ಪೆಟ್ರೋಲ್ ಬಂಕ್​ನಲ್ಲಿ ಕೆಲವು ವೈಶಿಷ್ಟ್ಯಗಳ ಲಾಭವನ್ನು ನೀವು ಉಚಿತವಾಗಿ ಪಡೆಯಬಹುದು! ಅವು ಯಾವವು ಗೊತ್ತೆ?

By Mahima Bhat

Published On:

IST

Updated On:

ಫಾಲೋ ಮಾಡಿ

Free Services In Petrol Pumps
Free Services In Petrol Pumps

ಪೆಟ್ರೋಲ್​ ಬಂಕ್​ಗಳಿಗೆ ಕೆಲವೊಂದು ಷರತ್ತುಗಳ ಆಧಾರದ ಮೇಲೆ ಲೈಸೆನ್ಸ್ ನೀಡಲಾಗುತ್ತದೆ. ಆ ಷರತ್ತುಗಳನ್ನು ಪೂರೈಸದಿದ್ದರೆ, ಅಂಥಹ ಪೆಟ್ರೋಲ್ ಬಂಕ್ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಆ ಷರತ್ತುಗಳಲ್ಲಿ ಸಾಮಾನ್ಯ ನಾಗರಿಕರಿಗೆ ಹಲವು ಉಚಿತ ಸೇವೆಗಳನ್ನೂ ಸಹ ಸೇರಿಸಲಾಗಿದೆ.

ಟೈರ್​ಗೆ ಏರ್ ಫಿಲ್ಲಿಂಗ್

ನೀವು ಪೆಟ್ರೋಲ್ ಪಂಪ್ ನಲ್ಲಿ ಯಾವುದೇ ಸೇವೆಯನ್ನು ತೆಗೆದುಕೊಳ್ಳದಿದ್ದರೂ ಸಹ, ನಿಮ್ಮ ಕಾರಿನ ಟೈರ್ ಗಳಲ್ಲಿ ಗಾಳಿಯನ್ನು ಉಚಿತವಾಗಿ ತುಂಬಿಸಬಹುದು. ಇದಕ್ಕಾಗಿ ಹಣವನ್ನು ಕೇಳಿದರೆ, ನೀವು ಪಂಪ್ ನಿರ್ವಹಣೆ ಅಥವಾ ಸಂಬಂಧಿತ ಕಂಪನಿಗೆ ದೂರು ನೀಡಬಹುದು.

ಕುಡಿಯುವ ನೀರು

ಎಲ್ಲಾ ಪೆಟ್ರೋಲ್ ಪಂಪ್ ಗಳು ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಅಗತ್ಯವಿದ್ದರೆ, ನೀವು ಇಲ್ಲಿ ಕುಡಿಯುವ ನೀರನ್ನು ಕೇಳಬಹುದು ಅಥವಾ ನಿಮ್ಮ ಬಾಟಲಿಯನ್ನು ತುಂಬಿಸಬಹುದು.

ವಾಶ್ ರೂಮ್

ನೀವು ಪೆಟ್ರೋಲ್ ಪಂಪ್ ನ ವಾಶ್ ರೂಮ್ ಅನ್ನು ಸಹ ಬಳಸಬಹುದು. ವಿಶೇಷವೆಂದರೆ ಶೌಚಾಲಯದ ಶುಚಿತ್ವದ ಬಗ್ಗೆ ನಿಮಗೆ ತೃಪ್ತಿ ಇಲ್ಲದಿದ್ದರೆ ಅಥವಾ ಶೌಚಾಲಯದ ಬಾಗಿಲು ಮುಚ್ಚಿರುವುದನ್ನು ನೀವು ಗಮನಿಸಿದರೆ ನೀವು ತಕ್ಷಣ ಸಂಬಂಧಪಟ್ಟ ಕಂಪನಿಯ ವೆಬ್ಸೈಟ್ ನಲ್ಲಿ ಅದರ ಬಗ್ಗೆ ದೂರು ನೀಡಬಹುದು.

ಮಗುವಿಗೆ ಹಾಲುಣಿಸುವ ಕೊಠಡಿ

ಮಹಿಳೆಯೋರ್ವಳು ತನ್ನ ಮಗುವಿಗೆ ಹಾಲುಣಿಸಲು ಬಯಸಿದರೆ, ಆಕೆ ಪೆಟ್ರೋಲ್ ಬಂಕ್​ನಲ್ಲಿರುವ ಬೇಬಿ ಫೀಡಿಂಗ್ ರೂಮ್​ಗೆ ತೆರಳಿ ಮಗುವಿಗೆ ಹಾಲುಣಿಸಬಹುದಾಗಿದೆ. ಇದೂ ಉಚಿತವಾಗಿದ್ದು, ಈ ಕೊಠಡಿ ಒದಗಿಸದ ಪೆಟ್ರೋಲ್ ಬಂಕ್​ಗಳ ವಿರುದ್ಧ ದೂರು ದಾಖಲಿಸಬಹುದು.

ತುರ್ತು ಕರೆ

ಅಂತೆಯೇ, ತುರ್ತು ಸಂದರ್ಭದಲ್ಲಿ ನೀವು ಪೆಟ್ರೋಲ್ ಪಂಪ್ ನಿಂದ ನಿಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಬಹುದು.

ಪ್ರಾಥಮಿಕ ಚಿಕಿತ್ಸಾ ಸೌಲಭ್ಯ

ರಸ್ತೆ ಅಪಘಾತಗಳಾದಾಗ ಚಿಕಿತ್ಸೆಗಾಗಿ ನೀವು ಆ್ಯಂಬುಲೆನ್ಸ್ ಅಥವಾ ವೈದ್ಯರಿಗಾಗಿ ಕಾಯದೇ, ಗಾಯಾಳುಗಳಿಗೆ ಪೆಟ್ರೋಲ್ ಬಂಕ್​ನಲ್ಲಿ ಚಿಕಿತ್ಸೆ ನೀಡಬಹುದು. ಅಲ್ಲಿ ಪ್ರಥಮ ಚಿಕಿತ್ಸೆಗೆ ಬೇಕಾದ ಸಾಮಗ್ರಿಗಳನ್ನ ಇಡಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಪ್ರಥಮ ಚಿಕಿತ್ಸಾ ಪೆಟ್ಟಿಗೆ ಯಾವಾಗಲೂ ಲಭ್ಯವಿದ್ದು, ಇದಕ್ಕಾಗಿ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಅಗ್ನಿ ನಿಯಂತ್ರಣ ಸಾಧನಗಳು

ಪೆಟ್ರೋಲ್ ಬಂಕ್​ನಲ್ಲಿ ಮಾತ್ರವಲ್ಲದೇ, ಪೆಟ್ರೋಲ್ ಬಂಕ್ ಹತ್ತಿರದ ಪ್ರದೇಶದಲ್ಲಿ ಅಗ್ನಿ ಅವಘಡಗಳು ನಡೆದರೆ, ಪೆಟ್ರೋಲ್ ಬಂಕ್​ನಲ್ಲಿರುವ ಅಗ್ನಿ ನಿಯಂತ್ರಣ ಸಾಧನಗಳನ್ನು ಬಳಸಬಹುದು. ಇದೂ ಉಚಿತವಾಗಿರುತ್ತವೆ.

ಮತ್ತಷ್ಟು ಇತರೆ ಸುದ್ದಿಗಾಗಿ KarnatakaHelp.inಗೆ ಭೇಟಿ ನೀಡಿ.

About the Author

ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದು ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.‌ ಸದ್ಯ ಪಿಎಚ್.ಡಿ ಮಾಡುತ್ತಿದ್ದಾರೆ. 4 ವರ್ಷ ಪ್ರಿಲೈನ್ಸ್ ಕಂಟೆಂಟ್ ರೈಟರ್ ಆಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಯಕ್ಷಗಾನ, ನಾಟಕ, ಬರವಣಿಗೆ ಆಸಕ್ತಿ ವಿಷಯಗಳು.

Leave a Comment