Gruhalakshmi 8th Installment Date: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ (Gruha Lakshmi) ಯೋಜನೆಯ 7ನೇ ಕಂತು ಈಗಾಗಲೇ ಎಲ್ಲಾ ಮಹಿಳೆಯರ ಖಾತೆಗೆ ಸರ್ಕಾರವು ವರ್ಗಾವಣೆ ಮಾಡಲಾಗಿದ್ದು. 8ನೇ ಕಂತಿನ ಹಣವು ಯಾವಾಗ ಬರಲಿದೆ ಮತ್ತು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಅವರ ಅರ್ಜಿ ಮತ್ತು ಹಣ ಪಾವತಿ ಸ್ಥಿತಿಯನ್ನು ಪತ್ತೆ ಹಚ್ಚುವುದು ಹೇಗೆ ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗಿನ ನೀಡಲಾಗಿದೆ.
ಮಹಿಳೆಯರನ್ನು ಉತ್ತೇಜನ ಮಾಡಬೇಕು, ಆರ್ಥಿಕ ವಾಗಿ ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶ ದಿಂದ ರಾಜ್ಯ ಸರಕಾರವು ಗೃಹಲಕ್ಷ್ಮಿ (Gruha Lakshmi) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಮಹಿಳೆಯರು ತಿಂಗಳಿಗೆ 2 ಸಾವಿರ ರೂಗಳನ್ನು ಪಡೆಯುತ್ತಿದ್ದು,ಇಲ್ಲಿಯವರೆಗೆ ಏಳು ಕಂತಿನ ವರೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ ಬಿಡುಗಡೆ ಮಾಡಲಾಗಿದೆ. ಇದೀಗ ಎಂಟನೇ ಕಂತಿನ ಹಣವನ್ನು ಸರಕಾರ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಏಪ್ರಿಲ್ ಮೊದಲ ಅಥವಾ ಎರಡನೇ ವಾರ 8ನೇ ಕಂತಿನ ಹಣವು ಮಹಿಳೆಯರ ಖಾತೆಗೆ ವರ್ಗಾವಣೆ ಆಗಲಿದೆ. ಆಧಾರ್ ಕಾರ್ಡ್ ಆಪ್ಡೆಟ್, ಇ- ಕೆವೈಸಿ, ರೇಷನ್ ಕಾರ್ಡ್ ಲಿಂಕ್, ಬ್ಯಾಂಕ್ ಖಾತೆ ಲಿಂಕ್, ಇತ್ಯಾದಿ ಕೆಲಸ ಆಗಿದ್ದರೆ ಮಾತ್ರ ಗೃಹಲಕ್ಷ್ಮಿ ಯ ಹಣ ಖಾತೆಗೆ ಜಮೆ ಆಗಲಿದೆ.
How to Check Gruhalakshmi 8th Installment Amount
ಗೃಹಲಕ್ಷ್ಮಿ ಹಣದ ಪಾವತಿಯ ಕುರಿತು ಸ್ಥಿತಿ ಚೆಕ್ ಮಾಡುವುದು ಹೇಗೆ…?
- ಮೂದಲಿಗೆ ಸೇವಾ ಸಿಂಧು ಅಧಿಕೃತ https://sevasindhu.karnataka.gov.in ವೆಬ್‌ಸೈಟ್‌ಗೆ ಭೇಟಿ.
- ಅಲ್ಲಿ ಕಾಣುವ ಗೃಹ ಲಕ್ಷ್ಮಿ ಯೋಜನೆ 2024 ಇತ್ತೀಚಿನ ನವೀಕರಣವನ್ನು ಪರಿಶೀಲಿಸಿ.
- ಇಲ್ಲಿ ಟ್ರ್ಯಾಕ್ ಅಪ್ಲಿಕೇಶನ್ ಸ್ಥಿತಿ ಆಯ್ಕೆಯನ್ನು ಕ್ಲಿಕ್ ಮಾಡಿ.
- ಹೊಸ ಟ್ಯಾಬ್‌ನಲ್ಲಿ, ಅಪ್ಲಿಕೇಶನ್ ಸ್ಥಿತಿ ಪರಿಶೀಲನೆ ಪುಟವು ತೆರೆಯುತ್ತದೆ.
- ಅಪ್ಲಿಕೇಶನ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಕಳುಹಿಸು ಕ್ಲಿಕ್ ಮಾಡಿ.
- ನಂತರ OTP ಅನ್ನು ಭರ್ತಿ ಮಾಡಿ.
- ಕೊನೆಯದಾಗಿ ಟ್ರ್ಯಾಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
- ಪರದೆಯ ಮೇಲೆ ಗೃಹ ಲಕ್ಷ್ಮಿ ಯೋಜನೆಯ DBT ಪಾವತಿ ಸ್ಥಿತಿಯನ್ನು ಪರಿಶೀಲಿಸಿಕೂಳ್ಳಿ.
Also Read:
Important links:
Official Website | sevasindhu.karnataka.gov.in |
More Updates | KarnatakaHelp.in |