ಯಾದಗಿರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯದ ಅಧೀನ ಆರೋಗ್ಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರು, ವೈದ್ಯಾಧಿಕಾರಿಗಳನ್ನು ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಮಹೇಶ ಬಿರಾದಾರ ಅವರು ತಿಳಿಸಿದ್ದಾರೆ.
ಮಕ್ಕಳ ತಜ್ಞ 4 ಹುದ್ದೆ, ಅರವಳಿಕೆ ತಜ್ಞ 8 ಹುದ್ದೆ, ಪ್ರಸೂತಿ ತಜ್ಞ 8 ಹುದ್ದೆ, ಫೀಜಿಶಿಯನ್ ಜಿ.ಎಮ್ 2 ಹುದ್ದೆ, ಹಿರಿಯ ವೈದ್ಯಾಧಿಕಾರಿಗಳು ಎಮ್‌ಬಿಬಿಎಸ್ 1 ಹುದ್ದೆ, ಸಾಮಾನ್ಯ ಕರ್ತವ್ಯ ವೈದ್ಯರು 3 ಹುದ್ದೆ, ಕಿವಿ ಮೂಗು & ಗಂಟಲು ತಜ್ಞ 1 ಹುದ್ದೆ ಹಾಗೂ ಚರ್ಮ ರೋಗ ತಜ್ಞ 2 ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುವುದು. ಆಕ್ತರು ಏ.16ರ ಒಳಗೆ ಅರ್ಜಿ ಸಲ್ಲಿಸಬೇಕು.
ತಜ್ಞ ವೈದ್ಯರಿಗೆ ₹1,00,000 ಗಳ ಹಾಗೂ ವೈದ್ಯಾಧಿಕಾರಿಗೆ ₹60,000ಗಳ ಮಾಸಿಕ ವೇತನ ನಿಗದಿಪಡಿಸಲಾಗಿದೆ.
ಒಂದು ವೇಳೆ ಈ ಹುದ್ದೆಗಳು ಭರ್ತಿಯಾಗದಿದ್ದಲ್ಲಿ ಪ್ರತಿ ಗುರುವಾರ ಹುದ್ದೆ ಭರ್ತಿಯಾಗುವವರೆಗೆ ನೇರ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ. 9449843067, 9008281552ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ಮಾಹಿತಿಗಾಗಿ KarnatakaHelp.inಗೆ ಭೇಟಿ ನೀಡಿ.