ESISMSನಲ್ಲಿ ವೈದ್ಯಾಧಿಕಾರಿಗಳ ನೇಮಕ; ಮಾಸಿಕ ₹60,000 ವೇತನ

ಜ.21ಕ್ಕೆ ಸಂದರ್ಶನ

Published on:

ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು(ESISMS) ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಜಿಲ್ಲೆಗಳ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿಗೆ ವಿಮಾ ವೈದ್ಯಾಧಿಕಾರಿಗಳ ಭರ್ತಿಗಾಗಿ ನೇರ ಸಂದರ್ಶನ ಜ.21ರಂದು ಜರುಗಲಿದೆ ಎಂದು ಇಲಾಖೆಯ ಆಯುಕ್ತರು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ವಲಯ(08),ದಾವಣಗೆರೆ ವಲಯ(02), ಬೆಳಗಾವಿ ವಲಯ(04), ಮೈಸೂರು ವಲಯ(02), ಹುಬ್ಬಳ್ಳಿ ವಲಯ(07) ಹಾಗೂ ಬೆಂಗಳೂರು ವಲಯ(09) ಸೇರಿದಂತೆ ಒಟ್ಟು 32 ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಆಸಕ್ತ ಎಂಬಿಬಿಎಸ್‌ ಅಭ್ಯರ್ಥಿಗಳು ಇಲಾಖೆಯು ಗೊತ್ತುಪಡಿಸಿದ ವಲಯವಾರು ವಿಳಾಸದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಲು ಸೂಚಿಸಲಾಗಿದೆ.

ನೇಮಕಾತಿಯ ಪ್ರಮುಖ ದಿನಾಂಕಗಳು:

  • ನೇಮಕಾತಿ ಪ್ರಕಟಣೆಯ ದಿನಾಂಕ – ಜನವರಿ 07, 2026
  • ನೇರ ಸಂದರ್ಶನ ನಡೆಯುವ ದಿನಾಂಕ – ಜನವರಿ 21, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಂ.ಬಿ.ಬಿ.ಎಸ್. ಪದವಿ ಪೂರ್ಣಗೊಳಿಸಿರಬೇಕು ಜೊತೆಗೆ ಅದಕ್ಕಿಂತ ಹೆಚ್ಚಿನ ವ್ಯಾಸಂಗ ಮಾಡಿರುವ ತಜ್ಞ ವೈದ್ಯರೂ ಸಹಾ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ವಯೋಮಿತಿ:

ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು

ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
ಪುವರ್ಗ-2ಎ, 2ಬಿ, 3ಎ, ಮತ್ತು 3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ – 38 ವರ್ಷಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹೆಯಾನ 60,000ರೂ. ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.

ಆಯ್ಕೆ ವಿಧಾನ:

ಎಂ.ಬಿ.ಬಿ.ಎಸ್. ಪದವಿಯಲ್ಲಿ ಹೆಚ್ಚಿನ ಗಳಿಸಿದ ಅಂಕಗಳ ಆಧಾರದ ಮೇಲೆ ಮೀಸಲಾತಿಗನುಗುಣವಾಗಿ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕ:

ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿರುವುದಿಲ್ಲ

ಅರ್ಜಿಯೊಂದಿಗೆ ಲಗತ್ತಿಸಬೇಕಾದ ಅಗತ್ಯ ದಾಖಲೆಗಳು:

  • ಎಸ್.ಎಸ್.ಎಲ್.ಸಿ. ಅಂಕಪಟ್ಟಿ
  • ಕ್ಯುಮಿಲೇಟಿವ್ ದಾಖಲೆ ಪ್ರತಿ
  • ಶೈಕ್ಷಣಿಕ ದಾಖಲೆಗಳು
  • ಜಾತಿ ಪ್ರಮಾಣ ಪತ್ರ
  • ಇತ್ತೀಚಿನ 2 ಭಾವಚಿತ್ರಗಳು

ಅರ್ಜಿ ಸಲ್ಲಿಕೆ ಹೇಗೆ.?

• ಅಭ್ಯರ್ಥಿಗಳು ಮೊದಲಿಗೆ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ ಅಧಿಕೃತ ಜಾಲತಾಣ https://esisms.karnataka.gov.in/ಕ್ಕೆ ಭೇಟಿ ನೀಡಿ.

• ನಂತರ ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು. (ಅರ್ಜಿ ನಮೂನೆ ಪಿಡಿಎಫ್‌ ಲಿಂಕ್‌ ಈ ಸುದ್ದಿಯ ತ್ವರಿತ ಲಿಂಕ್‌ ವಿಭಾಗದಲ್ಲಿ ನೀಡಲಾಗಿದೆ)

• ಅರ್ಜಿಯಲ್ಲಿ ಕೇಳಲಾಗುವ ಮೂಲ ಮಾಹಿತಿ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.

• ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಈ ಕೆಳಗೆ ನೀಡಲಾಗಿರುವ ವಲಯವಾರು ಸ್ಥಳಗಳಲ್ಲಿ ಜನವರಿ 21ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಸಲಾಗುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ವಲಯವಾರು ನೇರ ಸಂದರ್ಶನ ನಡೆಯುವ ಸ್ಥಳ:

ಮಂಗಳೂರು ವಲಯ – ಕಾರಾವಿ. ಆಸ್ಪತ್ರೆ, ಕದ್ರಿ, ಶಿವಭಾಗ್, ಮಂಗಳೂರು
ದಾವಣಗೆರೆ ವಲಯ – ಕಾರಾವಿ. ಆಸ್ಪತ್ರೆ, ನಿಟ್ಟುವಲ್ಲಿ, ದಾವಣಗೆರೆ
ಬೆಳಗಾವಿ ವಲಯ – ಕಾರಾವಿ. ಆಸ್ಪತ್ರೆ, ಬೆಳಗಾವಿ
ಮೈಸೂರು ವಲಯ – ಕಾರಾವಿ. ಆಸ್ಪತ್ರೆ, ಕೆ.ಆರ್ ರಸ್ತೆ, ಮೈಸೂರು
ಹುಬ್ಬಳ್ಳಿ ವಲಯ – ಕಾರಾವಿ. ಆಸ್ಪತ್ರೆ, ಹುಬ್ಬಳ್ಳಿ
ಬೆಂಗಳೂರು ವಲಯ – ಕಾರಾವಿ. ಆಸ್ಪತ್ರೆ, ಇಂದಿರಾನಗರ, ಬೆಂಗಳೂರು

ಹೆಚ್ಚಿನ ಮಾಹಿತಿಗಾಗಿ: ದೂರವಾಣಿ ಸಂಖ್ಯೆ 080-23324216/23324218ಗೆ ಸಂಪರ್ಕಿಸಬಹುದು.

Important Direct Links:

Official Notification and Application PDFDownload
Official Websiteesisms.karnataka.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment