ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ವತಿಯಿಂದ 2026-27ನೇ ಸಾಲಿನ ಅವಧಿಗೆ ಐಟಿಐ ಎಲೆಕ್ಟ್ರಿಷಿಯನ್ ವೃತ್ತಿ ತರಬೇತಿಗಾಗಿ ಶಿಶುಕ್ಷುಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಅವಧಿ 1 ವರ್ಷದ್ದಾಗಿದೆ. ಐಟಿಐ ಪೂರ್ಣಗೊಳಿಸಿರುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಅಪ್ರೆಂಟಿಸ್ಶಿಪ್ ಅಧಿಕೃತ ಜಾಲತಾಣ https://www.apprenticeshipindia.gov.in/ ನೋಂದಣಿಯಾಗಿ. ಹೆಸ್ಕಾಂನ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ, ʼಕಾರ್ಯನಿರ್ವಾಹಕ ಇಂಜಿನಿಯರರು(ವಿ), ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಸಿ), ಹೆಸ್ಕಾಂ, ವಿದ್ಯುತ್ ನಗರ, ಕಾರವಾರ ರಸ್ತೆ, ಹುಬ್ಬಳ್ಳಿ – 580024ʼಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಮಾ.09ರೊಳಗೆ ಸಲ್ಲಿಸಬೇಕು.
ಆನ್ಲೈನ್ ಮೂಲಕ ಅಪ್ರೆಂಟಿಸ್ ಪೋರ್ಟಲ್ ನಲ್ಲಿ ನೋಂದಾಯಿಸಲು ಕೊನೆಯ ದಿನಾಂಕ – ಮಾರ್ಚ್ 02, 2026
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮಾರ್ಚ್ 09, 2026
ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು;
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಎರಡು ವರ್ಷದ ಐ.ಟಿ.ಐ ಎಲೆಕ್ಟ್ರಿಷಿಯನ್ ಟ್ರೇಡ್ನಲ್ಲಿ ಉತ್ತೀರ್ಣರಾಗಿ NCVT/SCVT ಯಿಂದ ನೀಡಲಾದ ತಾತ್ಕಾಲಿಕ ರಾಷ್ಟ್ರೀಯ ಟ್ರೇಡ್ ಪ್ರಮಾಣಪತ್ರವನ್ನು ಹೊಂದಿರಬೇಕು.
• ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ತೆಗೆದುಕೊಂಡಿದ್ದು ಮತ್ತು ಕನ್ನಡದಲ್ಲಿ ಓದಲು ಹಾಗೂ ಬರೆಯಲು ತಿಳಿದಿರಬೇಕು.
• ಈಗಾಗಲೇ ಶಿಶುಕ್ಷು ತರಬೇತಿಯನ್ನು ಪೂರ್ಣಗೊಳಿಸಿದ ಅಥವಾ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ವಯೋಮಿತಿ:
09-03-2026 ರಂತೆ:
ಕನಿಷ್ಠ ಮಿತಿ – 25 ವರ್ಷಗಳು ಗರಿಷ್ಠ ಮಿತಿ – 30 ವರ್ಷಗಳು
ಆಯ್ಕೆ ವಿಧಾನ:
ಅರ್ಹ ಅಭ್ಯರ್ಥಿಗಳ ಶಾರ್ಟ್ಲಿಸ್ಟ್
ದಾಖಲೆ ಪರಿಶೀಲನೆ
ಸ್ಟೈಫಂಡ್:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹9,600ವರೆಗೆ ಸ್ಟೈಫಂಡ್ ಅನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ:
• ಅಭ್ಯರ್ಥಿಗಳು ಅಪ್ರೆಂಟಿಸ್ ಅಧಿಕೃತ ಜಾಲತಾಣ https://www.apprenticeshipindia.gov.in/ಕ್ಕೆ ಭೇಟಿ ನೀಡಿ.
• ನೋಂದಾಯಿತ ಇಮೇಲ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• “ಜಾಹೀರಾತು ಮಾಡಿದ ಖಾಲಿ ಹುದ್ದೆಗಳ ವಿರುದ್ಧ ಅರ್ಜಿ ಸಲ್ಲಿಸಿ” ಅಡಿಯಲ್ಲಿ “ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ” ಅನ್ನು ಹುಡುಕಿ. – “ಹೆಸ್ಕಾಂ ಅಪ್ರೆಂಟಿಸ್ ತರಬೇತಿ 2026” ಕೆಳಗೆ ನೀಡಲಾಗಿರುವ “ಅನ್ವಯಿಸು” ಆಯ್ಕೆ ಮಾಡಿ ನೋಂದಾಯಿಸಿ.
• ಇದಾದ ಬಳಿಕ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
• ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ, ಅಗತ್ಯ ದಾಖಲಾತಿಗಳು ಹಾಗೂ ಸಾಮಾನ್ಯ ಅಭ್ಯರ್ಥಿಗಳು 100ರೂ. ಮತ್ತು ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳು 50ರೂ. ಮೊತ್ತದ ಇಂಡಿಯನ್ ಪೊಸ್ಟಲ್ ಆರ್ಡರನ್ನು “ಆರ್ಥಿಕ ಸಲಹೆಗಾರರು, ಹುವಿಸಕಂನಿ, ಹುಬ್ಬಳ್ಳಿ” ಇವರ ಹೆಸರಿನಲ್ಲಿ ಖರೀದಿಸಿ ಅರ್ಜಿಯೊಂದಿಗೆ ಲಗತ್ತಿಸಿ.
• ಲಕೋಟೆಯ ಮೇಲೆ “ಎಲೆಕ್ಟ್ರಿಷಿಯನ್ ವೃತ್ತಿಯ ಶಿಶುಕ್ಷು ತರಬೇತಿಗಾಗಿ ಅರ್ಜಿ” ಎಂದು ನಮೂದಿಸಿ ಮಾರ್ಚ್ 09ರೊಳಗೆ ಈ ಕೆಳಗಿನ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪುವಂತೆ ಕಳುಹಿಸಬೇಕು.
ವಿಳಾಸ: ಕಾರ್ಯನಿರ್ವಾಹಕ ಇಂಜಿನಿಯರರು(ವಿ), ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಸಿ), ಹೆಸ್ಕಾಂ, ವಿದ್ಯುತ್ ನಗರ, ಕಾರವಾರ ರಸ್ತೆ, ಹುಬ್ಬಳ್ಳಿ – 580024