ಅಂಚೆ ಇಲಾಖೆ; ಜಿಡಿಎಸ್‌ 2ನೇ ಮೆರಿಟ್‌ ಪಟ್ಟಿ ಪ್ರಕಟ

Published on:

Updated On:

2026ನೇ ಸಾಲಿನ ಗ್ರಾಮೀಣ ಡಾಕ್‌ ಸೇವಕ್‌ ವೇಳಾಪಟ್ಟಿ-Iರ ನೇಮಕಾತಿಗೆ ಸಂಬಂಧಿಸಿದಂತೆ ಎರಡನೇ ಸುತ್ತಿನಲ್ಲಿ ಶಾರ್ಟ್‌ಲಿಸ್ಟ್‌ ಆಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಅಂಚೆ ಇಲಾಖೆಯು ಶುಕ್ರವಾರ(ಏ.10) ಪ್ರಕಟಿಸಿದೆ.

ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ ಆಫೀಸ್‌ ಜಿಡಿಎಸ್‌ 2ನೇ ಮೆರಿಟ್‌ ಪಟ್ಟಿಯನ್ನು ಇಲಾಖೆಯ ಅಧಿಕೃತ ಜಾಲತಾಣ https://indiapost.gov.in/gdsonlineengagementಕ್ಕೆ ಭೇಟಿ ನೀಡಿ ಡೌನ್ಲೋಡ್‌ ಮಾಡಿಕೊಳ್ಳಬಹುದು.

ದಾಖಲಾತಿ ಪರಿಶೀಲನೆಗೆ ಗಡುವು

ಶಾರ್ಟ್‌ಲಿಸ್ಟ್‌ ಆಗಿರುವ ಅಭ್ಯರ್ಥಿಗಳು ಏ.27ರೊಳಗೆ ತಮ್ಮ ಹೆಸರಿನ ಮುಂದೆ ನೀಡಲಾದ ವಿಭಾಗೀಯ ಕಚೇರಿಗೆ ನಿಗದಿತ ಮೂಲ ದಾಖಲೆಗಳ ಪ್ರತಿಗಳ ಜೊತೆಗೆ ಎರಡು ಸೆಟ್‌ ಝರಾಕ್ಸ್‌ ಪ್ರತಿಗಳೊಂದಿಗೆ ಭೇಟಿ ನೀಡಿ ದಾಖಲಾತಿ ಪರಿಶೀಲನೆ ಮಾಡಿಕೊಳ್ಳಲು ಇಲಾಖೆ ಸೂಚಿಸಿದೆ.

ಕರ್ನಾಟಕ ಪೋಸ್ಟ್‌ ಆಫೀಸ್‌ ಜಿಡಿಎಸ್‌ 2ನೇ ಮೆರಿಟ್‌ ಪಟ್ಟಿ 2026 ಪಿಡಿಎಫ್‌

ಕರ್ನಾಟಕ(Karnataka GDS 2026 2nd Merit List PDF)ಡೌನ್ಲೋಡ್‌ ಮಾಡಿ
ಇನ್ನುಳಿದ ರಾಜ್ಯ/ವೃತ್ತಗಳ 2ನೇ ಮೆರಿಟ್‌ ಪಟ್ಟಿಡೌನ್ಲೋಡ್‌

ಮೆರಿಟ್‌ ಪಟ್ಟಿ ಹೇಗೆ ಡೌನ್ಲೋಡ್‌ ಮಾಡುವುದು?

ಹಂತ-1 ಅಧಿಕೃತ ಜಾಲತಾಣ https://indiapost.gov.in/gdsonlineengagementಕ್ಕೆ ಭೇಟಿ.

India Post Office Gds 2Nd Merit List 2026 Download Link
ಭಾರತೀಯ ಅಂಚೆ ಇಲಾಖೆ ಜಿಡಿಎಸ್‌ 2ನೇ ಮೆರಿಟ್‌ ಪಟ್ಟಿ ಹೇಗೆ ಡೌನ್ಲೋಡ್‌ ಮಾಡುವ ವಿಧಾನ

ಹಂತ-2 ಮುಂದೆ, ಮುಖಪುಟದಲ್ಲಿ(ನಿಮ್ಮ ಎಡಭಾಗ) ನೀಡಲಾದ “Shortlisted Candidates: Schedule-1, January-2026” ಮೇಲೆ ಒತ್ತಿ, ನಂತರ ಅಲ್ಲಿ ರಾಜ್ಯಗಳ ಹೆಸರುಗಳು ಕಾಣುತ್ತವೆ ಅಲ್ಲಿ ನಿಮಗೆ ಬೇಕಾದ ರಾಜ್ಯದ ಮೇಲೆ ಒತ್ತಿ(ಉದಾ:ಕರ್ನಾಟಕ). ಮುಂದೆ “ಕರ್ನಾಟಕ”ರಾಜ್ಯದ ಹೆಸರಿನಡಿ ನೀಡಲಾದ “Supplimentary List – III” ಲಿಂಕ್‌ ಮೇಲೆ ಒತ್ತುವ ಮೂಲಕ 2ನೇ ಮೆರಿಟ್‌ ಪಟ್ಟಿ ಪಿಡಿಎಫ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು.

Important Direct Links:

Official Websitehttps://indiapost.gov.in/
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

5 thoughts on “ಅಂಚೆ ಇಲಾಖೆ; ಜಿಡಿಎಸ್‌ 2ನೇ ಮೆರಿಟ್‌ ಪಟ್ಟಿ ಪ್ರಕಟ”

Leave a Comment