ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ(ಐ.ಟಿ.ಬಿ.ಪಿ) ಮಹಾನಿರ್ದೇಶನಾಲಯವು ಗ್ರೂಪ್ “ಬಿ” ಹುದ್ದೆಗಳ ನೇಮಕಾತಿಗಾಗಿ ಕಿರು ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಟ್ಟು 05 ಇನ್ಸ್ಪೆಕ್ಟರ್ (ಲೆಕ್ಕಾಧಿಕಾರಿ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಡೆಪ್ಯುಟೇಶನ್ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನ.21 ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 21, 2025
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
(ಎ) i → ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯ ವೇತನ ಮ್ಯಾಟ್ರಿಕ್ಸ್‌ನ ಹಂತ-7 ರಲ್ಲಿ ಇನ್ಸ್‌ಪೆಕ್ಟರ್ (ಕಂಬಟಂಟ್ ಮಿನಿಸ್ಟರಿಯಲ್) ಅಥವಾ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯ ಉಪ-ಇನ್‌ಸ್ಪೆಕ್ಟರ್ (ಕಂಬಟಂಟ್ ಮಿನಿಸ್ಟರಿಯಲ್) ದಿಂದ ಹಂತ-6 ರಲ್ಲಿ (ರೂ. 35400-112400) ಪೇ ಮ್ಯಾಟ್ರಿಕ್ಸ್‌ನಲ್ಲಿ ಐದು ವರ್ಷಗಳ ನಿಯಮಿತ ದರ್ಜೆಯ ಸೇವೆಯಲ್ಲಿ ಇರುವವರು ಅರ್ಜಿ ಸಲ್ಲಿಸಬಹುದು.
ii → ಕೇಂದ್ರ ಸರ್ಕಾರದ ಸಚಿವಾಲಯಗಳಿಂದ ಇದೇ ರೀತಿಯ ಹುದ್ದೆಗಳನ್ನು ನಿಯಮಿತವಾಗಿ ಹೊಂದಿರುವ ಅಧಿಕಾರಿಗಳು ಅಥವಾ ಪೇ ಮ್ಯಾಟ್ರಿಕ್ಸ್‌ನಲ್ಲಿ ಹಂತ 6 ರಲ್ಲಿ(ರೂ. 35400-112400) ಐದು ವರ್ಷಗಳ ನಿಯಮಿತ ಸೇವೆಯನ್ನು ಹೊಂದಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು ಅರ್ಜಿ ಸಲ್ಲಿಸಬಹುದು.
iii → ಪೇ ಮ್ಯಾಟ್ರಿಕ್ಸ್‌ನಲ್ಲಿ ಹಂತ 6 (ರೂ. 35400-112400) ನಲ್ಲಿ ಐದು ವರ್ಷಗಳ ನಿಯಮಿತ ಸೇವೆಯನ್ನು ಹೊಂದಿರುವ ಇಲಾಖಾ ಸಹಾಯಕರು ಅರ್ಜಿ ಸಲ್ಲಿಸಬಹುದು.
(ಬಿ) ಅಭ್ಯರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಸೆಕ್ರೆಟರಿಯೇಟ್ ಟ್ರೈನಿಂಗ್ ಅಂಡ್ ಮ್ಯಾನೇಜ್ಮೆಂಟ್ ನಡೆಸುವ ಕ್ಯಾಶ್ ಅಂಡ್ ಅಕೌಂಟ್ಸ್ ಕೋರ್ಸ್‌ನಲ್ಲಿ ಯಶಸ್ವಿಯಾಗಿ ಅರ್ಹತೆ ಪಡೆದಿರಬೇಕು ಮತ್ತು ಕ್ಯಾಶ್, ಅಕೌಂಟ್ಸ್ ಮತ್ತು ಬಜೆಟ್ ಕೆಲಸದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ:
ನವೆಂಬರ್ 21, 2025 ರಂತೆ;
ಗರಿಷ್ಠ ವಯಸ್ಸಿನ ಮಿತಿ – 56 ವರ್ಷಗಳು
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 44,900-1,42,400ರೂ.ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ
• ಅಭ್ಯರ್ಥಿಗಳು ಅರ್ಹತಾ ಮಾನದಂಡಗಳು ಹಾಗೂ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡುವ ಲಿಂಕ್ – ಇಲ್ಲಿ ಕ್ಲಿಕ್ ಮಾಡಿ
• ಅರ್ಜಿಯ ಮುದ್ರಣವನ್ನು ತೆಗೆದುಕೊಂಡು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ. ಭಾವಚಿತ್ರವನ್ನು ಲಗತ್ತಿಸಿ ಜೊತೆಗೆ ಅಭ್ಯರ್ಥಿಗಳ ಬಯೋ-ಡೇಟಾದೊಂದಿಗೆ ಕಳೆದ 05 ವರ್ಷಗಳ ಅಂದರೆ 2019 ರಿಂದ 2023 ರವರೆಗಿನ ನವೀಕೃತ ACR/APAR ದಾಖಲೆಗಳು (ಪ್ರತಿ ಪುಟದ ದೃಢೀಕೃತ ಪ್ರತಿಗಳು), DE/ವಿಜಿಲೆನ್ಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಮತ್ತು ಸಮಗ್ರತಾ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಕೆಳಗಿನ ವಿಳಾಸಕ್ಕೆ ನವೆಂಬರ್ 21ರೊಳಗೆ ತಲುಪುವಂತೆ ಕಳುಹಿಸಬೇಕು.