2026ರ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ(AISSEE)ಗೆ ಸಂಬಂಧಿತ ಪ್ರವೇಶ ಪರೀಕ್ಷೆ ಜ.18 ರಂದು ಜರುಗಲಿದ್ದು, ಪರೀಕ್ಷೆಯ ಮುಂಗಡ ಪರೀಕ್ಷಾ ಸಿಟಿ ಇಂಟಿಮೇಶನ್ ಸ್ಲಿಪ್ ಅನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಮಂಗಳವಾರ(ಜ.06) ಬಿಡುಗಡೆಗೊಳಿಸಿದೆ.
ದೇಶಾದ್ಯಂತ ಒಟ್ಟು 464 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಸದರಿ ಪರೀಕ್ಷೆಯ ಸಿಟಿ ಇಂಟಿಮೇಶನ್ ಸ್ಲಿಪ್ ಅನ್ನು NTA ಅಧಿಕೃತ ಜಾಲತಾಣ https://exams.nta.nic.in/sainik-school-society/ದಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಲಾಗಿನ್ ವಿವರಗಳನ್ನು ನಮೂದಿಸುವ ಮೂಲಕ ಯಾವ ನಗರದಲ್ಲಿ ಪರೀಕ್ಷೆ ನಡೆಯಲಿದೆ ಎಂಬ ಮಾಹಿತಿಯನ್ನು ಪರಿಶೀಲಿಸಬಹುದು.
AISSEE ಪರೀಕ್ಷಾ ಸಿಟಿ ಇಂಟಿಮೇಶನ್ ಸ್ಲಿಪ್ ಪರಿಶೀಲಿಸುವ ವಿಧಾನ:
• ಮೊದಲಿಗೆ ಅಭ್ಯರ್ಥಿಗಳು NTA ಅಧಿಕೃತ ವೆಬ್ ಸೈಟ್ https://exams.nta.nic.in/sainik-school-society/ಗೆ ಭೇಟಿ ನೀಡಿ.
• ಬಳಿಕ ಅಭ್ಯರ್ಥಿ ಚಟುವಟಿಕೆ ಶೀರ್ಷಿಕೆಯ ಕೆಳಗೆ ನೀಡಲಾಗಿರುವ “AISSEE-2026 ಗಾಗಿ ಮುಂಗಡ ನಗರ ಮಾಹಿತಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ “AISSEE-2026 ಗಾಗಿ ಮುಂಗಡ ನಗರ ಮಾಹಿತಿ” ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
• ಅಭ್ಯರ್ಥಿಗಳ ಅರ್ಜಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• AISSEE ಪರೀಕ್ಷಾ ಸಿಟಿ ಇಂಟಿಮೇಶನ್ ಸ್ಲಿಪ್ ಪರಿಶೀಲಿಸಬಹುದು/ಡೌನ್ಲೋಡ್ ಮಾಡಿಕೊಳ್ಳಬಹುದು.
ಅಭ್ಯರ್ಥಿಗಳ ಗಮನಕ್ಕೆ: ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರದ ಪರೀಕ್ಷಾ ನಗರದ ಕುರಿತು ನೀಡಿರುವ ಮುಂಗಡ ಮಾಹಿತಿ ಇದಾಗಿದ್ದು, ಇದು ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ (AISSEE)-2026ರ ಪ್ರವೇಶ ಪತ್ರ ಆಗಿರುವುದಿಲ್ಲ. ಅತಿ ಶೀಘ್ರದಲ್ಲಿಯೇ AISSEE-2026ರ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ: ಅಭ್ಯರ್ಥಿಗಳು AISSEE-2026ರ ಸಿಟಿ ಇನ್ಟಿಮೇಶನ್ ಸ್ಲಿಪ್ ಅನ್ನು ಡೌನ್ಲೋಡ್ ಮಾಡುವಾಗ ಸಮಸ್ಯೆಗಳು ಎದುರಾದಲ್ಲಿ ಸಹಾಯವಾಣಿ ಸಂಖ್ಯೆ 011-40759000, 011-69227700 ಅಥವಾ ಇ-ಮೇಲ್ – aissee@nta.ac.in ಅನ್ನು ಸಂಪರ್ಕಿಸಬಹುದು.
Important Direct Links:
| AISSEE-2026 Advance City Intimation Login Window Link | Check Now |
| Official Website | https://exams.nta.nic.in/ |
| More Updates | KarnatakaHelp.in |