ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಯು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿಗಾಗಿ ಮಾ.06 ರಿಂದ 30ರವರೆಗೆ ನಡೆಸಿದ್ದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ(ಸಿಯುಇಟಿ-ಪಿಜಿ)ಯ ತಾತ್ಕಾಲಿಕ ಕೀ ಉತ್ತರಗಳನ್ನು ಶನಿವಾರ(ಏ.11) ಬಿಡುಗಡೆಗೊಳಿಸಿದೆ.
ಪ್ರಕಟಿತ ಕೀ ಉತ್ತರಗಳಿಗೆ ಪ್ರತಿ ಪ್ರಶ್ನೆಗೆ ರೂ.200ರಂತೆ ಪಾವತಿಸಿ ಆಕ್ಷೇಪಣೆ ಸಲ್ಲಿಸಲು ಏ.14ರವೆರೆಗೆ ಅವಕಾಶವಿದೆ. ಅಭ್ಯರ್ಥಿಗಳು ಅಧಿಕೃತ ಜಾಲತಾಣ https://exams.nta.nic.in/answer-key-challenge-for-cuetpg-2026/ಕ್ಕೆ ಭೇಟಿ ನೀಡಿ.
ಸಿಯುಇಟಿ-ಪಿಜಿ 2026 ಕೀ ಉತ್ತರ ಹೇಗೆ ಡೌನ್ಲೋಡ್ ಮಾಡುವುದು?
ಅಭ್ಯರ್ಥಿಗಳು ಅಧಿಕೃತ ಲಿಂಕ್‌ಗೆ ಭೇಟಿ ನೀಡಿ. ಅಲ್ಲಿ ತಮ್ಮ ಅಪ್ಲಿಕೇಷನ್ ನಂಬರ್ ಮತ್ತು ಪಾಸ್ವರ್ಡ್ ಅಥವಾ ಹುಟ್ಟಿದ ದಿನಾಂಕ ಹಾಕಿ ಲಾಗಿನ್ ಆಗಬೇಕು. ನಂತರ “View Answer Sheet” ಲಿಂಕ್ ಮೇಲೆ ಒತ್ತುವ ಮೂಲಕ ಕೀ ಉತ್ತರ ವೀಕ್ಷಣೆ ಮಾಡಬಹುದು. ಆಕ್ಷೇಪಣೆ ಸಲ್ಲಿಸಲು ಇಚ್ಛಿಸಿದ್ದಲ್ಲಿ “Challenge” ಲಿಂಕ್ ಒತ್ತುವ ಮೂಲಕ ಸಲ್ಲಿಕೆ ಮಾಡಬಹುದು.
Important Direct Links:
| NTA CUET PG 2026 Provisional Key Answer Link | Login Now |
| Notice PDF | Download |
| Official Website | CUET PG |
| More Updates | KarnatakaHelp.in |