South Central Railway Sports Quota Notification 2025
ದಕ್ಷಿಣ ಮಧ್ಯ ರೈಲ್ವೆಯಲ್ಲಿ 2025-26ನೇ ಸಾಲಿಗೆ ಕ್ರೀಡಾಕೋಟಾದಡಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಕೋಶ (RRC) ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ.
ವಿವಿಧ ವಿಭಾಗಗಳಲ್ಲಿ ಖಾಲಿ ಇರುವ (ಗ್ರೂಪ್ ಸಿ-21 ಹಾಗೂ ಗ್ರೂಪ್ ಡಿ – 40) ಸೇರಿದಂತೆ ಒಟ್ಟು 61 ಹುದ್ದೆಗಳಿಗೆ ಕ್ರೀಡಾ ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಮತ್ತು ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ನ.24ರೊಳಗೆ RRC SCR ಅಧಿಕೃತ ಜಾಲತಾಣ https://iroams.com/rrc_scr_sports2025/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ- ನವೆಂಬರ್ 24, 2025
ವಿಭಾಗಾವಾರು ಖಾಲಿ ಇರುವ ಹುದ್ದೆಗಳ ವಿವರ:
SCR, ಪ್ರಧಾನ ಕಚೇರಿ, ಸಿಕಂದರಾಬಾದ್ ಕೋಟಾ – 21 ಹುದ್ದೆಗಳು ಪ್ರಧಾನ ಕಚೇರಿ ಕೋಟಾ – 10 ಹುದ್ದೆಗಳು ಸಿಕಂದರಾಬಾದ್ ವಿಭಾಗ – 05 ಹುದ್ದೆಗಳು ಹೈದರಾಬಾದ್ ವಿಭಾಗ – 05 ಹುದ್ದೆಗಳು ವಿಜಯವಾಡ ವಿಭಾಗ – 05 ಹುದ್ದೆಗಳು ಗುಂಟೂರು ವಿಭಾಗ – 05 ಹುದ್ದೆಗಳು ಗುಂತಕಲ್ ವಿಭಾಗ – 05 ಹುದ್ದೆಗಳು ನಾಂದೇಡ್ ವಿಭಾಗ – 05 ಹುದ್ದೆಗಳು
• ಒಟ್ಟು 61 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
✓ ಗ್ರೂಪ್ ಡಿ ಹುದ್ದೆಗಳಿಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣ ಅಥವಾ ITI ಉತ್ತೀರ್ಣ ಅಥವಾ ತತ್ಸಮಾನ ಅರ್ಹತೆ ಅಥವಾ NCVT ಯಿಂದ ನೀಡಲಾದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ ಹೊಂದಿರಬೇಕು.
✓ ಗ್ರೂಪ್ ಸಿ ಹುದ್ದೆಗಳಿಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ 12ನೇ ತರಗತಿ ಉತ್ತೀರ್ಣ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.
**ಜೊತೆಗೆ ನಿಗದಿತ ಕ್ರೀಡೆಯಲ್ಲಿ ಸಾಧನೆ ಮಾಡಿರಬೇಕು.
ವಯೋಮಿತಿ:
ಜನವರಿ 01, 2026 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 25 ವರ್ಷಗಳು
• 02-01-2001 ಮತ್ತು 01-01-2008 (ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಕಡಿಮೆ ಅಥವಾ ಹೆಚ್ಚಿನ ವಯಸ್ಸಿನ ಸಡಿಲಿಕೆ ಅನ್ವಯಿಸುವುದಿಲ್ಲ.
ಆಯ್ಕೆ ವಿಧಾನ:
ಕ್ರೀಡಾ ಪ್ರಯೋಗ/ಫಿಟ್‌ನೆಸ್ ಪರೀಕ್ಷೆ ದಾಖಲೆ ಪರಿಶೀಲನೆ ವೈದ್ಯಕೀಯ ಪರೀಕ್ಷೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಗ್ರೂಪ್ ‘ಸಿ ಹುದ್ದೆಗಳಿಗೆ ಗ್ರೇಡ್ ಪೇ 2000/1900, ಹಾಗೂ ಗ್ರೂಪ್ ಡಿ ಹುದ್ದೆಗಳಿಗೆ 1800 (7ನೇ CPC ಪ್ರಕಾರ 5200-20200 ಪೇ ಬ್ಯಾಂಡ್‌ನಲ್ಲಿ) ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಪ.ಜಾತಿ, ಪ.ಪಂಗಡ, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ – 250ರೂ.
• ಉಳಿದ ಎಲ್ಲಾ ಅಭ್ಯರ್ಥಿಗಳಿಗೆ – 500ರೂ.
ಅರ್ಜಿ ಸಲ್ಲಿಕೆ ಹೇಗೆ?
• RRC SCR ಅಧಿಕೃತ ಜಾಲತಾಣ https://iroams.com/rrc_scr_sports2025/ಕ್ಕೆ ಭೇಟಿ ನೀಡಿ.
South Central Railway Sports Quota Notification 2025
• ಬಳಕೆದಾರರ ಹೆಸರು ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Gokak