ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲೆಯ ಮತ್ತು ತಾಲೂಕಿನ ಮಧ್ಯಸ್ಥಿಕೆ ಕೇಂದ್ರದಲ್ಲಿ ಮಧ್ಯವರ್ತಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ.
ಉಡುಪಿ ಜಿಲ್ಲೆ, ಕುಂದಾಪುರ, ಕಾರ್ಕಳ ತಾಲೂಕಿನ ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಒಟ್ಟು 33 ಮಧ್ಯವರ್ತಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.8ರೊಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಯ ಪ್ರಕಟಣೆಯ ದಿನಾಂಕ – ಡಿಸೆಂಬರ್ 02, 2025
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 08, 2025
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಅಧಿಕೃತ ಅಧಿಸೂಚನೆಯ ಪ್ರಕಾರ, 15 ವರ್ಷಗಳಿಗೂ ಹೆಚ್ಚು ಕಾಲ ಬಾರ್ ಕೌನ್ಸಿಲ್ನಲ್ಲಿ ಅಭ್ಯಾಸ ಮಾಡಿದ ವಕೀಲರು, ನಿವೃತ್ತರು, ನ್ಯಾಯಾಧೀಶರು, ಮಾಜಿ ಸೈನಿಕರು, ವಿಮಾ ಕಂಪನಿಗಳು, ಬ್ಯಾಂಕಿಂಗ್ ಸಂಸ್ಥೆಗಳ ಹಿರಿಯ ಅಧಿಕಾರಿಗಳು, ನಿವೃತ್ತರು, ಪ್ರಾಧ್ಯಾಪಕರು, ಶಿಕ್ಷಕರು ಹಾಗೂ ವೈದ್ಯರು ಅರ್ಜಿ ಸಲ್ಲಿಸಬಹುದು.
• ಅರ್ಜಿದಾರರು ಕರ್ನಾಟಕದ ಬಾರ್ ಕೌನ್ಸಿಲ್ನ ಪಟ್ಟಿಯಲ್ಲಿರುವಂತಹ ಆಯಾ ನ್ಯಾಯಾಲಯ ಕೇಂದ್ರದಲ್ಲಿ ವಕೀಲರಾಗಿ ಅಭ್ಯಾಸ ಮಾಡುತ್ತಿರಬೇಕು ಹಾಗೂ ಕನಿಷ್ಠ 15 ವರ್ಷಗಳ ಕಾಲ ವಕೀಲರಾಗಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಹೊಂದಿರಬೇಕು.
ವಯೋಮಿತಿ:
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಾನದಂಡಗಳ ಪ್ರಕಾರ.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು DMC ಈ ಕೆಳಗಿನ ನಾಲ್ಕು ವಿಷಯಗಳಲ್ಲಿ ಸಂದರ್ಶನವನ್ನು ನಡೆಸಲಾಗುತ್ತದೆ.
ಕಾನೂನು ಜ್ಞಾನ
ಸಮಗ್ರತೆ ಮತ್ತು ಸಮರ್ಪಣೆ
ಸಂವಹನ ಕೌಶಲ್ಯ
ಮಧ್ಯವರ್ತಿಯಾಗಿ ಸೇವೆ ಸಲ್ಲಿಸುವ ಮನೋಧರ್ಮ
ಸಂದರ್ಶನದಲ್ಲಿ ಗಳಿಸಿದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಸದರಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಸಂಬಳ:
ಆಯ್ಕೆಯಾದ ಮಧ್ಯವರ್ತಿಗಳಿಗೆ ಗೌರವಧನವನ್ನು KSLSA ಮತ್ತು MCPC ನಿಗದಿಪಡಿಸಿದ ದರ ಮತ್ತು ಮಾನದಂಡಗಳ ಪ್ರಕಾರ ಪಾವತಿಸಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ:
ಸದರಿ ಹುದ್ದೆಗಳ ಅರ್ಹತಾ ಮಾಡದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಪಡೆದು ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ ಹಾಗೂ ಅಗತ್ಯ ಮಾಹಿತಿಯನ್ನು ನಮೂದಿಸಿ.
• ನಂತರ ಅಭ್ಯರ್ಥಿಗಳು ಆಯಾ ಬಾರ್ ಅಸೋಸಿಯೇಷನ್ನಿಂದ ಅನುಬಂಧ-ಎ ಪ್ರಕಾರ ಅಭ್ಯಾಸ ಮತ್ತು ನಡವಳಿಕೆಯ ಪ್ರಮಾಣಪತ್ರದೊಂದಿಗೆ ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರ ಹಾಗೂ ಇತರೆ ಅಗತ್ಯ ದಾಖಲಾತಿ ಪ್ರಮಾಣಪತ್ರಗಳನ್ನು ಲಗತ್ತಿಸಿ. ಈ ಕೆಳಗಿನ ವಿಳಾಸಕ್ಕೆ ಡಿಸೆಂಬರ್ 8ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಠಡಿ ಸಂಖ್ಯೆ-05,ನೆಲಮಹಡಿ, ನ್ಯಾಯಾಲಯಗಳ ಸಂಕೀರ್ಣ, ಉಡುಪಿ – 576101
ಹೆಚ್ಚಿನ ಮಾಹಿತಿಗಾಗಿ: ಸಂಪರ್ಕ ಸಂಖ್ಯೆ – 0820-2523355 ಅಥವಾ ಇಮೇಲ್ ಐಡಿ dlsaudupi@gmail.com. ಅನ್ನು ಸಂಪರ್ಕಿಸಬಹುದು.