KCET/NEET: ಯುಜಿಸಿಇಟಿ,ಯುಜಿನೀಟ್​ – 1ನೇ ಸುತ್ತಿನ ಸೀಟು ಹಂಚಿಕೆ ನಂತರದ ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

Published on:

ಯುಜಿಸಿಇಟಿ/ಯುಜಿನೀಟ್ ಕೋರ್ಸುಗಳಿಗೆ ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಇಚ್ಛೆ/ಆಯ್ಕೆಗಳನ್ನು ಆಯ್ಕೆ ಮಾಡಿಕೊಂಡು, ನಿಗದಿತ ಶುಲ್ಕ ಪಾವತಿ ಮಾಡಲು ಹಾಗು ಆಯಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆ.13ರಂದು ಬಿಡುಗಡೆ ಮಾಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ಎಚ್​.ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವದೆಹಲಿಯ ವೈದ್ಯಕೀಯ ಸಲಹಾ ಸಮಿತಿ (MCC) ಆ.12ರಂದು ಅಖಿಲ ಭಾರತ ವೈದ್ಯಕೀಯ ಸೀಟುಗಳ ಹಂಚಿಕೆಯ ಮೊದಲನೇ ಸುತ್ತಿನ ತಾತ್ಕಾಲಿಕ ಫಲಿತಾಂಶವನ್ನು ಘೋಷಿಸಿತ್ತು. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಫಾರ್ಮ-ಡಿ ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ, ಆಲೈಡ್ ಹೆಲ್ತ್ ಸೈನ್ಸ್, ಆರ್ಕಿಟೆಕ್ಚರ್, ಬಿ.ಎಸ್.ಸಿ (ನರ್ಸಿಂಗ್), ಹೋಮಿಯೋಪತಿ, ವೈದ್ಯಕೀಯ ಹಾಗೂ ದಂತವೈದ್ಯಕೀಯ ಕೋರ್ಸುಗಳ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶದ ನಂತರ ಅಭ್ಯರ್ಥಿಗಳಿಗೆ ಮುಂದಿನ ವಿಧಾನದ ( Choice ಗಳನ್ನು ಆಯ್ಕೆ ಮಾಡಿಕೊಳ್ಳಲು, ಶುಲ್ಕ ಪಾವತಿ ಮಾಡಲು ಹಾಗೂ ಆಯಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು) ಪರಿಷ್ಕೃತ ವೇಳಾಪಟ್ಟಿಯನ್ನು KEA ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ನಲ್ಲಿ ಬಿಡುಗಡೆ ಮಾಡಲಾಗಿದೆ.

ಇಂಜಿನಿಯರಿಂಗ್ ಸೇರಿ ವಿವಿಧ ಕೋರ್ಸ್​ಗಳ ಛಾಯ್ಸ್​ ಆಯ್ಕೆಗೆ 14ನೇ ತಾರೀಖು ಕೊನೆ ದಿನ

ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಫಾರ್ಮ-ಡಿ ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ, ಆಲೈಡ್ ಹೆಲ್ತ್ ಸೈನ್ಸ್, ಆರ್ಕಿಟೆಕ್ಚರ್, ಬಿ.ಎಸ್.ಸಿ (ನರ್ಸಿಂಗ್), ಹೋಮಿಯೋಪತಿ ಕೋರ್ಸುಗಳ ಅಭ್ಯರ್ಥಿಗಳು ಆ.14ರೊಳಗೆ ಛಾಯ್ಸ್​ಗಳನ್ನು ಆಯ್ಕೆ ಮಾಡಿ, ಶುಲ್ಕ ಪಾವತಿಸಿ ನಂತರ Confirmation Slip Download ಮಾಡಿಕೊಂಡು. ಬಳಿಕ ಆ.15 ರೊಳಗೆ ಆಯಾ ಕಾಲೇಜಿನಲ್ಲಿ ವರದಿ ಮಾಡಿಕೊಳ್ಳಬೇಕು.

ವೈದ್ಯಕೀಯ, ದಂತವೈದ್ಯಕೀಯ ಕೋರ್ಸುಗಳ ಅಭ್ಯರ್ಥಿಗಳು –

ಅಭ್ಯರ್ಥಿಗಳಿಗೆ ಛಾಯ್ಸ್​​ಗಳನ್ನು ಆಯ್ಕೆ ಮಾಡಲು ಆ.14 ರಿಂದ 16 ರವರೆಗೆ ಕಾಲಾವಕಾಶವನ್ನು ನೀಡಲಾಗಿದ್ದು, Choice 1 ಆಯ್ಕೆ ಮಾಡಿದ ಅಭ್ಯರ್ಥಿಗಳು ಆ.14 ರಿಂದ 18ರೊಳಗೆ ಶುಲ್ಕ ಪಾವತಿ ಮಾಡಿ ನಂತರ Confirmation Slip Download ಮಾಡಿಕೊಂಡು, ಆ.19 ರೊಳಗೆಶುಲ್ಕ ಪಾವತಿ ಹಾಗು ಡೌನ್‌ ಲೋಡ್ ಮಾಡಿದ Confirmation Slip ನೊಂದಿಗೆ ಸಂಬಂಧಿಸಿದಕಾಲೇಜಿನಲ್ಲಿ ವರದಿ ಮಾಡಿಕೊಳ್ಳಬೇಕು.

Important Direct Links:

UGCET/UGNEET 2025 1st Round Seat Allotment Revised schedule PDF(Dated on 13/8/2025)Download
Official Websitekea.kar.nic.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “KCET/NEET: ಯುಜಿಸಿಇಟಿ,ಯುಜಿನೀಟ್​ – 1ನೇ ಸುತ್ತಿನ ಸೀಟು ಹಂಚಿಕೆ ನಂತರದ ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ”

Leave a Comment