RRB: ವಿವಿಧ ಹುದ್ದೆಗಳ CBT ಪರೀಕ್ಷಾ ವೇಳಾಪಟ್ಟಿ ಪ್ರಕಟ

Published on:

ರೈಲ್ವೆ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ರೈಲ್ವೆ ನೇಮಕ ಮಂಡಳಿ(RRB)ಯು ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT)ಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ಸಿಇಎನ್‌ ಸಂಖ್ಯೆ.05/2025ರಡಿ ಅಧಿಸೂಚಿತ ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್‌, ರಾಸಾಯನಿಕ ಮತ್ತು ಲೋಹಶಾಸ್ತ್ರ ಸಹಾಯಕ ಹುದ್ದೆಗಳಿಗಾಗಿ ಒಂದನೇ ಹಂತದ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯು ಫೆ.19, 20 ಮತ್ತು ಮಾ.04ರಂದು ನಡೆಯಲಿದೆ.

ಸಿಇಎನ್‌ ಸಂಖ್ಯೆ.03/2025ರಡಿ ಅಧಿಸೂಚಿತ ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಹುದ್ದೆಗಳ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯು ಮಾ.10 ರಿಂದ ಮಾ.12ರವರೆಗೆ ಜರುಗಲಿದೆ.

ಸಿಇಎನ್‌ ಸಂಖ್ಯೆ.02/2025ರಡಿ ಅಧಿಸೂಚಿತ ತಂತ್ರಜ್ಞ ಗ್ರೇಡ್-I ಸಿಗ್ನಲ್, ತಂತ್ರಜ್ಞ ಗ್ರೇಡ್ III ಹುದ್ದೆಗಳಿಗೆ ಪರೀಕ್ಷೆಯು ಮಾ.05 ರಿಂದ ಮಾ.09ರವೆರೆಗೆ ನಡೆಯಲಿವೆ.

ಪ್ರವೇಶ ಪತ್ರ

ಅಭ್ಯರ್ಥಿಗಳಿಗೆ ಪರೀಕ್ಷಾ ದಿನದ 10 ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರದ ನಗರದ ಮಾಹಿತಿ (City Intimation) ಲಭ್ಯವಾಗಲಿದೆ. ಪ್ರವೇಶ ಪತ್ರವನ್ನು ಪರೀಕ್ಷಾ ದಿನಾಂಕದ 4 ದಿನ ಮುಂಚಿತವಾಗಿ ಅಧಿಕೃತ ಜಾಲತಾಣ http://www.rrbapply.gov.in/ದ ಮೂಲಕ ಡೌನ್ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Important Direct Links

RRB Technician CEN No.02/2025 Exam Date 2026 Notice PDFDownload
RRB JE CEN No.05/2025 Exam Date 2026 Notice PDFDownload
RRB Para-Medical CEN 03/2025 Exam Date 2026 Notice PDFDownload
Official WebsiteRRBs
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

2 thoughts on “RRB: ವಿವಿಧ ಹುದ್ದೆಗಳ CBT ಪರೀಕ್ಷಾ ವೇಳಾಪಟ್ಟಿ ಪ್ರಕಟ”

Leave a Comment