ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (IBPS) ಸ್ಪೆಷಲಿಸ್ಟ್ ಆಫೀಸರ್ ಕೇಡರ್ (SO) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ನಲ್ಲಿ ಸ್ಪೆಷಲಿಸ್ಟ್ ಆಫೀಸರ್ ಕೇಡರ್ (SO) ಹುದ್ದೆಗಳಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ನೇಮಕಾತಿಯಲ್ಲಿ IT ಅಧಿಕಾರಿ, ಕೃಷಿ ಕ್ಷೇತ್ರ ಅಧಿಕಾರಿ, ರಾಜಭಾಷಾ ಅಧಿಕಾರಿ, ಕಾನೂನು ಅಧಿಕಾರಿ, HR/ ಪರ್ಸನಲ್ ಅಧಿಕಾರಿ ಮತ್ತು ಮಾರ್ಕೆಟಿಂಗ್ ಅಧಿಕಾರಿಯಂತಹ ಸ್ಪೆಷಲಿಸ್ಟ್ ಅಧಿಕಾರಿಗಳ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು IBPS ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪ್ರಿಲಿಮ್ಸ್ ಹಾಗೂ ಮೇನ್ಸ್ ಲಿಖಿತ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ವಿವಿಧ ಪದವಿ / ಸ್ನಾತಕೋತ್ತರ ಪದವಿ ಪಾಸ್ ಮಾಡಿದವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್ ಸೈಟ್ https://www.ibps.in ಭೇಟಿ ನೀಡಿ ಆಗಸ್ಟ್ 21ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. IBPS SO 2024 ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.
Shortview of IBPS SO Recruitment 2024
Institute Name – Institute of Banking Personnel Selection (IBPS) Post Name – CRP Specialist Officers Total Vacancy – 896 Application Process: Online Place of Employment – All India(Karnataka)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್, 01 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್, 28, 2024
ಪ್ರಿಲಿಮ್ಸ್ ಪರೀಕ್ಷೆಯ ದಿನಾಂಕ – ನವೆಂಬರ್ 9 ,2024
ಮುಖ್ಯ ಪರೀಕ್ಷೆಯ ದಿನಾಂಕ – ಡಿಸೆಂಬರ್ 14, 2024
ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನದ ದಿನಾಂಕ – ಜನವರಿ/ಫೆಬ್ರವರಿ 2025
IBPS SO ಹುದ್ದೆಗಳಿಗೆ ಇರಬೇಕಾದ ಅರ್ಹತೆಗಳು:
ಐಟಿ ಅಧಿಕಾರಿ ಹುದ್ದೆಗಳಿಗೆ(I.T. Officer) – B.Tech (CS/ IT/ ECE) ಅಥವಾ ECE/ CS/ IT ಅಥವಾ ಪದವಿಯಲ್ಲಿ PG + DOEACC ‘B’
ಕೃಷಿ ಕ್ಷೇತ್ರ ಅಧಿಕಾರಿ (AFO) ಹುದ್ದೆಗಳಿಗೆ – ಕೃಷಿ ತತ್ಸಮಾನ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ.
ರಾಜಬಾಷಾ ಅಧಿಕಾರಿ ಹುದ್ದೆಗಳಿಗೆ – ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಪದವಿ ಪಡೆದುಕೊಂಡಿರಬೇಕು.
ಕಾನೂನು ಅಧಿಕಾರಿ ಹುದ್ದೆಗಳಿಗೆ– ಕಾನೂನಿನಲ್ಲಿ ಬ್ಯಾಚುಲರ್ ಪದವಿ ಮತ್ತು ಬಾರ್ ಕೌನ್ಸಿಲ್‌ನೊಂದಿಗೆ ನೋಂದಣಿ ಆಗಿರಬೇಕು.
ಮಾನವ ಸಂಪನ್ಮೂಲ / ವೈಯಕ್ತಿಕ ಅಧಿಕಾರಿ ಹುದ್ದೆಗಳಿಗೆ - ಸಿಬ್ಬಂದಿ ನಿರ್ವಹಣೆ / HR / HRD / MSW / ಸ್ನಾತಕೋತ್ತರ ಪದವಿ / PG ಡಿಪ್ಲೋಮಾ.