Gramodyog Vikas Yojana: ಗ್ರಾಮೋದ್ಯೋಗ ವಿಕಾಸ ಯೋಜನೆಯಡಿ ತರಬೇತಿಗಾಗಿ ಅರ್ಜಿ ಆಹ್ವಾನ

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

Khadi Gramodyog Vikas Yojana 2025-26 Online Form
Khadi Gramodyog Vikas Yojana 2025

2025-26ನೇ ಸಾಲಿನಲ್ಲಿ ಭಾರತ ಸರ್ಕಾರದ ಗ್ರಾಮೋದ್ಯೋಗ ವಿಕಾಸ ಯೋಜನೆ (GVY) ಅಡಿಯಲ್ಲಿ ಗ್ರಾಮೀಣ ನಿರುದ್ಯೋಗ ಯುವಕ/ ಯುವತಿಯರಿಗೆ ವಿವಿಧ ತರಬೇತಿಗಳನ್ನು ನೀಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ರಾಜ್ಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಸುಧಾರಿತ ಟೂಲ್‌ಕಿಟ್‌ಗಳು/ಯಂತ್ರೋಪಕರಣಗಳು/ ಉಪಕರಣಗಳು ಉತ್ಪಾದನೆ, ಆದಾಯ, ಬೆಂಬಲ/ಸೇವೆಗಳು ಮತ್ತು ವಿವಿಧ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಕುರಿತು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು, ವಯೋಮಿತಿ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ – 28-06-2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 20-07-2025

ವಯೋಮಿತಿ:

  • ಕನಿಷ್ಠ ಮಿತಿ – 18 ವರ್ಷಗಳು
  • ಗರಿಷ್ಠ ಮಿತಿ – 55 ವರ್ಷಗಳು

ತರಬೇತಿಯ ವಿವರಗಳು:

  • ಕುಂಬಾರಿಕೆ ತರಬೇತಿ
  • ಜೇನು ಸಾಕಾಣಿಕೆ ತರಬೇತಿ
  • ಮರದ ಕರಕುಶಲ ತರಬೇತಿ
  • ಅಗರಬತ್ತಿ ತಯಾರಿಕೆ ತರಬೇತ
  • ಪಾದರಕ್ಷೆ ತಯಾರಿಕೆ/ದುರಸ್ತಿ, ತರಬೇತಿ

ತರಬೇತಿ ಮುಗಿದ ನಂತರ:

  • ತರಬೇತಿ ಮುಗಿದ ನಂತರ ಅಭ್ಯರ್ಥಿಗಳಿಗೆ ಸರ್ಕಾರಿ ಪ್ರಮಾಣಪತ್ರ
  • ಉದ್ಯಮಶೀಲತೆಯನ್ನು ಪ್ರಾರಂಭಿಸಲು ಸುಧಾರಿತ ಉಪಕರಣಗಳು/ಕಿಟ್‌ಗಳು/ ಯಂತ್ರೋಪಕರಣಗಳನ್ನು ಒದಗಿಸಲಾಗುವುದು.

ಸಲ್ಲಿಸಬೇಕಾದ ಅಗತ್ಯ ದಾಖಲೆ:

ಯಂತ್ರೋಪಕರಣಗಳು, ಉಪಕರಣಗಳು ಮತ್ತು ಸಲಕರಣೆಗಳ ನಿರ್ವಹಣೆಗೆ ಆಯ್ಕೆಯಾದ ಫಲಾನುಭವಿಯು ಸ್ವಯಂ ಘೋಷಿತ ಹೊಣೆಗಾರಿಕೆಯನ್ನು ಸಲ್ಲಿಸಬೇಕು.

ವಿತರಿಸಬೇಕಾದ ಯಂತ್ರಗಳು, ಉಪಕರಣಗಳು ಮತ್ತು ಸಲಕರಣೆಗಳ ಒಟ್ಟು ವೆಚ್ಚದ ವಿರುದ್ಧ ಸ್ವಂತ ಕೊಡುಗೆಯನ್ನು ಕೆಳಗೆ ನೀಡಲಾದ ಮಾದರಿಯ ಪ್ರಕಾರ ಕುಶಲಕರ್ಮಿಗಳಿಂದ ಸಂಗ್ರಹಿಸಲಾಗುತ್ತದೆ

ಫಲಾನುಭವಿಯ ಕೊಡುಗೆ ಶೇಕಡಾವಾರು:

  • ಪರಿಶಿಷ್ಟ ಜಾತಿ – 10%
  • ಪರಿಶಿಷ್ಟ ಪಂಗಡ – 10%
  • ಜನರಲ್ – 20%
  • ಬಿಪಿಎಲ್ – 0%

ಕೆ.ವಿ.ಐ.ಸಿ. ಕೊಡುಗೆ ಶೇಕಡಾವಾರು:

  • ಪರಿಶಿಷ್ಟ ಜಾತಿ – 90%
  • ಪರಿಶಿಷ್ಟ ಪಂಗಡ – 90%
  • ಜನರಲ್ – 80%
  • ಬಿಪಿಎಲ್ – 0%

ಅರ್ಜಿ ಸಲ್ಲಿಸುವ ವಿಧಾನ:

  • ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧಿಕೃತ ವೆಬ್ ಸೈಟ್ http://www.kvic.org.in/ ಗೆ ಭೇಟಿ ನೀಡಿ.
  • ವೆಬ್ ಸೈಟ್ ನಲ್ಲಿ ಯೋಜನೆಯ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು.
  • ಅರ್ಜಿಯಲ್ಲಿ ಕೇಳಲಾಗಿರುವ ಹೆಸರು, ವಿಳಾಸ, ವಯಸ್ಸು, ಆಧಾರ್ ಪ್ರತಿ, ಪ್ಯಾನ್ ಕಾರ್ಡ್ ಪ್ರತಿ, ಜಾತಿ ಆದಾಯ ಪ್ರಮಾಣ ಪತ್ರ, ಸಂಪರ್ಕ ಸಂಖ್ಯೆ, ಶಿಕ್ಷಣದ ಸ್ಥಿತಿ, ಅನುಭವ ಇತ್ಯಾದಿ ವಿವರಗಳನ್ನು ನಮೂದಿಸಿ ಹಾಗೂ ಎರಡು ಪಾಸ್‌ಪೋರ್ಟ್ ಅಳತೆ ಭಾವಚಿತ್ರ ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಜುಲೈ 20 ರೊಳಗೆ ಕಳುಹಿಸಬಹುದು.

ವಿಳಾಸ:

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ವಿಜಿನಾಪುರ, ದೂರವಾಣಿ ನಗರ, ಬೆಂಗಳೂರು 560016

ವಿಶೇಷ ಸೂಚನೆ:

ಪುನರ್ವಸತಿ/ ಶರಣಾದ ನಕ್ಸಲೀಯರು/ ಉಗ್ರಗಾಮಿಗಳು/ರಕ್ಷಣಾ ಸಿಬ್ಬಂದಿಯ ವಿಧವೆಯರು, ಪ್ಯಾರಾ-ಮಿಲಿಟರಿ ಪಡೆಗಳು ಮತ್ತು ಉಗ್ರಗಾಮಿ ಪೀಡಿತ ಕುಟುಂಬಗಳು, ಸ್ವಸಹಾಯ ಗುಂಪು ಇತ್ಯಾದಿ. ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ:

ದೂರವಾಣಿ ಸಂಖ್ಯೆ – 080-25665885 ಅನ್ನು ಸಂಪರ್ಕಿಸಬಹುದು.

ಮತ್ತಷ್ಟು ಸುದ್ದಿಗಳಿಗಾಗಿ KarnatakaHelp.inಗೆ ಭೇಟಿ ನೀಡಿ

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment