ಕಾರಿನಲ್ಲಿ ಈ ವಸ್ತುಗಳಿದ್ದರೆ ದಂಡ ಹಾಗೂ ಜೈಲು ಗ್ಯಾರಂಟಿ!

By Mahima Bhat

Published On:

IST

ಫಾಲೋ ಮಾಡಿ

ಕಾರಿನಲ್ಲಿ ಈ ವಸ್ತುಗಳಿದ್ದರೆ ದಂಡ ಹಾಗೂ ಜೈಲು ಗ್ಯಾರಂಟಿ!
ಕಾರಿನಲ್ಲಿ ಈ ವಸ್ತುಗಳಿದ್ದರೆ ದಂಡ ಹಾಗೂ ಜೈಲು ಗ್ಯಾರಂಟಿ!

ಕಾರಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಕಾರಿನಲ್ಲಿ ಏನು ತೆಗೆದುಕೊಂಡು ಹೋಗ್ಬೇಕು, ಏನನ್ನು ತೆಗೆದುಕೊಂಡು ಹೋಗ್ಬಾರದು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕಾರಿನಲ್ಲಿ ಈ ವಸ್ತುಗಳು ಇದ್ದರೆ ಪೋಲಿಸರು ಪ್ರಶ್ನಿಸುತ್ತಾರೆ. ದಂಡ ವಿಧಿಸುತ್ತಾರೆ!

ಭಾರತದ ಬಹುತೇಕ ರಾಜ್ಯಗಳಲ್ಲಿ ಕಾರಿನಲ್ಲಿ ತೆರೆದ ಮದ್ಯದ ಬಾಟಲಿ ಸಾಗಿಸುವಂತಿಲ್ಲ. ಕುಡಿದು ವಾಹನ ಚಲಾಯಿಸುವುದನ್ನು ತಡೆಯುವುದು ಈ ಕಾನೂನುಗಳ ಉದ್ದೇಶವಾಗಿದೆ. ಚಾಲಕ ಮದ್ಯಪಾನ ಮಾಡದಿದ್ದರೂ, ತೆರೆದ ಮದ್ಯದ ಬಾಟಲಿಗಳನ್ನು ವಾಹನದಲ್ಲಿ ತೆಗೆದುಕೊಂಡು ಹೋಗಲು ಅನುಮತಿ ನೀಡುವುದಿಲ್ಲ.

ಕಾರಿನಲ್ಲಿ ಗನ್ ಅಥವಾ ಇನ್ನಾವುದೇ ಆಯುಧವಿದ್ದರೆ ಟ್ರಾಫಿಕ್ ಪೋಲೀಸರು ನಿಮ್ಮನ್ನು ತಕ್ಷಣ ಪರಿಶೀಲಿಸಬಹುದು. ಶಸ್ತ್ರಾಸ್ತ್ರ ನಿಯಮಗಳು 2016 ರ ಪ್ರಕಾರ, ಅನುಮತಿ ಇದ್ದಲ್ಲಿ ಮಾತ್ರ ಬಂದೂಕನ್ನು ವಾಹನದಲ್ಲಿ ಸಾಗಿಸಬಹುದು. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದರೆ 7 ರಿಂದ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಭಾರತದಲ್ಲಿ ಟಿಂಟೆಡ್ ಕಿಟಕಿಗಳನ್ನು ನಿಷೇಧಿಸಲಾಗಿದೆ. ಕಾರಿನ ಕಿಟಕಿಗಳು ಹಿಂದಿನ ಮತ್ತು ಮುಂಭಾಗದ ಕನ್ನಡಿಗಳಿಗೆ ಕನಿಷ್ಠ ಶೇಕಡಾ 70ರಷ್ಟು ಗೋಚರತೆಯನ್ನು ಹೊಂದಿರಬೇಕು. ಸೈಡ್ ಮಿರರ್‌ಗಳಿಗೆ ಶೇಕಡಾ 50ರಷ್ಟು ಗೋಚರತೆಯನ್ನು ಹೊಂದಿರಬೇಕು.

About the Author

ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದು ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.‌ ಸದ್ಯ ಪಿಎಚ್.ಡಿ ಮಾಡುತ್ತಿದ್ದಾರೆ. 4 ವರ್ಷ ಪ್ರಿಲೈನ್ಸ್ ಕಂಟೆಂಟ್ ರೈಟರ್ ಆಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಯಕ್ಷಗಾನ, ನಾಟಕ, ಬರವಣಿಗೆ ಆಸಕ್ತಿ ವಿಷಯಗಳು.

Leave a Comment