ಬಾಂಬೆ ಭಾರತೀಯ ತಂತ್ರಜ್ಞಾನ ಸಂಸ್ಥೆ(IITB)ಯಲ್ಲಿ ವಿವಿಧ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ತಾಂತ್ರಿಕ ಅಧೀಕ್ಷಕ(09), ತಾತ್ಕಾಲಿಕ ಪೂರ್ವ ಪ್ರಾಥಮಿಕ ಶಿಕ್ಷಕ(02), ಜೂನಿಯರ್ ತರಬೇತಿ ಪಡೆದ ಪದವೀಧರ ಶಿಕ್ಷಕ(04), ತಾಂತ್ರಿಕ ಅಧಿಕಾರಿ(02), ಜೂನಿಯರ್ ಲ್ಯಾಬ್ ಸಹಾಯಕ(01), ಜೂನಿಯರ್ ಎಂಜಿನಿಯರ್(01) ಸೇರಿದಂತೆ ಇತರೆ ಒಟ್ಟು 19 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಕೇಲವು ಹುದ್ದೆಗಳನ್ನು ಶಾಶ್ವತ ಆಧಾರ, ಇನ್ನೂ ಕೇಲವು ಹುದ್ದೆಗಳ ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡಿಕೊಳ್ಳಿದೆ. ಸದರಿ ಹುದ್ದೆಗಳಿಗಿರುವ ಅರ್ಹತಾಮಾನದಂಡಗಳನ್ನು ಅಧಿಸೂಚನೆಯಲ್ಲಿ ಪರಿಶೀಲಿಸಿ ಹಾಗೂ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಅಧಿಕೃತ ಜಾಲತಾಣದ ಲಿಂಕ್ https://ep.iitb.ac.in/jobsearchಗೆ ಭೇಟಿ ನೀಡಿ, ಮಾ.16 ರೊಳಗೆ ಅರ್ಜಿ ಸಲ್ಲಿಸಬಹುದು.
ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಫೆಬ್ರವರಿ 17, 2026
ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ – ಮಾರ್ಚ್ 16, 2026
ಶೈಕ್ಷಣಿಕ ಅರ್ಹತೆ;
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಐಟಿಐ/ ಡಿಪ್ಲೊಮಾ/ ಪದವಿ/ ಬಿ.ಟೆಕ್./ಬಿ.ಇ/ಎಂ.ಎಸ್ಸಿ, ಎಂ.ಟೆಕ್/ಎಂ.ಇ, ಬಿ.ಎಡ್/ DECEd/ECCEd ಪೂರ್ಣಗೊಳಿಸಿರಬೇಕು.
ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ ಅಭ್ಯರ್ಥಿಗಳು ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
• ತಾಂತ್ರಿಕ ಅಧೀಕ್ಷಕರು, ಜೂನಿಯರ್ ತರಬೇತಿ ಪಡೆದ ಪದವೀಧರ ಶಿಕ್ಷಕರು ಹಾಗೂ ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 32 ವರ್ಷಗಳು
• ತಾತ್ಕಾಲಿಕ ಪೂರ್ವ ಪ್ರಾಥಮಿಕ ಶಿಕ್ಷಕರು ಹಾಗೂ ಜೂನಿಯರ್ ಲ್ಯಾಬ್ ಸಹಾಯಕ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 27 ವರ್ಷಗಳು
• ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು
ವಯೋಮಿತಿ ಸಡಿಲಿಕೆ: ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ಪ್ರಕ್ರಿಯೆ;
ಅರ್ಜಿಗಳ ಪರಿಶೀಲನೆ/ಸ್ಕ್ರೀನಿಂಗ್
ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ
ಸಂಬಳ:
• ತಾಂತ್ರಿಕ ಅಧೀಕ್ಷಕರು, ಜೂನಿಯರ್ ತರಬೇತಿ ಪಡೆದ ಪದವೀಧರ ಶಿಕ್ಷಕರು ಹಾಗೂ ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ₹35,400-1,12,400
• ತಾತ್ಕಾಲಿಕ ಪೂರ್ವ ಪ್ರಾಥಮಿಕ ಶಿಕ್ಷಕರು ಹಾಗೂ ಜೂನಿಯರ್ ಲ್ಯಾಬ್ ಸಹಾಯಕ ಹುದ್ದೆಗಳಿಗೆ ₹21,700-69,100
• ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ – ₹56,100-1,77,500
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ₹500 ಒಬಿಸಿ (ಎನ್ಸಿಎಲ್) ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹250 ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
ಅರ್ಜಿ ಸಲ್ಲಿಕೆ ವಿಧಾನ
• ಅಭ್ಯರ್ಥಿಗಳು IITB ಅಧಿಕೃತ ಜಾಲತಾಣ https://ep.iitb.ac.in/jobsearchಕ್ಕೆ ಭೇಟಿ ನೀಡಿ.
• “ಐಐಟಿ ಬಾಂಬೆಯಲ್ಲಿ ವೃತ್ತಿ ಅವಕಾಶಗಳು” ಶೀರ್ಷಿಕೆಯ ಕೆಳಗೆ ನೀಡಲಾಗಿರುವ *ಪ್ರಾರಂಭಿಸಿ* ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಬಳಿಕ ನೀವು ಅರ್ಜಿ ಸಲ್ಲಿಸಬಯಸುವ ಹುದ್ದೆಯ ಮೇಲೆ ಕ್ಲಿಕ್ ಮಾಡಿ, “ಅನ್ವಯಿಸು” ಲಿಂಕ್ ಮೇಲೆ ಟ್ಯಾಪ್ ಮಾಡಿ.
• ಹೊಸ ಬಳಕೆದಾರರಾಗಿದ್ದಲ್ಲಿ ಹೊಸದಾಗಿ ನೋಂದಾಯಿಸಿ ಅಥವಾ ಈಗಾಗಲೇ ನೋಂದಾಯಿಸಿದ್ದಲ್ಲಿ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ನಂತರ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ, ಅದನ್ನು ಸರಿಪಡಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.