SC ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಿಗಾಗಿ ಅರ್ಜಿ ಆಹ್ವಾನ | Dr.B.R.Ambedkar Nigam Loan Scheme 2024

Follow Us:

Ambedkar Nigam Loan Scheme Online Application 2024

Dr.B.R.Ambedkar Nigam Loan Scheme 2024: ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಇಂದು ನಾವು “ಡಾ: ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ” ದಿಂದ ನೀಡುವ ವಿವಿಧ ಯೋಜನೆಗಳ (Dr.B.R.Ambedkar Development Corporation) ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಯಿಸಿದ್ದೇವೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದಿಂದ ವಿವಿಧ ಸಹಾಯಧನ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸಬಯಸುವ ಅರ್ಹ ಫಲಾನುಭವಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ, ಜೊತೆಗೆ ನಿಮ್ಮ ಹಿತೈಶಿಗಳಿಗೂ ತಪ್ಪದೇ ಶೇರ್ ಮಾಡಿ.

Dr B R Ambedkar Nigam Loan Scheme 2024

2024-25ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್‌ ಲೈನ್‌ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

√ ಸ್ವಯಂ ಉದ್ಯೋಗ ನೇರಸಾಲ ಯೋಜನೆ
√ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ
√ ಸ್ವಾವಲಂಬಿ ಸಾರಥಿ/ಐರಾವತ ಯೋಜನೆ
√ ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ
√ ಭೂ ಒಡೆತನ ಯೋಜನೆ
√ ಗಂಗಾ ಕಲ್ಯಾಣ ಯೋಜನೆ

Ambedkar Nigam Loan Scheme Online Application 2024
Ambedkar Nigam Loan Scheme Online Application 2024

ಸ್ವಯಂ ಉದ್ಯೋಗ ನೇರಸಾಲ ಯೋಜನೆ:

ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುತ್ತದೆ.

  • ಘಟಕ ವೆಚ್ಚ: ರೂ. 1.00 ಲಕ್ಷ
  • ಸಹಾಯಧನ: ರೂ. 50,000/-
  • ಸಾಲ: ರೂ. 50,000/- (ಶೇಕಡ 4ರಷ್ಟು ಬಡ್ಡಿದರ)

ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್‌ಗಳ ಸಹಯೋಗದೊಂದಿಗೆ):

ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಈ ಕೆಳಕಂಡಂತೆ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್‌ ಸಾಲವಾಗಿರುತ್ತದೆ.

  • ಘಟಕ ವೆಚ್ಚದ ಶೇ.70ರಷ್ಟು ಸಹಾಯಧನ ಅಥವಾ ಗರಿಷ್ಟ ರೂ.1.00 ಲಕ್ಷ
  • ಘಟಕ ವೆಚ್ಚದ ಶೇ.70ರಷ್ಟು ಸಹಾಯಧನ ಅಥವಾ ಗರಿಷ್ಟ ರೂ.2.00 ಲಕ್ಷ

ಸ್ವಾವಲಂಬಿ ಸಾರಥಿ:

ಸರಕು ವಾಹನ/ಟ್ಯಾಕ್ಸಿ (ಹಳದಿ ಬೋರ್ಡ್‌) ಖರೀದಿಸುವ ಉದ್ದೇಶಕ್ಕೆ.

  • ಘಟಕ ವೆಚ್ಚದ ಶೇ.75 ರಷ್ಟು ಸಹಾಯಧನ ಅಥವಾ ಗರಿಷ್ಟ ರೂ. 4.00 ಲಕ್ಷ

ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ:

ಮಹಿಳಾ ಸ್ವಸಹಾಯ ಸಂಘಗಳಿಗೆ (ಕನಿಷ್ಟ 10 ಸದಸ್ಯರು) ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುವುದು.

  • ಘಟಕ ವೆಚ್ಚ: ರೂ. 2.50 ಲಕ್ಷ
  • ಸಹಾಯಧನ: ರೂ.1.50 ಲಕ್ಷ
  • ಸಾಲ: ರೂ. 1.00 ಲಕ್ಷ (ಶೇಕಡ 4ರಷ್ಟು ಬಡ್ಡಿದರ)

ಭೂ ಒಡೆತನ ಯೋಜನೆ:

ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಈ ಕೆಳಕಂಡ ಘಟಕ ವೆಚ್ಚದಲ್ಲಿ ಕೃಷಿ ಜಮೀನು ಖರೀದಿಸಿ ನೀಡಲಾಗುವುದು.

  • ಘಟಕ ವೆಚ್ಚ: ರೂ. 25.00 ಲಕ್ಷ / ರೂ. 20.00 ಲಕ್ಷ
  • ಸಹಾಯಧನ: ಶೇ. 50%
  • ಸಾಲ: ಶೇ. 50% (ಶೇಕಡ 6ರಷ್ಟು ಬಡ್ಡಿದರ)

ಗಂಗಾ ಕಲ್ಯಾಣ ಯೋಜನೆ:

1.20 ಎಕರೆ ಯಿಂದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೊಳವೆಬಾವಿ ಕೊರೆದು ಪಂಪ್‌ಸೆಟ್ ಅಳವಡಿಸಿ, ವಿದ್ಯುದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗುವುದು.

  • ಘಟಕ ವೆಚ್ಚ: ರೂ. 4.75 ಲಕ್ಷ / ರೂ. 3.75 ಲಕ್ಷ – ಇದರಲ್ಲಿ ರೂ. 50,000/- ಸಾಲವೂ ಸೇರಿರುತ್ತದೆ

Last Date Of Ambedkar Nigama Online Application 2024-25

www.adcl.karnataka.gov.in Application Form 2024 Last Date: October 10, 2024

ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಛೇರಿ ಅಥವಾ ನಿಗಮಗಳ ವೆಬ್ ಸೈಟ್ ಅಥವಾ ಕಲ್ಯಾಣಮಿತ್ರ ಏಕೀಕೃತ ಎಸ್.ಸಿ | ಎಸ್.ಟಿ ಸಹಾಯವಾಣಿ 9482-300-400 ಸಂಪರ್ಕಿಸುವುದು.

ಗಮನಿಸಿ: ಅರ್ಹ ಫಲಾಪೇಕ್ಷಿಗಳು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ-ಒನ್, ಕರ್ನಾಟಕ-ಒನ್ ಹಾಗೂ ಬೆಂಗಳೂರು-ಒನ್ ನಾಗರಿಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸತಕ್ಕದು. ಹಾಗೂ ಫಲಾಪೇಕ್ಷಿಗಳು ಈ ಕೆಳಕಂಡ ಲಿಂಕ್‌ನಲ್ಲಿ ಸಹ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

Important Direct Links:

Online Application Form Link
ಅಧಿಕೃತ ಜಾಲತಾಣadcl.karnataka.gov.in
ಮತ್ತಷ್ಟು ಮಾಹಿತಿಗಾಗಿKarnatakaHelp.in

ಪ.ಜಾತಿ/ಪ.ಪಂಗಡ ವಿವಿಧ ಸಬ್ಸಿಡಿ ಸಾಲ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ | SC ST Subsidy Loan Scheme in Karnataka 2024 Apply Online

ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಕೆ ಪ್ರಾರಂಭ | Swavalambi Sarathi 2024 Karnataka Apply Online

ಗಂಗಾ ಕಲ್ಯಾಣ ಉಚಿತ ಬೋರ್‌ವೇಲ್ ಯೋಜನೆ ಅರ್ಜಿ ಸಲ್ಲಿಕೆ ಪ್ರಾರಂಭ | Ganga Kalyana Yojana Online Application 2024 Apply Online

‘ಐರಾವತ ಯೋಜನೆ’ 4.00 ಲಕ್ಷ ಸಹಾಯಧನ | Airavata Scheme Karnataka Online Application 2024

FAQs – SC Nigam Loan Scheme 2024

How to Apply Online For Ambedkar Nigam Loan Scheme 2024?

Visit Official Website to Apply Online SC Subsidy Loan Schemes 2024

What is the Last Date Of Dr BR Ambedkar Sc/St Loans 2024-25 Online Application?

October 10, 2024