ಗೃಹ ವ್ಯವಹಾರಗಳ ಸಚಿವಾಲಯದ ಸಹಾಯಕ ಗುಪ್ತಚರ ಬ್ಯುರೋದಲ್ಲಿನ ಸೆಕ್ಯೂರಿಟಿ ಅಸಿಸ್ಟೆಂಟ್(ಮೋಟಾರ್ ಟ್ರಾನ್ಸ್ಪೋರ್ಟ್) ಹುದ್ದೆಗಳ ನೇಮಕಾತಿ ಸಂಬಂಧ ಅ.30ಕ್ಕೆ ನಡೆಸಲಾದ ಶ್ರೇಣಿ-1 ಪರೀಕ್ಷೆಯ ಕೀ ಉತ್ತರವನ್ನು ನ.01 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಗುಪ್ತಚರ ಇಲಾಖೆಯಲ್ಲಿ ಒಟ್ಟು 455 ಭದ್ರತಾ ಸೆಕ್ಯೂರಿಟಿ ಅಸಿಸ್ಟೆಂಟ್ (ಮೋಟಾರ್ ಟ್ರಾನ್ಸ್ಪೋರ್ಟ್) ಹುದ್ದೆಗಳ ನೇಮಕಾತಿಗಾಗಿ ಮೊದಲ ಹಂತದಲ್ಲಿ ನಡೆಸಲಾಗುವ ಶ್ರೇಣಿ-1 ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನುಅ.30ರಂದು ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು, ಇದೀಗ ಸದರಿ ಪರೀಕ್ಷೆಯ ಕೀ ಉತ್ತರವನ್ನು ಇಲಾಖೆಯೂ IB ಅಧಿಕೃತ ಜಾಲತಾಣ https://cdn.digialm.com/EForms/configuredHtml/1258/95554/login.html ದಲ್ಲಿ ಬಿಡುಗಡೆ ಮಾಡಲಾಗಿದ್ದು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೀ ಉತ್ತರವನ್ನು ಪರಿಶೀಲಿಸಬಹುದು.
ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಕೀ ಉತ್ತರವನ್ನು ಪರಿಶೀಲಿಸಿಕೊಳ್ಳಬಹುದು. ಪ್ರತಿ 01 ಸರಿ ಉತ್ತರಕ್ಕೆ ಒಂದು ಅಂಕವನ್ನು ನೀಡಲಾಗುತ್ತದೆ ಹಾಗೂ ತಪ್ಪು ಉತ್ತರಕ್ಕೆ -1/4 ಅಂಕವನ್ನು ಕಡಿತಗೊಳಿಸಲಾಗುತ್ತದೆ.
ಕೀ ಉತ್ತರ ಪರಿಶೀಲಿಸುವ ವಿಧಾನ
• ಅಭ್ಯರ್ಥಿಗಳು ಮೊದಲಿಗೆ ಇಂಟಲಿಜೆನ್ಸ್ ಬ್ಯೂರೋ (IB) ಲಾಗಿನ್ ಜಾಲತಾಣ https://cdn.digialm.com/EForms/configuredHtml/1258/95554/login.html ಕ್ಕೆ ಭೇಟಿ ನೀಡಿ.
• ನೋಂದಣಿ ಐಡಿ, ಪಾಸ್ವರ್ಡ್ ಹಾಗೂ ಕ್ಯಾಪ್ಚ ನಮೂದಿಸಿ ಲಾಗಿನ್ ಆಗಿ.
• ನಂತರ ಗುಪ್ತಚರ ಇಲಾಖೆ (IB) ಸೆಕ್ಯೂರಿಟಿ ಅಸಿಸ್ಟೆಂಟ್ (ಮೋಟಾರ್ ಟ್ರಾನ್ಸ್ಪೋರ್ಟ್) ನೇಮಕಾತಿ 2025 ಶ್ರೇಣಿ-1 ಪರೀಕ್ಷೆಯ ಕೀ ಉತ್ತರ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ಕೀ ಉತ್ತರದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ.
• ಅಧಿಕೃತ ಕೀ ಉತ್ತರಗಳೊಂದಿಗೆ ನಿಮ್ಮ ಉತ್ತರವನ್ನು ಪರಿಶೀಲಿಸಿಕೊಳ್ಳಿ.
ಶ್ರೇಣಿ-1 ಪರೀಕ್ಷೆಯ ಬಳಿಕ ಮುಂದಿನ ಹಂತಗಳು
• ಸೆಕ್ಯೂರಿಟಿ ಅಸಿಸ್ಟೆಂಟ್ (ಮೋಟಾರ್ ಟ್ರಾನ್ಸ್ಪೋರ್ಟ್) ನೇಮಕಾತಿ 2025 ಶ್ರೇಣಿ-1 ಪರೀಕ್ಷೆಯ ಕೀ ಉತ್ತರವನ್ನು ಬಿಡುಗಡೆ ಮಾಡಿದ ನಂತರ ಮುಂದಿನ ದಿನಗಳಲ್ಲಿ ಪರೀಕ್ಷೆಯ ಅಧಿಕೃತ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು.
• ಶ್ರೇಣಿ-1 ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ನೇಮಕಾತಿಯ ಮುಂದಿನ ಹಂತಗಳಾದ ಶ್ರೇಣಿ-2( ಮೋಟಾರ್ ಮೆಕ್ಯಾನಿಸಂ, ಚಾಲನಾ ಪರೀಕ್ಷೆ ಮತ್ತು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
Important Direct Links:
IB Security Assistant (Motor Transport) Answer Key 2025 Link