Gulbarga University Guest Faculty Notification 2025
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯವು 2025-26ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ವಿಶ್ವವಿದ್ಯಾಲಯದ ಮುಖ್ಯ ಆವರಣ ಮತ್ತು ಆಳಂದ ಸ್ನಾತಕೋತ್ತರ ಕೇಂದ್ರದಲ್ಲಿ ಬೋಧನಾ ವೃಂದದಲ್ಲಿ ಪೂರ್ಣಕಾಲಿಕ/ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಯು.ಜಿ.ಸಿ. ನಿಯಮಾನುಸಾರ ಅರ್ಹ ಅಭ್ಯರ್ಥಿಗಳನ್ನು ಭರ್ತಿ ನಡೆಯಲಿದೆ. ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಅರ್ಹ ಮತ್ತು ಆಸಕ್ತ ಉದ್ಯೋಗಾಕಾಂಕ್ಷಿಗಳು ನ.7ರೊಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ವಿಶ್ವವಿದ್ಯಾಲಯದ ಕುಲಸಚಿವರು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ನವೆಂಬರ್ 07
ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸುವ ದಿನಾಂಕ – ನವೆಂಬರ್ 14
ಅಂತಿಮ ಮೆರಿಟ್ ಪಟ್ಟಿ ಪ್ರಕಟಿಸುವ ದಿನಾಂಕ – ನವೆಂಬರ್ 18
ಸಂದರ್ಶನದ ಪ್ರಾರಂಭ ದಿನಾಂಕ – ನವೆಂಬರ್ 24
ಸ್ನಾತಕೋತ್ತರ ವಿಭಾಗಗಳ ವಿವರ:
ವಿಶ್ವವಿದ್ಯಾಲಯದಲ್ಲಿನ ಮುಖ್ಯ ಆವರಣದ ಸ್ನಾತಕೋತ್ತರ ಕೇಂದ್ರದಲ್ಲಿ – ಸಸ್ಯಶಾಸ್ತ್ರ, ಜೀವರಸಾಯನಶಾಸ್ತ್ರ, ಪ್ರಾಣಿಶಾಸ್ತ್ರಪರಿಸರ ವಿಜ್ಞಾನ, ಜೈವಿಕತಂತ್ರಜ್ಞಾನ, ರಸಾಯನಶಾಸ್ತ್ರ, ಫಿಜಿಕಲ್ ಕೆಮಿಸ್ಟ್ರಿ, ಇನ್ಆರ್ಗನಿಕ್ ಕೆಮಿಸ್ಟ್ರಿ, ಆರ್ಗನೆಕ್ ಕೆಮಿಸ್ಟ್ರಿ, ಅನಾಲೆಟಿಕಲ್ ಕೆಮಿಸ್ಟ್ರಿ, ಸೂಕ್ಷ್ಮಜೀವಶಾಸ್ತ್ರ, ಗಣಕ ವಿಜ್ಞಾನ, ಎಂಸಿಎ, ಎಂ.ಎಸ್ಸಿ. (ಗಣಕ ವಿಜ್ಞಾನ), ಸಂಖ್ಯಾಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಸಮಾಜಕಾರ್ಯ, ಸಮಾಜಶಾಸ್ತ್ರ, ಮನೋವಿಜ್ಞಾನ, ರಾಜ್ಯಶಾಸ್ತ್ರ, ಕನ್ನಡ, ಪಾಲಿ ಮತ್ತು ಬೌದ್ಧ ಅಧ್ಯಯ, ಇಂಗ್ಲಿಷ್, ಮರಾಠಿ, ಸಂಗೀತ, ಹಿಂದಿ, ಸಂಸ್ಕೃತ, ಉರ್ದು ಮತ್ತು ಪರ್ಶಿಯನ್, ದೃಶ್ಯಕಲಾ, ಎಂ.ವಿ.ಎ. ಪೇಂಟಿಂಗ್, ಎಂ.ವಿ.ಎ. ಸ್ವಲ್ಪಚರ್, ನಿರ್ವಹಣಾಶಾಸ್ತ್ರ, ವಾಣಿಜ್ಯ, ಎಂಕಾಂ, ಶಿಕ್ಷಣ ಹಾಗೂ ಕಾನೂನು ವಿಭಾಗಗಳಿಗೆ ಅರ್ಜಿ ಸಲ್ಲಿಸಬಹುದು.
ಆಳಂದ ಸ್ನಾತಕೋತ್ತರ ಕೇಂದ್ರದಲ್ಲಿ ವಾಣಿಜ್ಯ, ಗಣಕ ವಿಜ್ಞಾನ, ಗಣಿತ, ಇಂಗ್ಲಿಷ್ ಹಾಗೂ ಕನ್ನಡ ವಿಭಾಗಗಳಿಗೆ ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ/ಪಿಎಚ್.ಡಿ ಜೊತೆಗೆ ನೆಟ್/ಸೆಟ್ ಅರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
ನಿಯಮಗಳ ಪ್ರಕಾರ
ಆಯ್ಕೆ ವಿಧಾನ:
ಮೆರಿಟ್ ಪಟ್ಟಿ ಸಂದರ್ಶನ ದಾಖಲೆ ಪರಿಶೀಲನೆ
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ – 600ರೂ. ಪ.ಜಾ, ಪ.ಪಂ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ – 300ರೂ.
• ಅಭ್ಯರ್ಥಿಗಳು ನಿಗದಿತ ಶುಲ್ಕವನ್ನು ವಿಶ್ವವಿದ್ಯಾಲಯದ ಅಂತರ್ಜಾಲ https://gug.ac.in/ನಲ್ಲಿ ಲಭ್ಯವಿರುವ SB Collect ಆನ್ಲೈನ್ ಲಿಂಕ್ ಮುಖಾಂತರ ಪಾವತಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ
• ಮೊದಲಿಗೆ ಅಭ್ಯರ್ಥಿಗಳು ಗುಲ್ಬರ್ಗ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ https://gug.ac.in/ ಕ್ಕೆ ಭೇಟಿ ನೀಡಿ.
• ಅಧಿಸೂಚನೆಗಳು ವಿಭಾಗದಲ್ಲಿ ನೀಡಲಾಗಿರುವ “ಅಧಿಸೂಚನೆ: 2025-26ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಅರ್ಜಿ ಆಹ್ವಾನ” ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
• ನಂತರ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ ವಿವರಗಳನ್ನು ನಮೂದಿಸಿ, ಭಾವಚಿತ್ರ, ನಿಗದಿತ ಶುಲ್ಕ ಪಾವತಿಸಿದ ಲಗತ್ತುಗಳೊಂದಿಗೆ ಶೈಕ್ಷಣಿಕ ಅರ್ಹತೆ, ಅನುಭವದ ವಿವರ, ಜಾತಿ, ವರ್ಗ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ.
• ಬಳಿಕ ದೃಢೀಕರಿಸಿದ ಪ್ರತಿಗಳನ್ನು ವಿಶ್ವವಿದ್ಯಾಲಯದ ಮುಖ್ಯ ಆವರಣ, ಕಲಬುರಗಿಯಲ್ಲಿ ವಿಭಾಗದ ಮುಖ್ಯಸ್ಥರ ಕಚೇರಿಗೆ ನವೆಂಬರ್ 7ರೊಳಗೆ ಖುದ್ದಾಗಿ/ರಜಿಸ್ಟರ್ ಅಂಚೆ ಮುಖಾಂತರ ಸಲ್ಲಿಸಬೇಕು.