ಪ್ರಸಕ್ತ ಶೈಕ್ಷಣಿಕ ಸಾಲಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಹಾಗೂ ಸ್ನಾತಕೋತ್ತರ ಡಿಪ್ಲೋಮಾ ಪದವಿ ಕೋರ್ಸುಗಳಿಗೆ ಮೆರಿಟ್ ಮತ್ತು ಮಿಸಲಾತಿ ಆಧಾರದ ಮೇಲೆ ಪ್ರವೇಶಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಬಿ.ಎಲ್.ಹೂವಿನಭಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ ಆಳಂದ ಮತ್ತು ಸಂಲಗ್ನತೆ ಹೊಂದಿದ ಸರಕಾರಿ/ಖಾಸಗಿ ಮತ್ತು ಸಂಜೆ ಮಹಾವಿದ್ಯಾಲಯಗಳಲ್ಲಿ ವಿವಿಧ ಸ್ನಾತಕೋತ್ತರ ಪದವಿ ಹಾಗೂ ಸ್ನಾತಕೋತ್ತರ ಡಿಪ್ಲೋಮಾ ಪದವಿ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಗುಲಬರ್ಗಾ ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ https://gug.ac.in/ಗೆ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸದರಿ ಪ್ರವೇಶಾತಿಗೆ ಸಂಬಂಧಿಸಿದಂತೆ ಲಭ್ಯವಿರುವ ಸ್ನಾತಕೋತ್ತರ ಕೋರ್ಸುಗಳ ವಿವರ, ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಆನ್ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ಮತ್ತು ಎಲ್ಲಾ ದೃಡೀಕರಿಸಿದ ದಾಖಲಾತಿಗಳೊಂದಿಗೆ ಸಂಬರದಪಟ್ಟ ವಿಭಾಗದ ಅಧ್ಯಕ್ಷಕರಿಗೆ ನಿರ್ದೇಶಕರಿಗೆ/ಸಂಯೋಜಕರಿಗೆ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 16, 2025
ಪ್ರವೇಶಾತಿಗಾಗಿ ಲಭ್ಯವಿರುವ ಸ್ನಾತಕೋತ್ತರ ಪದವಿ ಕೋರ್ಸುಗಳ ವಿವರಗಳು:
• ಕಲಾ ವಿಭಾಗದಲ್ಲಿ;
ಎಂ.ಎ(MA) – ಇಂಗ್ಲೀಷ್, ಹಿಂದಿ, ಕನ್ನಡ, ಕನ್ನಡ ಮತ್ತು ಜಾನಪದ, ಮರಾಠಿ, ಸಂಗೀತ, ಸಂಸ್ಕೃತ ಮತ್ತು ಉರ್ದು ಮತ್ತು ಪರ್ಷಿಯನ್.
ಎಂ.ಎ(MA) – ಅರ್ಥಶಾಸ್ತ್ರ, ಇತಿಹಾಸ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ರಾಜ್ಯಶಾಸ್ತ್ರ, ಮನೋವಿಜ್ಞಾನ, ಸಮಾಜಶಾಸ್ತ್ರ, ಮಹಿಳಾ ಅಧ್ಯಯನ.
ಎಂ.ಎಸ್.ಡಬ್ಲ್ಯೂ(MSW) – ಸಮಾಜ ಕಾರ್ಯ
• ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ;
ಎಂ.ಎಸ್.ಸಿ(MSC) – ಅನ್ವಯಿಕ ವಿದ್ಯುನ್ಮಾನ, ಜೀವರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಗಣಕವಿಜ್ಞಾನ, ಪರಿಸರ ವಿಜ್ಞಾನ, ಮಟೀರಿಯಲ್ ಸೈನ್ಸ್, ಗಣಿತ, ಸೂಕ್ಷ್ಮಜೀವಶಾಸ್ತ್ರ, ಸಾವಯವ ರಸಾಯನಶಾಸ್ತ್ರ, ಭೌತಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ.
• ವಾಣಿಜ್ಯ ವಿಭಾಗದಲ್ಲಿ;
ಎಂಕಾಂ(M.Com) – ವಾಣಿಜ್ಯ
• ಶಿಕ್ಷಣ ವಿಭಾಗದಲ್ಲಿ;
ಎಂ.ಎಡ್(M.Ed) – ಶಿಕ್ಷಣ
ಎಂ.ಪಿ.ಎಡ್(M.P.ed) – ದೈಹಿಕ ಶಿಕ್ಷಣ
ಬಿ.ಪಿ.ಎಡ್(B.P.ed) – ದೈಹಿಕ ಶಿಕ್ಷಣ
• ಕಾನೂನು ವಿಭಾಗದಲ್ಲಿ;
ಎಲ್ಎಲ್ಎಂ(LLM) – ಕಮರ್ಷಿಯಲ್ ಲಾ.ಕಾನ್ ಸ್ಟಿಟ್ಯೂಶನಲ್ ಆ್ಯಂಡ್ ಆಡ್ ಮಿನಿಸ್ಟ್ರೇಟಿವ್ ಲಾ
• ಡಿಪ್ಲೋಮಾ ವಿಭಾಗದಲ್ಲಿ;
ಸ್ನಾತಕೋತ್ತರ ಡಿಪ್ಲೋಮೋ ಪದವಿ ಕೋರ್ಸುಗಳು – ಭಾರತೀಯ ಗಣಿತ (ಗಣಿತ ಶಾಸ್ತ್ರ ಅಧ್ಯಯನ ವಿಭಾಗ), ಡಾ.ಬಿ.ಆರ್ ಅಂಬೇಡ್ಕರ್ ಸ್ಟಡೀಸ್ ( ಡಾ.ಬಿ.ಆರ್ ಅಂಬೇಡ್ಕರ ಅಧ್ಯಯನ & ಸಂಶೋಧನ ವಿಭಾಗ), ಎಂಬೆಡೆಡ್ ಸಿಸ್ಟಮ್ (ಅನ್ವಯಿಕ ವಿದ್ಯಾವಿಜ್ಞಾನ ಅಧ್ಯಯನ ವಿಭಾಗ) ನಾಟಕ ಸಾಹಿತ್ಯ ಮತ್ತು ರಂಗ ಭೂಮಿ (ಕನ್ನಡ ಅಧ್ಯಯನ ವಿಭಾಗ), ಪಾಲಿ ಆ್ಯಂಡ್ ಬುದ್ಧಿಸ್ಟ್ ಸ್ಟಡೀಸ್’ (ಪಾಲಿ ಆ್ಯಂಡ್ ಬುದ್ಧಿಸ್ಟ್ ಅಧ್ಯಯನ ವಿಭಾಗ) ಟ್ರಾನ್ಸಲೇಶನ್ ಸ್ಕಿಲ್ ಹಿಂದಿ (ಹಿಂದಿ ಆಧ್ಯಯನ ವಿಭಾಗ), ವಚನ ಸಾಹಿತ್ಯ (ಕನ್ನಡ ಅಧ್ಯಯನ ವಿಭಾಗ), ಯೋಗ+(ದೈಹಿಕ ಶಿಕ್ಷಣ ಅಧ್ಯಯನ ವಿಭಾಗ) ಮತ್ತು ಹೂಮನ್ ರಿಸೋರ್ಸ ಮ್ಯಾನೇಜಿಮೇಂಟ್(ಸಂಲಗ್ನತೆ ಕಾಲೇಜು)
ಆಯ್ಕೆ ವಿಧಾನ:
ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ.
ಫಲಿತಾಂಶ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳ ಗಮನಕ್ಕೆ
5ನೇ ಮತ್ತು 6ನೇ ಸೆಮೀಸ್ಟರ್ ಪರೀಕ್ಷೆ ಬರೆದು ಫಲಿತಾಂಶ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಫಲಿತಾಂಶ ಪ್ರಕಟಣೆಗೊಂಡ ನಂತರ ಅಂಕಪಟ್ಟಿಗಳನ್ನು ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರಿಗೆ ಸಲ್ಲಿಸಲು ಸೂಚಿಸಲಾಗಿದೆ.
How to Apply For Gulbarga University Admission 2025-26
ಅರ್ಜಿ ಸಲ್ಲಿಸುವ ವಿಧಾನ;
1.ಸ್ನಾತಕೋತ್ತರ (ಪಿಜಿ/ಪಿಜಿ ಡಿಪ್ಲೋಮಾ) ಕೋರ್ಸುಗಳಿಗೆ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
2.ಗುಲಬರ್ಗಾ ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ https://gug.ac.in/ಗೆ ನೀಡಿ.
3.ಮುಖಪುಟದಲ್ಲಿ “Online PG Admission Application Form-2025-26” – ಆಯ್ಕೆ ಮೇಲೆ ಕ್ಲಿಕ್ ಮಾಡಿ.
Gulbarga University P.g. Application Form 2025-26
4.ನೀವು ಪ್ರವೇಶಾತಿ ಬಯಸುವ ವಿಭಾಗ, ಕೋರ್ಸ್ ಅನ್ನು ಆಯ್ಕೆ ಮಾಡಿ.
5.ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
6.ಅರ್ಜಿ ಶುಲ್ಕ ಪಾವತಿ ಮಾಡಿ. (ಅನ್ವಯಿಸಿದರೆ)
7.ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ, ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Ok
plzzz