ಇತ್ತೀಚಿನ ಅಧ್ಯಯನವೊಂದು ನಮ್ಮ ಊಟದ ಸಮಯವು ಹೃದಯ ರಕ್ತನಾಳದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿದೆ. ಅಧ್ಯಯನದಲ್ಲಿ ರಾತ್ರಿ 9 ಗಂಟೆಯ ನಂತರ ಊಟ ಮಾಡುವವರಿಗೆ ಸ್ಟ್ರೋಕ್ ಅಥವಾ ಪಾರ್ಶ್ವವಾಯು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ರಾತ್ರಿ 9 ಗಂಟೆ ಮೇಲೆ ಊಟ – ಹಾನಿಕರ
NCBIಯ ಸಂಶೋಧನೆಯ ಪ್ರಕಾರ ರಾತ್ರಿ 9 ಗಂಟೆಯ ನಂತರ ಊಟ ಮಾಡುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಏಕೆಂದರೆ ನಿದ್ರೆ ಮತ್ತು ಊಟದ ನಡುವೆ 2 ಗಂಟೆಗಳ ಅಂತರವನ್ನು ಹೊಂದಿರುವುದು ಬಹಳ ಮುಖ್ಯ. ಜನರು ಆಹಾರವನ್ನು ಸೇವಿಸಿದ ತಕ್ಷಣ ಮಲಗಿದಾಗ, ಆಹಾರವು ಸರಿಯಾಗಿ ಜೀರ್ಣವಾಗದಿದ್ದಾಗ ದೇಹದ ಚಯಾಪಚಯವು ನಿಧಾನಗತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ದೇಹವು ಅನೇಕ ರೋಗಗಳನ್ನು ಆಹ್ವಾನಿಸುತ್ತದೆ.