ಹಿಂದೂಸ್ತಾನ್ ಏರೋನಾಟಿಕ್ಸ್ (HAL) ನಲ್ಲಿ 195 ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ (HAL) ನೇಮಕಾತಿ 2025 – ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಫಿಟ್ಟರ್, ಪ್ಲಂಬರ್ ಹಾಗೂ ಇತರೆ ಒಟ್ಟು 195 ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Highlights of Employment News
Organization Name – Hindustan Aeronautics Limited
Post Name – Apprentice
Total Vacancy – 195
Application Process – Online
Job Location – All India
ವಾಕ್ ಇನ್ ಸಂದರ್ಶನದ ಪ್ರಮುಖ ದಿನಾಂಕಗಳು:
ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಡೀಸೆಲ್ ಮೆಕಾನಿಕ್ ಹುದ್ದೆಗಳಿಗೆ – 26-05-2025 ರಂದು ಬೆಳಿಗ್ಗೆ 9 ಗಂಟೆಗೆ ಹಾಗೂ ಮಧ್ಯಾಹ್ನ 1 ಗಂಟೆಗೆ ಫಿಟ್ಟರ್, ಪ್ಲಂಬರ್, ಪೇಂಟರ್ ಹುದ್ದೆಗಳಿಗೆ ಸಂದರ್ಶನ ನಡೆಸಲಾಗುವುದು.
COPA, ಮೋಟಾರ್ ವಾಹನ ಮೆಕ್ಯಾನಿಕ್ ಹುದ್ದೆಗಳಿಗೆ 27-05-2025 ರಂದು ಬೆಳಿಗ್ಗೆ 9 ಗಂಟೆಗೆ ಹಾಗೂ ಮಧ್ಯಾಹ್ನ 1 ಗಂಟೆಗೆ ಎಲೆಕ್ನಿಷಿಯನ್, ಡ್ರಾಟ್ಸ್‌ಮನ್-ಮೆಕ್ಯಾನಿಕಲ್ ಹುದ್ದೆಗಳಿಗೆ ಸಂದರ್ಶನ ನಡೆಸಲಾಗುವುದು.
ಮೆಷಿನಿಸ್ಟ್, ರೆಫ್ರಿಜರೇಷನ್ ಮತ್ತು ಎಸಿ, ಟರ್ನರ್ ಹುದ್ದೆಗಳಿಗೆ 28-05-2025 ರಂದು ಬೆಳಿಗ್ಗೆ 9 ಗಂಟೆಗೆ ಹಾಗೂ ಮಧ್ಯಾಹ್ನ 1 ಗಂಟೆಗೆ ಡ್ರಾಟ್ಸ್‌ಮನ್-ಸಿವಿಲ್, ವೆಲ್ಡರ್ ಹುದ್ದೆಗಳಿಗೆ ಸಂದರ್ಶನ ನಡೆಸಲಾಗುವುದು.
ಶೈಕ್ಷಣಿಕ ಅರ್ಹತೆ:
ಹಿಂದೂಸ್ತಾನ್ ಏರೋನಾಟಿಕ್ಸ್ (HAL) ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು NCVT ಯಿಂದ ಮಾನ್ಯತೆ ಪಡೆದ ಆಯಾ ಟ್ರೇಡ್‌ಗಳಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.
ವಯೋಮಿತಿ:
ಹಿಂದೂಸ್ತಾನ್ ಏರೋನಾಟಿಕ್ಸ್ (HAL) ನಿಯಮಗಳ ಅನ್ವಯ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಯು SSC/10ನೇ ತರಗತಿ (70% ವೆಟೇಜ್) ಮತ್ತು ITI (30% ವೆಟೇಜ್) ಗಳಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ಆಧರಿಸಿದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್
- SSC/10ನೇ ತರಗತಿಯ ಅಂಕಗಳ ಪ್ರಮಾಣಪತ್ರ.
- ITI ಅಂಕಪಟ್ಟಿ (ಎಲ್ಲಾ ಸೆಮಿಸ್ಟರ್‌ಗಳು) ಮತ್ತು ಮೂಲ/ತಾತ್ಕಾಲಿಕ ಪ್ರಮಾಣಪತ್ರ
- ಜನನ ಪ್ರಮಾಣಪತ್ರ (SSC ಪ್ರಮಾಣಪತ್ರದಲ್ಲಿ ಜನ್ಮ ದಿನಾಂಕವನ್ನು ಉಲ್ಲೇಖಿಸದಿದ್ದರೆ)
- ಮೀಸಲಾತಿ/ಸಮುದಾಯ/ಜಾತಿ ಪ್ರಮಾಣಪತ್ರ (SC, ST, OBC, EWS, XSM, PWD/PH)
- ಅಪ್ರೆಂಟಿಸ್‌ಶಿಪ್ ಪೋರ್ಟಲ್ www.apprenticeshipindia.gov.in ನಿಂದ ಅಪ್ರೆಂಟಿಸ್ ನೋಂದಣಿ ಪ್ರತಿ.
- ಎರಡು ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು.
ಮೇಲಿನ ಎಲ್ಲಾ ಪ್ರಮಾಣಪತ್ರಗಳ ಫೋಟೋ ಪ್ರತಿ ಜೆರಾಕ್ಸ್ ಪ್ರತಿ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು www.apprenticeshipindia.gov.in ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಮತ್ತು ಅದರ ಪ್ರತಿಯನ್ನು ಸಲ್ಲಿಸಬೇಕು. ಅಭ್ಯರ್ಥಿಗಳು SSC/10ನೇ ತರಗತಿ ಪ್ರಮಾಣಪತ್ರದಲ್ಲಿ ಕಂಡುಬರುವಂತೆ ತಮ್ಮ ಹೆಸರನ್ನು ನಮೂದಿಸಬೇಕು.
ವಾಕ್-ಇನ್ ವಿಳಾಸ:
ಉತ್ಸವ ಸದನ ಸಭಾಂಗಣ, ತರಬೇತಿ ಮತ್ತು ಅಭಿವೃದ್ಧಿ ಇಲಾಖೆಯ ಹಿಂದೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಏವಿಯಾನಿಕ್ಸ್ ವಿಭಾಗ, ಬಾಲನಗರ, ಹೈದರಾಬಾದ್-500042
Important Direct Links:
Official Notification PDF | Download |
Online Application Form Link | Apply Now |
Official Website | www.hal-india.co.in |
More Updates | Karnataka Help.in |