ವಿಕಾಸ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಅರ್ಜಿ ಆಹ್ವಾನ

ಎಸ್ಸೆಸ್ಸೆಲ್ಸಿ, ಪದವೀಧರರಿಗೆ ಆದ್ಯತೆ

Published on:

ವಿಜಯನಗರ: ಹೊಸಪೇಟೆಯ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕು ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ನಾನಾ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಏ.09ರಿಂದ ಪ್ರಾರಂಭವಾಗಿದೆ.

ವ್ಯವಸ್ಥಾಪಕ/ಹಿರಿಯ ಅಧಿಕಾರಿ-10, ಲೆಕ್ಕ ಪರಿಶೋಧಕ-04, ಕಾನೂನು ಅಧಿಕಾರಿ-02, ಪರೀಕ್ಷಾರ್ಥ ಅಧಿಕಾರಿ(ಪಿಒ)-20 ಹಾಗೂ ವಸೂಲಾತಿ ಸಹಾಯಕ/ಕಿರಿಯ ಸಹಾಯಕ-10 ಸೇರಿದಂತೆ ಒಟ್ಟು 46 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಪಿಒ ಹುದ್ದೆಗೆ ಮಾತ್ರ ಲಿಖಿತ ಪರೀಕ್ಷೆ ಹಾಗೂ ಇನ್ನುಳಿದ ಹುದ್ದೆಗಳನ್ನು ಮೌಖಿಕ ಸಂದರ್ಶನದ ಮೂಲಕ ನೇಮಕ ಮಾಡಲಿದೆ. ಆಸಕ್ತ ಅಭ್ಯರ್ಥಿಗಳು ವಿಕಾಸ ಬ್ಯಾಂಕ್ ಅಧಿಕೃತ ಜಾಲತಾಣ https://vikas.bank.in/page/272ಕ್ಕೆ ಭೇಟಿ ನೀಡಿ, ಏ.24ರೊಳಗೆ ಅರ್ಜಿ ಸಲ್ಲಿಸಬಹುದು.

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಏಪ್ರಿಲ್ 09, 2026
  • ಅರ್ಜಿ ಸಲ್ಲಿಸಲು‌ ಹಾಗೂ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಏಪ್ರಿಲ್ 24, 2026
  • ಪಿಒ ಆನ್ಲೈನ್ ಪರೀಕ್ಷೆಯ ದಿನಾಂಕ – ಏಪ್ರಿಲ್ 26, 2026
  • ಮೌಕಿಕ ಸಂದರ್ಶನ ನಡೆಯುವ ದಿನಾಂಕ – ಏಪ್ರಿಲ್ 27, 2026

ಶೈಕ್ಷಣಿಕ ಅರ್ಹತೆ:

✓ ವ್ಯವಸ್ಥಾಪಕ/ಹಿರಿಯ ಅಧಿಕಾರಿ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿಯೊಂದಿಗೆ ತಂತ್ರಜ್ಞಾನದ ಜ್ಞಾನ ಹೊಂದಿರಬೇಕು ಹಾಗೂ ಹಣಕಾಸು ಮತ್ತು ಬ್ಯಾಂಕಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

✓ ಲೆಕ್ಕ ಪರಿಶೋಧಕ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕಾಮರ್ಸ್/ಅಕೌಂಟಿಂಗ್ ವಿಭಾಗದಲ್ಲಿ ಪದವಿಯೊಂದಿಗೆ ಸಿಎ, ಸಿಎಂ ಮತ್ತು ಸಾಫ್ಟ್ ಸ್ಕಿಲ್ ಅರ್ಹತೆಯನ್ನು ಹೊಂದಿರಬೇಕು ಮತ್ತು ಲೆಕ್ಕಪರಿಶೋಧನೆಯಲ್ಲಿ ವಿಶೇಷ ಅರ್ಹತೆಯನ್ನು ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

✓ ಕಾನೂನು ಅಧಿಕಾರಿ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕಾನೂನಿನಲ್ಲಿ ಪದವಿ ಹಾಗೂ ಪ್ರಾಯೋಗಿಕ ಅನುಭವದೊಂದಿಗೆ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

✓ ಪರೀಕ್ಷಾರ್ಥ ಅಧಿಕಾರಿ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕಾಮರ್ಸ್, ಬ್ಯಾಂಕಿಂಗ್ ಮತ್ತು ಅಕೌಂಟಿಂಗ್ ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.

✓ ವಸೂಲಾತಿ ಸಹಾಯಕ/ಕಿರಿಯ ಸಹಾಯಕ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಎಸ್.ಎಸ್.ಎಲ್.ಸಿ (10ನೇ ತರಗತಿ) ಉತ್ತೀರ್ಣರಾಗಿರಬೇಕು.

ವಯೋಮಿತಿ:

01-04-2026 ರಂತೆ;

• ವ್ಯವಸ್ಥಾಪಕರು/ಹಿರಿಯ ಅಧಿಕಾರಿ, ಲೆಕ್ಕ ಪರಿಶೋಧಕರು ಹಾಗೂ ಕಾನೂನು ಅಧಿಕಾರಿ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ 35 ವರ್ಷಗಳು

• ಪರೀಕ್ಷಾರ್ಥ ಅಧಿಕಾರಿ ಹಾಗೂ ವಸೂಲಾತಿ ಸಹಾಯಕ/ಕಿರಿಯ ಸಹಾಯಕ ಹುದ್ದೆಗಳಿಗೆಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳು

ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

ಆನ್ಲೈನ್ ಪರೀಕ್ಷೆ(ಪಿಒ ಹುದ್ದೆಗೆ ಮಾತ್ರ)
ಮೌಖಿಕ ಸಂದರ್ಶನ
ಅಂತಿಮ ಮೆರಿಟ್ ಪಟ್ಟಿ

ವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಮಾನದಂಡಗಳ ಅನುಸಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ.500

ಅರ್ಜಿ‌ ಸಲ್ಲಿಸುವ ಸುಲಭ ವಿಧಾನ ಇಲ್ಲಿದೆ

• ಅಭ್ಯರ್ಥಿಗಳು ವಿಕಾಸ ಬ್ಯಾಂಕ್ ಅಧಿಕೃತ ಜಾಲತಾಣ https://vikas.bank.in/ ಕ್ಕೆ ಭೇಟಿ ನೀಡಿ.

• ಬಳಿಕ ಉದ್ಯೋಗ ಅಧಿಸೂಚನೆಗಳು ವಿಭಾಗದಲ್ಲಿ ನೀಡಲಾಗಿರುವ *Recruitment Notification – Applications are invited – For more details click here* ಆಯ್ಕೆಯನ್ನು ಆರಿಸಿ.

• ನಂತರ ಅಪ್ಲೈ ಆನ್ಲೈನ್ *Click here* ಆಯ್ಕೆ ಮೇಲೆ ಟ್ಯಾಪ್ ಮಾಡಿ.

• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ: ದೂರವಾಣಿ ಸಂಖ್ಯೆ 6364468045 ಅನ್ನು ಸಂಪರ್ಕಿಸಬಹುದು.

Important Direct Links:

Official Notification PDFDownload
Official Pre requisites/ Eligibility Terms and Conditions PDFDownload
Online Application Form LinkApply Now
Official Websitevikas.bank.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ವಿಕಾಸ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಅರ್ಜಿ ಆಹ್ವಾನ”

Leave a Comment