ಆಯೋಗವು ಪರೀಕ್ಷೆಯನ್ನು ಏಪ್ರಿಲ್ 27 ರಿಂದ ಮೇ 30ರವರೆಗೆ ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಪರೀಕ್ಷಾ ಅವಧಿಯ ನಾಲ್ಕು ವಿಂಡೋಗಳನ್ನು SSC ಅಧಿಕೃತ ವೆಬ್ಸೈಟ್ https://ssc.gov.in/login ನಲ್ಲಿಬಿಡುಗಡೆ ಮಾಡಿದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷಾ ವಿಂಡೋಗಳಿಗೆ ತಮ್ಮ ಆದ್ಯತೆಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
SSC GD ಪರೀಕ್ಷಾ ವಿಂಡೋ ಆದ್ಯತೆಯ ಕ್ರಮವನ್ನು ಸಲ್ಲಿಸಲು ಸೂಚನೆ:
ಗಡಿ ಭದ್ರತಾ ಪಡೆ (BSF), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ಕೇಂದ್ರ ಮೀಸಲು ಪೊಲೀಸ್ ಪಡೆ (CRPF), ಇಂಡೋ ಟಿಬೆಟಿಯನ್ ಗಡಿ ಪೊಲೀಸ್ (ITBP), ಸಶಸ್ತ್ರ ಸೀಮಾ ಬಲ್ (SSB), ಮತ್ತು ಸೆಕ್ರೆಟರಿಯೇಟ್ ಭದ್ರತಾ ಪಡೆ (SSF), ಮತ್ತು ಅಸ್ಸಾಂ ರೈಫಲ್ಸ್ (AR) ನಲ್ಲಿ ರೈಫಲ್ಮ್ಯಾನ್) ಸೇರಿದಂತೆ ಒಟ್ಟು 25487 ಕಾನ್ಸ್ಟೇಬಲ್ GD ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ತಮ್ಮ ರುಜುವಾತುಗಳನ್ನು ಬಳಸಿಕೊಂಡು ಲಾಗಿನ್ ಆಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲಾ ವಿಂಡೋಗಳಿಗೂ ಆದ್ಯತೆಯ ಕ್ರಮವನ್ನು ಸೂಚಿಸಲು ಏಪ್ರಿಲ್ 11 ರಿಂದ 15 ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ.
SSC GD ಪರೀಕ್ಷಾ ಅವಧಿಯ ನಾಲ್ಕು ವಿಂಡೋಗಳು
• ವಾರ 1 :- ಏಪ್ರಿಲ್ 27 ರಿಂದ ಮೇ 02 ರವರೆಗೆ
• ವಾರ 2 :- ಮೇ 4 ರಿಂದ ಮೇ 09 ರವರೆಗೆ
• ವಾರ 3 :- ಮೇ 18 ರಿಂದ ಮೇ 23 ರವರೆಗೆ
• ವಾರ 4 :- ಮೇ 25 ರಿಂದ ಮೇ 30 ರವರೆಗೆ
SSC GD ಪರೀಕ್ಷಾ ಅವಧಿಯ ವಿಂಡೋ ಆಯ್ಕೆ ಮಾಡುವ ವಿಧಾನ
• ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್ಸೈಟ್ https://ssc.gov.in/ ಗೆ ಭೇಟಿ ನೀಡಿ.
• ಬಳಿಕ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಅಭ್ಯರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲಾ ವಿಂಡೋಗಳಿಗೂ ತಮ್ಮ ಆದ್ಯತೆಯ ಕ್ರಮವನ್ನು ಏಪ್ರಿಲ್ 15ರೊಳಗೆ ಸೂಚಿಸಬಹುದು.