ಆರ್‌ಆರ್‌ಬಿ 9970 ಸಹಾಯಕ ಲೋಕೋ ಪೈಲೆಟ್ ಹುದ್ದೆಗಳ ಅರ್ಜಿ ಸ್ಥಿತಿ ಬಿಡುಗಡೆ

Published on:

ರೈಲ್ವೆ ನೇಮಕಾತಿ ಮಂಡಳಿಯು ಸಹಾಯಕ ಲೋಕೋ ಪೈಲೆಟ್ (ALP) ಹುದ್ದೆಗಳ ನೇಮಕಾತಿಗಾಗಿ ಸಲ್ಲಿಸಲಾದ ಅರ್ಜಿ ಸ್ಥಿತಿಯನ್ನು ಡಿ.05 ರಿಂದ ಪರಿಶೀಲನೆಗೆ ಅವಕಾಶ ನೀಡಿದೆ.

RRB CEN ಸಂಖ್ಯೆ 01/2025ರಡಿ 9970 ಸಹಾಯಕ ಲೋಕೋ ಪೈಲೆಟ್ ಹುದ್ದೆಗಳ ಭರ್ತಿಗಾಗಿ ಅಧಿಸೂಚಿಸಿ, ಅರ್ಜಿ ಸ್ವೀಕರಿಸಿತ್ತು. ಸದರಿ ಹುದ್ದೆಗಳಿಗೆ ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಅರ್ಜಿಗಳ ಸ್ಥಿತಿಯನ್ನು ಆರ್‌ಆರ್‌ಬಿ ಆನ್‌ಲೈನ್‌ ಅಧಿಕೃತ ಜಾಲತಾಣ https://www.rrbapply.gov.in/ದಲ್ಲಿ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸ್ವೀಕರಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು ಎಂದು ಮಂಡಳಿ ಹೊರಡಿಸಿದ ಪ್ರಕಟಣೆ ತಿಳಿಸಲಾಗಿದೆ.

SMS ಮತ್ತು ಇ-ಮೇಲ್ ಮೂಲಕ ಅರ್ಜಿ ಸ್ಥಿತಿಯ ಮಾಹಿತಿ:

RRB ALP ಅರ್ಜಿ ಸ್ಥಿತಿಯ ಕುರಿತು ಮಾಹಿತಿಯನ್ನು ಅಭ್ಯರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಗೆ SMS ಮತ್ತು ಇ-ಮೇಲ್ ಕಳುಹಿಸಲಾಗುತ್ತದೆ. ಹಾಗೂ ಎಲ್ಲಾ ಅರ್ಹ ಅಥವಾ ಸ್ವೀಕರಿಸಲ್ಪಟ್ಟ ಅಭ್ಯರ್ಥಿಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿರುತ್ತಾರೆ.

RRB ALP ಹುದ್ದೆಗಳ ಅರ್ಜಿ ಸ್ಥಿತಿ ಪರಿಶೀಲಿಸುವ ವಿಧಾನ:

• ಅಭ್ಯರ್ಥಿಗಳು RRB ಅಧಿಕೃತ ವೆಬ್ಸೈಟ್ https://www.rrbapply.gov.in/#/auth/homeಗೆ ಭೇಟಿ ನೀಡಿ.

• ನಂತರ ಮೊಬೈಲ್ ಸಂಖ್ಯೆ/ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• “CEN ಸಂಖ್ಯೆ 01/2025 (ALP) ಹುದ್ದೆಗಳ ಅರ್ಜಿ ಸ್ಥಿತಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ ನಿಮ್ಮ ಅರ್ಜಿ ಸ್ಥಿತಿ ಪರದೆಯ ಮೇಲೆ ಕಾಣಿಸುತ್ತದೆ.

• ಅಭ್ಯರ್ಥಿಗಳು ತಮ್ಮ ಅರ್ಜಿಗಳು ಅರ್ಜಿಗಳನ್ನು ಸ್ವೀಕರಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ: ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಸಹಾಯವಾಣಿ ಸಂಖ್ಯೆ – 9592-001-188, 0172-565-3333 ಅಥವಾ RRB ಇ-ಮೇಲ್ ಐಡಿ rrb.help@csc.gov.in ಅನ್ನು ಸಂಪರ್ಕಿಸಬಹುದು.

Important Direct Links:

RRB Alp application status 2025 Official Notice PDFDownload
RRB Alp application status 2025 Check LinkCheck Now
Official WebsiteRRBs
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

5 thoughts on “ಆರ್‌ಆರ್‌ಬಿ 9970 ಸಹಾಯಕ ಲೋಕೋ ಪೈಲೆಟ್ ಹುದ್ದೆಗಳ ಅರ್ಜಿ ಸ್ಥಿತಿ ಬಿಡುಗಡೆ”

  1. ರೈಲ್ವೆ ನೇಮಕತಿ ಮಂಡಳಿಯು ಸಹಾಯಕ ಲೋಕೊ ಪೈಲೇಟ್ (ALP)ಹುದ್ದೆ ನೇಮಕಾತಿಗಾಗಿ ಸಲ್ಲಿಸಿದ ಅರ್ಜಿ ಸ್ಥಿತಿಯನ್ನು ಡಿ. 05ರಿಂದ ಪರಿಶೀಲನೆಗೆ ಅವಕಾಶ ನೀಡಿದೆ

    Reply

Leave a Comment