WhatsApp Channel Join Now
Telegram Group Join Now

Free Aadhar Card Update: ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೊನೆಯ ಅವಕಾಶ…! ಇಲ್ಲಿದೆ ಅಪ್ಡೇಟ್ ಮಾಡುವ ವಿಧಾನ

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಸರ್ಕಾರದ ಮತ್ತು ಖಾಸಗಿಯ ಯಾವುದೇ ಕೆಲಸ ಹಾಗೂ ಸೇವೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಹೀಗಿರುವಾಗ ನಿಮ್ಮ ಆಧಾರ್‌ ಕಾರ್ಡ್‌ನ ಡಾಕುಮೆಂಟ್ ಅಪ್ಡೇಟ್ ಮಾಡಲು ಕೊನೆಯ ದಿನಾಂಕ ಹತ್ತಿರವಾಗುತ್ತಿದೆ.

ಹಾಗಾಗಿ ಕೊನೆಯ ದಿನಾಂಕದ ಮೊದಲೇ ನಿಮ್ಮ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ ಮೂಲಕ ಉಚಿತವಾಗಿ ಅಪ್‌ಡೇಟ್ ಮಾಡಬಹುದಾಗಿದೆ. ಕೇಂದ್ರ ಸರ್ಕಾರವು ಈಗಾಗಲೇ ಡಾಕುಮೆಂಟ್ ಅಪ್ಡೇಟ್ ಮಾಡಲು ಹಲವು ಬಾರಿ ದಿನಾಂಕವನ್ನು ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 14ರಂದು ಅಪ್ಡೇಟ್ ಮಾಡಲು ಕೊನೆಯ ದಿನಾಂಕವಾಗಿದೆ. ಈ ಹಿಂದೆ ಜೂನ್ 14 ಕೊನೆಯ ದಿನಾಂಕವಾಗಿತ್ತು ಅದಕ್ಕೂ ಮುನ್ನ ಮಾರ್ಚ್‌ 14, 2024 ರವರೆಗೆ ನೀಡಲಾಗಿತ್ತು. ಕೇಂದ್ರ ಸರ್ಕಾರವು ಈಗಾಗಲೇ ಹಲವು ದಿನಾಂಕಗಳನ್ನು ವಿಸ್ತರಣೆ ಮಾಡಿದ್ದು ಮತ್ತೆ ಮಾಡುವುದು ಅನುಮಾನವಾಗಿದೆ.

ಆಧಾರ್ ಕಾರ್ಡ್ ಡಾಕ್ಯುಮೆಂಟ್ ಅಪ್ಡೇಟ್ ಮಾಡಲು ಆನ್ ಲೈನ್ ಮತ್ತು ಆಫ್ ಲೈನ್ ವಿಧಾನಗಳನ್ನು ಬಳಸಿಕೊಂಡು ಅಪ್ಡೇಟ್ ಮಾಡಬಹುದಾಗಿದೆ. ಈ ಲೇಖನದಲ್ಲಿ ಆಧಾರ್ ಕಾರ್ಡ್ ಡಾಕ್ಯೂಮೆಂಟ್ ಅಪ್ಡೇಟ್ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದ್ದು ಕೊನೆಯ ದಿನಾಂಕ ಮುಗಿಯುವ ಒಳಗೆ ನಿಮ್ಮ ಆಧಾರ್ ಅಪ್ಡೇಟ್ ಮಾಡಿಕೊಳ್ಳಿ.

Free Aadhar Card Update
Free Aadhar Card Update

ಆಧಾರ್ ಡಾಕ್ಯುಮೆಂಟ್ ಅಪ್ಡೇಟ್ ಮಾಡಲು ಕೊನೆಯ ದಿನಾಂಕ – ಡಿಸೆಂಬರ್ 14, 2024

Step By Step Process of Free Aadhar Card Document Update

ಆಧಾರ್ ದಾಖಲೆ ಅಪ್​ಡೇಟ್ ಮಾಡುವುದು ಹೇಗೆ?

  • ಮೊದಲಿಗೆ ಮೈ ಆಧಾರ್ ಪೋರ್ಟಲ್​ಗೆ myaadhaar.uidai.gov.in ಭೇಟಿ ನೀಡಿ.
Aadhar Card Address Update Online 1
Aadhar Card Address Update Online 1
  • ನಂತರ ಲಾಗಿನ್ ವಿವರಗಳನ್ನು ನಮೂದಿಸಿ ಲಾಗಿನ್ ಮಾಡಿ.
  • ಡಾಕ್ಯುಮೆಂಟ್ ಅಪ್​ಡೇಟ್ ಎಂಬ ಆಯ್ಕೆ ಆರಿಸಿ.
  • ನಿಮ್ಮ ಆಧಾರ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
  • ಬಳಿಕ ಪಕ್ಕದಲ್ಲಿರುವ ಹೈಪರ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
Aadhaar Document Update Online Step 1
Aadhaar Document Update Online Step 1
  • ಡ್ರಾಪ್​ಡೌನ್ ಲಿಸ್ಟ್​ನಲ್ಲಿ ಪ್ರೂಫ್ ಆಫ್ ಐಡೆಂಟಿಟಿ ಅಂಡ್ ಪ್ರೂಫ್ ಆಫ್ ಅಡ್ರೆಸ್ ಡಾಕ್ಯುಮೆಂಟ್ ಅನ್ನು ಆಯ್ಕೆಮಾಡಿ.
  • ಸ್ಕ್ಯಾನ್ ಮಾಡಿದ ದಾಖಲೆ ಪ್ರತಿಗಳನ್ನು ಅಪ್​ಲೋಡ್ ಮಾಡಿ.

ಆಫ್ ಲೈನ್ ಮೂಲಕ ಅಪ್ಡೇಟ್ ಮಾಡುವುದು ಹೇಗೆ….?

ಆಫ್ ಲೈನ್ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ನಿಮ್ಮ ಹತ್ತಿರದ ಆಧಾರ್ ಕೇಂದ್ರ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.

Important Direct Links:

Aadhaar Document Update Online Direct LinkClick Here
Official Websiteuidai.gov.in
More UpdatesKarnatakaHelp.in

Leave a Comment