ವಿಶ್ವದಾದ್ಯಂತ ಮೊಟ್ಟೆಗಳನ್ನು ಪ್ರೋಟೀನ್‌ಗಳ ನಿಧಿ ಎಂದು ಹೇಳಲಾಗುತ್ತದೆ. ಪ್ರಪಂಚದಾದ್ಯಂತ ಜನರು ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ. ಮೊಟ್ಟೆ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಿದ್ದಾರೆ.
ಬಹುತೇಕ ಮಂದಿ ಮೊಟ್ಟೆಯ ಹಳದಿ ಭಾಗವನ್ನು ತ್ಯಜಿಸುತ್ತಾರೆ. ಆದರೆ ನಿಮಗೆ ಮೊಟ್ಟೆಯಿಂದ ಹೆಚ್ಚಿನ ಪೋಷಕಾಂಶ ಬೇಕು ಅನ್ನೋದಾದರೆ ಮೊಟ್ಟೆಯ ಹಳದಿಭಾಗವನ್ನೂ ತಿನ್ನಬೇಕು. ಏಕೆಂದರೆ ಮೊಟ್ಟೆಯಲ್ಲಿರುವ ಹೆಚ್ಚಿನ ಪೋಷಕಾಂಶಗಳು ಅದರ ಹಳದಿ ಲೋಳೆಯಲ್ಲಿಯೇ ಹೆಚ್ಚಾಗಿರುತ್ತವೆ.
ಮೊಟ್ಟೆಯಹಳದಿ ಬಿಳಿ ಭಾಗವನ್ನೂ ತಿನ್ನೋದ್ರಿಂದ ಹೊಟ್ಟೆ ತುಂಬಿದಂತಿರುತ್ತದೆ. ಬಹಳ ಸಮಯ ಹೊಟ್ಟೆ ಹಸಿಯುವುದಿಲ್ಲ. ಹೀಗಾಗಿ ಇದನ್ನು ಡಯಟ್ನಲ್ಲಿ ಸೇರಿಸೋದು ಬಹುಮುಖ್ಯ ಎನ್ನುತ್ತಾರೆ. ನ್ಯೂಟ್ರಿಷಿಯನ್ಸ್. ಬಿ-5 ಶೇ.7, ವಿಟಮಿನ್ ಬಿ-12 ಶೇ.9 ರಂಜಕ ಶೇ.9, ವಿಟಮಿನ್ ಬಿ2 ಶೇ.15, ಸೆಲೆನಿಯಮ್ ಶೇ.22 ಇರುವುದರಿಂದ ಮೊಟ್ಟೆಯನ್ನು ತಿನ್ನುವಾಗ ಹಳದಿ ಭಾಗಕ್ಕೂ ಗಮನ ಕೊಡಿ ಸಂಪೂರ್ಣ ಪೋಷಕಾಂಶ ಹೊಂದಿ. ಒಂದು ಮಧ್ಯಮ ಗಾತ್ರದ ಮೊಟ್ಟೆ (53 ಗ್ರಾಂ) 7 ಗ್ರಾಂ ಸಂಪೂರ್ಣ ಪ್ರೋಟೀನ್ ಅನ್ನು ಹೊಂದಿರುತ್ತದೆ..
ಮೊಟ್ಟೆಯ ಪ್ರೋಟೀನ್ ಸುಲಭವಾಗಿ ಜೀರ್ಣವಾಗುತ್ತದೆ.. ಮೊಟ್ಟೆಯಲ್ಲಿ ಹಾಲಿನ ಉತ್ಪನ್ನಗಳಷ್ಟೇ ಗುಣಮಟ್ಟದ ಪ್ರೊಟೀನ್ ಇರುತ್ತದೆ.
ಹಳದಿ ಲೋಳೆಯು ದೊಡ್ಡ ಪ್ರಮಾಣದಲ್ಲಿ ಕ್ಯಾರೋಟಿನ್‌ಗಳನ್ನು ಹೊಂದಿರುತ್ತದೆ.. ಅದರಲ್ಲೂ ಇದರಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಣ್ಣಿನ ಪೊರೆಯಿಂದ ರಕ್ಷಿಸುತ್ತದೆ.
ಮತ್ತಷ್ಟು ಸುದ್ದಿಗಳಿಗಾಗಿ KarnatakaHelp.inಗೆ ಭೇಟಿ ನೀಡಿ.