ಕಾಫಿ, ಟೀ ಅಂದರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ಕಾಫಿ ಪ್ರಪಂಚದಾದ್ಯಂತ ಪ್ರೀತಿಯ ಪಾನೀಯವಾಗಿದೆ. ಪ್ರಪಂಚದಾದ್ಯಂತ 1 ಬಿಲಿಯನ್‌ಗಿಂತಲೂ ಹೆಚ್ಚು ಜನರು ಪ್ರತಿದಿನ ಕಾಫಿ ಕುಡಿಯುತ್ತಾರೆ. ಅದು ವಿಶ್ವದ ಜನಸಂಖ್ಯೆಯ ಸುಮಾರು 12.6% ರಷ್ಟಿದೆ. ಆದರೆ ಕಾಫಿಯ ಪ್ರಮಾಣ ದೇಹಕ್ಕೆ ಅಧಿಕವಾದರೆ ಕೆಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಒಂದು ದಿನದಲ್ಲಿ ಎಷ್ಟು ಕಾಫಿ ಕುಡಿಯುವುದು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಬೇಕು.
ಕಾಫಿ ನಮ್ಮ ಆಯಾಸವನ್ನು ನಿವಾರಿಸಬಲ್ಲದು, ಮನಸ್ಥಿತಿಯನ್ನೂ ಸುಧಾರಿಸಬಲ್ಲದು. ಎಲ್ಲಾ ರುತುವಿನಲ್ಲೂ ಇಷ್ಟಪಟ್ಟು ಕುಡಿಯುವಂತಹ ಪಾನೀಯ ಇದು.ಕಾಫಿಯಲ್ಲಿ ಕೆಫೀನ್ ಎಂಬ ಉತ್ತೇಜಕವಿದೆ, ಇದು ಮೆದುಳನ್ನು ಸಕ್ರಿಯಗೊಳಿಸುತ್ತದೆ. ಏಕಾಗ್ರತೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.