಪಿ: ಜಿಲ್ಲಾ ಆಸ್ಪತ್ರೆಯಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಾಗೂ ನಮ್ಮ ಕ್ಲಿನಿಕ್ಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೃದಯ ರೋಗ ತಜ್ಞ, ಕನ್ಸಲ್ಟಂಟ್ ಮೆಡಿಸಿನ್, ಫಿಜಿಶಿಯನ್, ಅರಿವಳಿಕೆ ತಜ್ಞ, ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ ಹಾಗೂ ಶುಶ್ರೂಷಕ ಸೇರಿದಂತೆ ಇತರೆ ಒಟ್ಟು 43 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಧಿಕೃತ ಜಾಲತಾಣ http://udupi.nic.in/ದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಜನವರಿ 16ರೊಳಗೆ ಇಲಾಖೆಯ ವಿಳಾಸಕ್ಕೆ ತಲುಪಿಸುವ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಆರೋಗ್ಯ ಸಂಘದ ಉಪಾಧ್ಯಕ್ಷರು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ (ವಿಜ್ಞಾನ), ಡಿಪ್ಲೋಮಾ, ಬಿ.ಎಸ್ಸಿ/ಎಂ.ಎಸ್.ಸಿ/ಪಿ.ಎಚ್.ಡಿ, ಬಿ.ಫಾರ್ಮ/ಡಿ.ಫಾರ್ಮ, ANM, DMLT/BSC MLT/MSc MLT/ ಎಂಬಿಬಿಎಸ್, ಎಂಡಿ ಪದವಿ ಪೂರ್ಣಗೊಳಿಸಿರಬೇಕು.
ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
ಉಡುಪಿ ಜಿಲ್ಲಾ ಆರೋಗ್ಯ ಸಂಘ ನಿಯಮಗಳ ಅನುಸಾರ ವಯೋಮಿತಿ ಹೊಂದಿರಬೇಕು.
ಆಯ್ಕೆ ವಿಧಾನ:
• ಅರ್ಹ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ • ಸಂದರ್ಶನ (ಅನ್ವಯಿಸಿದರೆ) • ಅಂತಿಮ ಆಯ್ಕೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ 14,044ರೂ. ಗಳಿಂದ 1,10,000ರೂ. ವರೆಗೆ ಮಾಹೆಯಾನ ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಹೇಗೆ… ಅರ್ಜಿ ಸಲ್ಲಿಸುವ ವಿಧಾನ?
• ಉಡುಪಿ ಜಿಲ್ಲೆಯ ಅಧಿಕೃತ ಜಾಲತಾಣ https://udupi.nic.in/ಕ್ಕೆ ಭೇಟಿ ನೀಡಿ.
• ನಂತರ ಇತ್ತೀಚಿನ ಸುದ್ದಿಗಳು ವಿಭಾಗದಲ್ಲಿ ನೀಡಲಾಗಿರುವ “ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಾಗೂ ನಮ್ಮ ಕ್ಲಿನಿಕ್ಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಪ್ರಕಟಣೆ – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ, ಉಡುಪಿ.” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ನೇಮಕಾತಿಯ ಪ್ರಕಟಣೆ ಹಾಗೂ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು.
• ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಈ ಕೆಳಗಿನ ವಿಳಾಸಕ್ಕೆ ಜನವರಿ 16ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ಜಿಲ್ಲಾ ಯೋಜನಾ ನಿರ್ವಹಣಾ ಘಟಕ ಎನ್.ಹೆಚ್.ಎಮ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಉಡುಪಿ ಜಿಲ್ಲೆ, ಅಜ್ಜರಕಾಡು, ಉಡುಪಿ – 576101
ಹೆಚ್ಚಿನ ಮಾಹಿತಿಗಾಗಿ: ದೂರವಾಣಿ ಸಂಖ್ಯೆ 0820-2525566/2536650 ಅನ್ನು ಸಂಪರ್ಕಿಸಬಹುದು.
Important Direct Links:
Official Notification PDF and Application Form PDF Link