ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿವ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್(GATE) 2026ರ ನೋಂದಣಿಗಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿ ಸಂಸ್ಥೆಯು ಪ್ರಕಟಣೆ ಹೊರಡಿಸಿದೆ.
ಗೇಟ್ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, ದೇಶದ ಎಂಜಿನಿಯರಿಂಗ್ ಕಾಲೇಜುಗಳು/ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯಲು ಮತ್ತು ಕೆಲವು ನೇಮಕಾತಿಗೆ ಸಹಾಯಕ. ನೋಂದಣಿ ಪ್ರಕ್ರಿಯೆಯು ಆ.25ರಿಂದ ಪ್ರಾರಂಭವಾಗಲಿದೆ. ನೋಂದಣಿ ಮಾಡಲು ಅಧಿಕೃತ ಜಾಲತಾಣ https://gate2026.iitg.ac.in/ಗೆ ಭೇಟಿ ನೀಡಿ.
ಹಲವಾರು ಸಾರ್ವಜನಿಕ ವಲಯದ ಸಂಸ್ಥೆಗಳು (PSUಗಳು)/ಸರ್ಕಾರಿ ಸಂಸ್ಥೆಗಳು ತಮ್ಮ ನೇಮಕಾತಿಗಾಗಿ GATE ಸ್ಕೋರ್ ಅನ್ನು ಸಹ ಪರಿಗಣಿಸುವುದರಿಂದ ಪ್ರತಿಷ್ಠಿತ ಸಾರ್ವಜನಿಕ ವಲಯಗಳಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಇದೊಂದು ಸುವರ್ಣವಕಾಶವಾಗಿದೆ.
ಗೇಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದರೆ ಶಿಕ್ಷಣ ಸಚಿವಾಲಯ (MoE) ಮತ್ತು ಇತರ ಸರ್ಕಾರಿ ಸಂಸ್ಥೆಗಳಿಂದ ಬೆಂಬಲಿತವಾದ ಸಂಸ್ಥೆಗಳಲ್ಲಿ ವಿವಿಧ ಕೋರ್ಸ್/ಪ್ರೋಗ್ರಾಮ್ಗಳಿಗೆ ಆರ್ಥಿಕ ನೆರವು ಪಡೆಯಲು ಗೇಟ್ ಸಹಾಯಕವಾಗಿದೆ.
GATE 2026ರ ನೋಂದಣಿಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಆಗಸ್ಟ್ 25, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 25, 2025(ವಿಳಂಬ ಶುಲ್ಕವಿಲ್ಲದೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 06, 2025(ವಿಳಂಬ ಶುಲ್ಕದೊಂದಿಗೆ)
ಪರೀಕ್ಷಾ ದಿನಾಂಕಗಳು:
GATE 2026ರ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಯನ್ನು 2026ರ ಫೆಬ್ರವರಿ 7, 8, 14 ಮತ್ತು 15 ರಂದು ಭಾರತದಾದ್ಯಂತ ಆಯ್ದ ನಗರಗಳು ಮತ್ತು ಪಟ್ಟಣಗಳಲ್ಲಿ ನಡೆಸಲಾಗುತ್ತದೆ.
ಅರ್ಹತಾ ಮನದಂಡಗಳು:
ಅಭ್ಯರ್ಥಿಯು ಯಾವುದೇ ಪದವಿ(ಯುಜಿ)ಯಲ್ಲಿ 3ನೇ ಅಥವಾ ಅದಕ್ಕಿಂತ ಹೆಚ್ಚಿನ ವರ್ಷದಲ್ಲಿ ಓದುತ್ತಿರುವ ಅಥವಾ ಎಂಜಿನಿಯರಿಂಗ್/ತಂತ್ರಜ್ಞಾನ/ವಾಸ್ತುಶಿಲ್ಪ/ವಿಜ್ಞಾನ/ವಾಣಿಜ್ಯ/ಕಲೆ/ಮಾನವಶಾಸ್ತ್ರದಲ್ಲಿ ಸರ್ಕಾರದಿಂದ ಅನುಮೋದಿತ ಪದವಿ ಕೋರ್ಸ್ ಈಗಾಗಲೇ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಸಹ ಪರೀಕ್ಷೆಗೆ ಹಾಜರಾಗಲು ಅರ್ಹತೆ ಹೊಂದಿರುತ್ತಾರೆ.
ವಯಸ್ಸಿನ ಮಿತಿ:
ಗೇಟ್ 2026ಕ್ಕೆ ಅರ್ಜಿ ಸಲ್ಲಿಸಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.
ಅರ್ಜಿ ಶುಲ್ಕ:
ಮಹಿಳಾ/ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 1000ರೂ. [ವಿಳಂಬ ಶುಲ್ಕ – 1500ರೂ.] ವಿದೇಶಿ ಪ್ರಜೆಗಳು ಸೇರಿದಂತೆ ಎಲ್ಲಾ ಇತರ ಅಭ್ಯರ್ಥಿಗಳಿಗೆ – 2000ರೂ. [ವಿಳಂಬ ಶುಲ್ಕ – 2500ರೂ.]
What is the Registration Process for GATE 2026
ಅರ್ಜಿ ಸಲ್ಲಿಸುವ ವಿಧಾನ;
ಗೇಟ್ 2026 ಅಧಿಕೃತ ವೆಬ್ಸೈಟ್https://gate2026.iitg.ac.in/ ಗೆ ಭೇಟಿ ನೀಡಿ.
ಅಪ್ಲಿಕೇಶನ್ ಪೋರ್ಟಲ್ ಲಿಂಕ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರಗಳನ್ನು ನಮೂದಿಸಿ. ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ.
ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.