ಉಚಿತ ಎಂಬ್ರಾಯಡರಿ ಮತ್ತು ಫ್ಯಾಬ್ರಿಕ್‌ ಪೈಂಟಿಂಗ್ ತರಬೇತಿ

Published on:

ಫಾಲೋ ಮಾಡಿ
Free Embroidery and Fabric Painting Training by CBRSETI
ಪ್ರಾತಿನಿಧಿಕ ಚಿತ್ರ: ಎಂಬ್ರಾಯಡರಿ ಮತ್ತು ಫ್ಯಾಬ್ರಿಕ್‌ ಪೈಂಟಿಂಗ್ ತರಬೇತಿ ಶಿಬಿರ

ಹೊಸಕೋಟೆ: ತಾಲೂಕಿನ ಸೊಣ್ಣಹಳ್ಳಿಪುರದ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಮಹಿಳೆಯರಿಗಾಗಿ ಮಾರ್ಚ್‌ ತಿಂಗಳ ಮೊದಲ ವಾರದಿಂದ 31 ದಿನಗಳ ಉಚಿತ ಎಂಬ್ರಾಯಡರಿ (ಆರಿ ವರ್ಕ್‌ ಮತ್ತು ಸ್ಯಾರಿ ಕುಚ್ಚು ಹಾಕುವುದು) ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಅಂಬರೀಶ್‌ ಬಿ ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಲೌಸ್‌ಗಳಿಗೆ ಆರಿ ವರ್ಕ್‌ ಮಾಡುವುದು, ಸ್ಯಾರಿ ಕುಚ್ಚು ಮತ್ತು ಫ್ಯಾಬ್ರಿಕ್‌ ಪೈಂಟಿಂಗ್‌ ಬಗ್ಗೆ ತರಬೇತಿ ನೀಡಲಾಗುವುದು. ಕನ್ನಡ ಓದಲು ಮತ್ತು ಬರೆಯಲು ತಿಳಿದಿರುವ, 18 ರಿಂದ 45 ವಯೋಮಾನದ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಮಹಿಳೆಯರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಸಮಯದಲ್ಲಿ ಊಟ ಹಾಗೂ ವಸತಿ ಸೌಕರ್ಯ ಶಿಬಿರಾರ್ಥಿಗಳಿಗೆ ಕಲ್ಪಿಸಲಾಗುತ್ತದೆ. ಬಿಪಿಎಲ್‌ ಕಾರ್ಡ್‌ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ,

About the Author

ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕೆಲವು ವರುಷಗಳ ಅನುಭವ. ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ..

1 thought on “ಉಚಿತ ಎಂಬ್ರಾಯಡರಿ ಮತ್ತು ಫ್ಯಾಬ್ರಿಕ್‌ ಪೈಂಟಿಂಗ್ ತರಬೇತಿ”

Leave a Comment