Driving Licence Online Apply: (ಡ್ರೈವಿಂಗ್ ಲೈಸೆನ್ಸ್)ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ ಈ ಲೇಖನ ಗಮನಿಸಿ

Follow Us:

Driving Licence Online Apply: ಡ್ರೈವಿಂಗ್ ಲೈಸೆನ್ಸ್ (Driving Licence): ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವಾಹನ ಸವಾರರಿಗೆ ಒಂದು ಪ್ರಮುಖ ದಾಖಲೆಯಾಗಿದೆ. ವಾಹನ ಹೊಂದಿರುವ ಪ್ರತಿಯೊಬ್ಬ ನಾಗರಿಕರು ಡ್ರೈವಿಂಗ್ ಲೈಸನ್ಸ್ ಅನ್ನು ಕಡ್ಡಾಯವಾಗಿ ಕಾನೂನನ್ನು ರೂಪಿಸಲಾಗಿದೆ. ಹಾಗಾಗಿ ಡ್ರೈವಿಂಗ್ ಲೈಸೆನ್ಸ್ ಗೆ ಮನೆಯಲ್ಲಿ ಕೂತು ಅರ್ಜಿ ಸಲ್ಲಿಸುವುದು ಹೇಗೆ, ಅದನ್ನು ಪಡೆದುಕೊಳ್ಳುವುದು ಹೇಗೆ, ಅದಕ್ಕೆ ಅಗತ್ಯವಿರುವ ದಾಖಲೆಗಳು ಯಾವ್ಯಾವು, ಇದರ ಕುರಿತಂತೆ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ತಪ್ಪದೆ ಗಮನಿಸಿ.

ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕಚೇರಿಯಿಂದ ಕಚೇರಿಗೆ ವಾಹನ ಸವಾರರು ಅಲೆದಾಡಬೇಕಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರವು ಕಚೇರಿಗೆ ಹೆಚ್ಚು ಜನರು ಬಂದು ದಗುಡಾಯಿಸುವುದನ್ನು ತಪ್ಪಿಸಲು ಮತ್ತು ಗ್ರಾಹಕರಿಗೆ ಉಪಯುಕ್ತವಾಗುವಂತೆ ಸಾರಿಗೆ ಇಲಾಖೆಯ ಅಧಿಕೃತ https://parivahan.gov.in/parivahan/ ವೆಬ್ ಸೈಟನ್ನು ಪ್ರಾರಂಭಿಸಿದ್ದು ಇದರ ಮೂಲಕ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳಿಗೆ ಅರ್ಜಿ ಸಲ್ಲಿಸಲು ಮತ್ತು ಪಡೆದುಕೊಳ್ಳಲು ಅನುಕೂಲವಾಗುವಂತೆ ಮಾಡಿದೆ. ಈ ನಿಟ್ಟಿನಲ್ಲಿ ವಾಹನ ಸವಾರಿ ಗೆ ಡ್ರೈವಿಂಗ್ ಲೈಸೆನ್ಸ್ ಅಗತ್ಯವಾಗಿದ್ದು ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿಯೋಣ.

ಮೊದಲಿಗೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ನೀವು ಆನ್‌ಲೈನ್‌ನಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಿದರೂ, ನಿಮ್ಮ ಲೈಸೆನ್ಸ್ ಪಡೆಯಲು ನೀವು ಹತ್ತಿರದ ಆರ್​ಟಿಒ ಆಫೀಸಿಗೆ ಹೋಗಬೇಕಾಗುತ್ತದೆ ಮತ್ತು ಕನಿಷ್ಠ 18 ವರ್ಷ ತುಂಬಿ ರಸ್ತೆ ಸಂಚಾರ ನಿಯಮದ ಬಗ್ಗೆ ತಿಳಿದಿದ್ದರೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಭಾರತದ ಡ್ರೈವಿಂಗ್ ಲೈಸನ್ಸ್ ನಿಯಮದ ಪ್ರಕಾರ ಮೊದಲು ನೀವು ಲರ್ನರ್ ಲೈಸೆನ್ಸ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹಾಗಾದರೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಮಾಹಿತಿ ಈ ಕೆಳಗಿನ ನೀಡಲಾಗಿದೆ.

Driving Licence Online Apply
Driving Licence Online Apply

How to Apply Parivahan Driving Licence Online Apply 2024

ಡ್ರೈವಿಂಗ್ ಲೈಸೆನ್ಸ್ ಗೆ ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸುವುದು ಹೇಗೆ..?

  • ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್​ನಲ್ಲಿ ಅಧಿಕೃತ ಸರ್ಕಾರಿ ವೆಬ್‌ಸೈಟ್ https://parivahan.gov.in/parivahan/  ಭೇಟಿ ನೀಡಿ
  • ಆನ್​ಲೈನ್ ಸರ್ವಿಸ್ ಆಯ್ಕೆ ಮಾಡಿ ಮತ್ತು ಡ್ರೈವಿಂಗ್ ಲೈಸೆನ್ಸ್ ಸೇವೆಗಳ ಮೇಲೆ ಕ್ಲಿಕ್ ಮಾಡಿ.
  • ನೀವು ವಾಸವಿರುವ ರಾಜ್ಯವನ್ನು ಆರಿಸಿ.
  • ಬಳಿಕ ‘Learner’s Licence Application’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಇಲ್ಲಿ ಪಟ್ಟಿ ಮಾಡಲಾದ ಮಾರ್ಗಸೂಚಿಗಳನ್ನು ಗಮನಿಸಿ ಓದಿ ಮತ್ತು ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ಲರ್ನಿಂಗ್ ಲೈಸೆನ್ಸ್ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಕೊನೆಯದಾಗಿ ಪರೀಕ್ಷೆಯ ದಿನಾಂಕವನ್ನು ಆಯ್ಕೆಮಾಡಿ ಮತ್ತು ಪಾವತಿ ಆನ್‌ಲೈನ್ ಮೂಲಕವೇ ಮಾಡಿ.

ಹೀಗೆ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಮೊಬೈಲ್ ಸಂಖ್ಯೆ ಸಂದೇಶ ಬರುತ್ತದೆ, ಮತ್ತು ನಿಮ್ಮ ಅರ್ಜಿ ನಮೂನೆಯನ್ನು ಭವಿಷ್ಯದ ಉದ್ದೇಶಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.ಇದು ಮೂರು ದಿನಗಳ ಅವಧಿಯ ಒಳಗೆ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. ತದನಂತರ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಆರ್ ಟಿ ಓ ಕಚೇರಿಗೆ ಭೇಟಿ ನೀಡಿ.

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Links:

Official Websiteparivahan.gov.in
More UpdatesKarnatakaHelp.in

Leave a Comment